೦೧ ಕೊರಗಿದರು ಅವರೆಷ್ಟು ಧನವಂತರ್ , ಇವರೆಷ್ಟು ಬಲವಂತರ್ | ಅವರೆಷ್ಟು ಯಶವಂತರ್ ಎನುವ ಕರುಬಿನಲಿ || ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು | ಶಿವನಿಗೆ ಕೃತಜ್ಞತೆಯೆ?-ಮಂಕುತಿಮ್ಮ || ಅರ್ಥ:- ಅನ್ಯರು ಎಷ್ಟು ಹಣವಂತರು, ಎಷ್ಟು ಬಲವಂತರು ಎಷ್ಟು ಕೀರ್ತಿವಂತರು ಎಂದು ನಿನ್ನತನ ನೀನರಿಯದೆ ಮಾತ್ಸರ್ಯದಿಂದಕೊರಗಬೇಡ.ಅದು ದೇವರಿಗೆ ಎಸಗುವ ಅಪಚಾರವಾದೀತು. ಪ್ರಯತ್ನವಿದ್ದಷ್ಟೇ ಪ್ರಾಪ್ತಿಯೇ ಹೊರತು ನೆರೆ ಹೊರೆಯನ್ನು ಸಹೊದ್ಯೋಗಿಗಳನ್ನು ನೋಡಿ ಕೊರಗಿದರೆ ಇದ್ದ ತೃಪ್ತಿಯನ್ನು ಕಳೆದುಕೊಂಡು ಹಲುಬಬೇಕಾದೀತು. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #OneSeason