#OpenPoetry ತಿರುತಿರುಗಿ ನೋಡೋ ನಿನ್ನ ವದನ ವದನದೊಳು ಮಿಂಚೋ ಆ ನಯನ ಕಿಡಿಗೇಡಿ ಕುಡಿಹುಬ್ಬಿನ ಆ ಕಣ್ಸನ್ನೆ ಜೋರಾಯಿತು ಎದೆಬಡಿತ ನೋಡುತ ನಿನ್ನನ್ನೆ (೧) ಮೂಗುತಿಯಲಿ ಮೆರೆಯೋ ಮುತ್ತಿನ ಮಣಿ ನಾನೇನಾ ಅಧರಾಳದಿ ಮಿಂಚೋ ಚಿನ್ನದ ಧಣಿ ನತ್ತಿನ ಮತ್ತಲಿ ನಾ ತೇಲಾಡಿ ತೇಲಾಡಿ ಹಾರಾಡುತಿರುವೆ ಬಾನಾಡಿಗಳ ಒಡನಾಡಿ (೨) ಕೇಶಗರಿಗಳು ತಂಗಾಳಿಗೆ ಬೀಸುತ ಚಾಮರವ ರಂಗೇರಿಸಿವೆ ಚೆಲುವಿನ ವದನದ ಸೌಂದರ್ಯವ ಕುದುರೆ ಬಾಲಕೆ ಮಾಡುವವು ಪೈಪೋಟಿ ಸುಳಿಯಬೇಡ ನೀ ಅತ್ತಿತ್ತ ಕೂದಲನು ಕಟ್ಟಿ (೩) ಗಲ್ಲವ ಗಿಲ್ಲುತ ಹೇಳುವೆ ನಂಗೆ ನೀ ತುಂಟ ಸದಾ ರಿಂಗಣಿಸುತಿದೆ ಹೖದಯದಿ ನಿನ ಕಂಠ ಸರಸರನೆ ಬಂದು ಕಿಲಕಿನೆ ನೀ ನಕ್ಕು ಕವಿಯಾಗಲು ಕೊಡುತೀಯ ಎಗ್ಗಿಲ್ಲದೆ ಕುಮ್ಮಕ್ಕು (೪) ಸಂಚಾರಿ ನಾನಿರಲು ನನ ಪಾಡಿಗೆ ಬೇಕಿತ್ತ ಅಪ್ಪುಗೆ ಈ ಬಡಪಾಯಿಗೆ ಉತ್ತರವಿರದ ಪ್ರಶ್ನೆಗಳದೇ ಅಬ್ಬರ ಕಾಯುವೆ ಸಮಯಕೆ ಕೊಡಲಿದೆ ಉತ್ತರ (೫) ಶಿವಪುಷ್ಪ ಸಂಜಾತ ✊ #ಕನ್ನಡ #ಪದ್ಯ #ಕನ್ನಡಕವಿತೆ #ಕವಿ #ಕವಿಮನಸು #kannadapoem #love #dreamgirl #lovepoem