Nojoto: Largest Storytelling Platform

White ಸಂಜೆಗತ್ತಲಾಗಲು ಇನ್ನೂ ಹೊತ್ತಿತ್ತು. ಗಿರಿಯಂಚಿನಲಿ

White ಸಂಜೆಗತ್ತಲಾಗಲು ಇನ್ನೂ ಹೊತ್ತಿತ್ತು. ಗಿರಿಯಂಚಿನಲಿ ಗೆಳೆಯನೊಡನೆ ಅವಳು ಕಳೆಯುತ್ತಿದ್ದ ಸಮಯವದು ಗೊತ್ತಿಲ್ಲದ ಒಂದು ಹಿತವಾದ ಅನುಭೂತಿಯನ್ನು ಅವರಿಬ್ಬರ ಮನದಲ್ಲಿ ಮೂಡಿಸಿತ್ತು.... ಆ ಸವಿ ಸಮಯದ ಹಿತದ ಜೊತೆಗೆ ಇನಿಯನ ಸಂಗವದು ಮನದಲ್ಲಿ ಪುಳಕಿತ ಭಾವನೆಗಳ ಝರಿಯನ್ನು ಹರಿಸಿತ್ತು.. ತಂಪಾಗಿ ಬೀಸುತ್ತಿದ್ದ ಗಾಳಿ, ಕವಿದ ಕಾರ್ಮೋಡಗಳವು ಅವಳ ಹಾಗೂ ಅವಳನಿಯನ ಮೇಲೆ ಆ ಸೂರ್ಯನ ನೋಟ ಬೀಳದಿರಲೆಂದೇ ಭಾಸ್ಕರನ ನೋಟಕ್ಕೆ ಅಡ್ಡವಾಗಿ, ಅವನ ಕಿರಣಗಳಿಗೆ ಅಡ್ಡಿಯಾಗಿ ಬಂದಂತೆ ಕಂಡಿದ್ದವು...

ಮರವೊಂದರ ಕೆಳಗೆ ಎದುರು ಬದುರಾಗಿ ಕುಳಿತಿದ್ದ ಆ ಇಬ್ಬರ ನೋಟಗಳವು ಕಣ್ಸನ್ನೆಯಲ್ಲೇ ಸಾವಿರ ಭಾವಗಳ, ನೂರಾಸೆಗಳ ಉಲಿಯುತಿರುವಾಗಲೇ, ಅವನ ನೋಟದ ತೀಕ್ಷ್ಣತೆಯನ್ನು ತಾಳಲಾರದ ಸುಕೋಮಲೆಯವಳು ನಾಚಿ ತಲೆ ಬಾಗಿಸಿದಳು... ಅವಳ ಇನಿಯ ತನ್ನ ಕೈ ಚಾಚಿ ಅವಳ ಗಲ್ಲವನ್ನು ಹಿಡಿದು, ಏಕೆ?? ಈ ನಾಚಿಕೆ...‌ ನಾ ಮಾತನಾಡಲೇ ಇಲ್ಲ ನಿನಗೆ ನಾಚಿಕೆಯೇತಕೆ??? ಮೌನದಿ ನಾನಿರುವಾಗ ನನ್ನ ನೋಟಕ್ಕೆ ನೀ ನಾಚಿದರೆ, ನಾ ಸವಿ ಮಾತುಗಳನ್ನೇನಾದರೂ ಆಡಿದರೆ ಹೇಗೆಂದು ಅವಳನ್ನು ಕೇಳಿದನು...

ಇನಿಯನ ಪ್ರಶ್ನೆಗೆ ಉತ್ತರ ಹೇಳುವ ಮನಸ್ಸಿದ್ದರೂ ಕೂಡಾ ನಾಚಿಕೆಯೆಂಬ ನಗವನ್ನು ಧರಿಸಿದ್ದ ಮಂದಹಾಸಿನಿ ಭಾಮೆಯು ಏನು ಹೇಳಲಾರದೆ ಮುಗಳು ನಗೆಯೊಂದನ್ನು ತೋರಿ, ಅಲ್ಲಿಂದ ಎದ್ದು ಮರದ ಬಳಿ ಹೋಗಿ ನಿಂತು, ಇನ್ನೊಂದು ದಿಕ್ಕಿನೆಡೆ ಕಂಡ ಗಿರಿ ಶಿಖರದ ಆ ಸುಂದರ ಪ್ರಕೃತಿಯ ರಮಣೀಯತೆಯ ಕಡೆಗೆ ನೋಟ ನೆಟ್ಟಳಾದರೂ, ಇನಿಯ ತನ್ನ ಬಳಿ ಬರುವನೇನೋ ಎಂದು ಅವಳ ಹಿನ್ನೋಟ ಬೆನ್ನೋಟವಾಗಿ ನೋಡುವಾಗಲೇ, ತಿರುಗಿ ನೋಡುವ ಭಾವ ಮನದಲ್ಲಿ ಮೂಡಿದ್ದರೂ ಕೂಡಾ ಹಿಂದೆ ತಿರುಗಿ ನೋಡದೆ, ತನ್ನ ಮನದ ಆಸೆ ಹೇಳದೆ ಎದುರಲ್ಲಿದ್ದ ಸೌಂದರ್ಯದ ಸವಿಯನ್ನು ಅನುಭವಿಸುತಿರುವ ಹಾಗೆ ನಿಂತಳು...

