Nojoto: Largest Storytelling Platform

*ಕೊಂದ ಜಾಗದಲ್ಲೇ* ಕೊಂದ ಜಾಗದಲ್ಲೇ ಕೊಂದುಬಿಟ್ಟರು ಕೊಲೆಗ

*ಕೊಂದ ಜಾಗದಲ್ಲೇ*

ಕೊಂದ ಜಾಗದಲ್ಲೇ 
ಕೊಂದುಬಿಟ್ಟರು
ಕೊಲೆಗೆ ಕೊಲೆ ಉತ್ತರವಂತಲ್ಲ
ವಿರೋಧಿಸುವವರು 
ವಿರೋಧಿಸಿಕೊಳ್ಳಲಿ
ಸತ್ತವರು ಉತ್ತಮರೇನಲ್ಲ

ಅಮಾಯಕಿಯ ಕರೆದೊಯ್ದು 
ಅಮಾನುಷವಾಗಿ ಹತ್ಯೆಗೈದ
ಇವರೇನು ಮನುಷ್ಯರಲ್ಲ
ನೊಂದವರ ಕೂಗಿಗೆ 
ಇಷ್ಟು ತ್ವರಿತ ಶಿಕ್ಷೆ ನೀಡಿದ
ಆರಕ್ಷಕರಿಗೆ ಧನ್ಯವಾದ ಹೇಳಿರೆಲ್ಲ

ತಪ್ಪೇ ಮಾಡದ ಅವಳಿಗೆ
ಶಿಕ್ಷೆ ನೀಡಿದ ಆ ತಪ್ಪಿಗೆ 
ಕಾಮುಕರಿಗೆ ಬಂದೂಕಿನ ಉತ್ತರ 
ಅಪರಾಧಿ ಎಂದು ಗೊತ್ತಾಗಿ
ಅಪರಾಧ ನಡೆದಲ್ಲೇ ನೀಡಿದ
ನ್ಯಾಯ ಕಂಡು ಕೆಲವರಾಗಿಹರು ತತ್ತರ


ಎಲ್ಲೆಡೆ ಇಂತಹ ಶಿಕ್ಷೆ
ಅಧಿಕಗೊಳ್ಳಲಿ ಮುಂದೆ 
ಅಮಾಯಕಿಯರು ಧೈರ್ಯದಿ ಓಡಾಡಲಿ
ಕಾಮುಕರ ದಂಡಿಸಿ ಅವರ 
ನರ ಕಿತ್ತು ಹಿಂಸಿಸೋ ಬದಲು
ನಿಂತ ಜಾಗದಲ್ಲೇ ತೀರ್ಪಿತ್ತವರ ಅಭಿನಂದಿಸಲಿ

0359ಪಿಎಂ06122019
*ಅಮು ಭಾವಜೀವಿ ಮುಸ್ಟೂರು* #ಕೊಂದೇ #ಬಿಟ್ಟರು
*ಕೊಂದ ಜಾಗದಲ್ಲೇ*

ಕೊಂದ ಜಾಗದಲ್ಲೇ 
ಕೊಂದುಬಿಟ್ಟರು
ಕೊಲೆಗೆ ಕೊಲೆ ಉತ್ತರವಂತಲ್ಲ
ವಿರೋಧಿಸುವವರು 
ವಿರೋಧಿಸಿಕೊಳ್ಳಲಿ
ಸತ್ತವರು ಉತ್ತಮರೇನಲ್ಲ

ಅಮಾಯಕಿಯ ಕರೆದೊಯ್ದು 
ಅಮಾನುಷವಾಗಿ ಹತ್ಯೆಗೈದ
ಇವರೇನು ಮನುಷ್ಯರಲ್ಲ
ನೊಂದವರ ಕೂಗಿಗೆ 
ಇಷ್ಟು ತ್ವರಿತ ಶಿಕ್ಷೆ ನೀಡಿದ
ಆರಕ್ಷಕರಿಗೆ ಧನ್ಯವಾದ ಹೇಳಿರೆಲ್ಲ

ತಪ್ಪೇ ಮಾಡದ ಅವಳಿಗೆ
ಶಿಕ್ಷೆ ನೀಡಿದ ಆ ತಪ್ಪಿಗೆ 
ಕಾಮುಕರಿಗೆ ಬಂದೂಕಿನ ಉತ್ತರ 
ಅಪರಾಧಿ ಎಂದು ಗೊತ್ತಾಗಿ
ಅಪರಾಧ ನಡೆದಲ್ಲೇ ನೀಡಿದ
ನ್ಯಾಯ ಕಂಡು ಕೆಲವರಾಗಿಹರು ತತ್ತರ


ಎಲ್ಲೆಡೆ ಇಂತಹ ಶಿಕ್ಷೆ
ಅಧಿಕಗೊಳ್ಳಲಿ ಮುಂದೆ 
ಅಮಾಯಕಿಯರು ಧೈರ್ಯದಿ ಓಡಾಡಲಿ
ಕಾಮುಕರ ದಂಡಿಸಿ ಅವರ 
ನರ ಕಿತ್ತು ಹಿಂಸಿಸೋ ಬದಲು
ನಿಂತ ಜಾಗದಲ್ಲೇ ತೀರ್ಪಿತ್ತವರ ಅಭಿನಂದಿಸಲಿ

0359ಪಿಎಂ06122019
*ಅಮು ಭಾವಜೀವಿ ಮುಸ್ಟೂರು* #ಕೊಂದೇ #ಬಿಟ್ಟರು