ಆದರೆ ಅವಳ ಮನದ ಆಸೆಯ ಹಕ್ಕಿಯು ಹಾರಿ ಅವಳಿನಿಯನ‌ ಕಿವಿಯಲಿ ಅವಳ ಭಾವ ಲಹರಿಯನ್ನು ಉಲಿಯುತೇನೋ ಎಂಬಂತೆ ಕುಳಿತವನು ಎದ್ದು ಅವಳತ್ತ ಹೆಜ್ಜೆ ಹಾಕುವಾಗಲೇ, ಅವಳ ಯೌವ್ವನ ಗಿರಿ ಶಿಖರಗಳ ಹಿಂದೆ ಅಡಗಿದ್ದ ಹೃದಯದ ನಾದವು ದುಪ್ಪಟ್ಟಾಗಿರುವಾಗಲೇ, ಅವನ ಗಡುಸಾದ ಕೈ, ನುಣ್ಣನೆಯ ನುಣುಪಾದ ಅವಳ ನಡುವನ್ನು ಬಳಿಸಿ, ಸೆಳೆದ ಬಲಕೆ ಮನೋಹರಿಯು ಹಿಂದೆ ತಿರುಗಿದಳಾಗ....‌

ಕಣ್ಣು ನೆಲದ ಕಡೆ, ಹಾರಿದ ಮುಂಗುರುಳು ಬೇಡ ಬೇಡ ನಾಚಿಕೆ ನನ್ನ ಬಿಡು ಎಂಬಂತೆ ಅತ್ತ ಇತ್ತ ಅಲುಗಾಡುವಾಗಲೇ, ಕಣ್ಣ ರೆಪ್ಪೆ ಗಳು ಬಡಿದು ಅವನ ಅಪ್ಪುಗೆಗೆ ಒಪ್ಪಿಗೆ ಕೊಟ್ಟಂತೆ ಸೂಚಿಸಿರಲು, ದೇಹವದು ಕಂಪಿಸಿ ಆ ಜುಮ್ಮೆನ್ನುವ ಅನುಭವದ ತಲ್ಲಣವ ಸಾರಿ ಹೇಳುತಿರೆ, ಅದರಗಳು ಮಧುರಾನುಭೂತಿಗೆ ತವಕಿಸುತಿವೆಯೇನೋ ಎಂಬಂತೆ ಸಣ್ಣಗೆ ಅದುರಿರಲು, ಇನಿಯನ ಬಿಗಿಯಪ್ಪುಗೆ ಅವಳನ್ನು ಬಂಧಿಸಿ ಬಿಟ್ಟಿತು... ಅವನ ಆ ಬಾಹು ಬಂಧನದಲ್ಲಿ ಕರಗಿ ನೀರಾಗಿ ಅಲ್ಲಿಂದ ಹರಿದ ಆ ಪ್ರಕೃತಿಯ ದೇವಿಯನು ಹಿಡಿಯಲು ಹೊರಟ ಪುರುಷನು ಅವಳ ಹಿಂದೆ ತಾನು ಓಡಲಾರೆ ಎಂದು ಅರಿತು ಎಲ್ಲೇ ಹರಿದರೂ ಕಡೆಗೆ ಅವಳು ಬಂದು ಸೇರುವ ಗಮ್ಯ ತಾನಾಗಿ ಸಾಗರನ ರೂಪವನು ತಳೆದು ನಿಂತು ಅವಳ ಆಗಮನಕೆ ಕಾಯುವಾಗಲೇ,

ಗಿರಿ ಶಿಖರಗಳಿಂದ ಹರಿದು, ಭೋರ್ಗರೆವ ನದಿಯಾಗಿ, ಕವಲೊಡೆದು ವಿವಿಧ ಹೆಸರುಗಳಲಿ ತಾನಾಗಿ, ತನ್ನ ಇನಿಯನ ಕಡೆಗೆ ಧುಮ್ಮಿಕುವ ಜಲಧಾರೆಯಾಗಿ ಬಂದ ಆ ಸುಕುಮಾರಿ ಚೆಲುವೆ ಕಡೆಗೆ ಸಾಗರನಲ್ಲಿ ಬೆರೆತು ಭಾವವಾದಳು, ಪ್ರೇಮಕಾವ್ಯದ ರಸಧಾರೆಯಾದಳು.....

©Yakshitha #GoodMorning love story

yakshitha7149

Yakshitha

New Creator