Nojoto: Largest Storytelling Platform

ನಮ್ಮ ಶಿರಸಿ ಬನ್ನಿರೋ ನೋಡಬನ್ನಿರಿ ಶಿರಸಿಯ ಮಲೆನಾಡ ಹೆಬ್ಬ

ನಮ್ಮ ಶಿರಸಿ

ಬನ್ನಿರೋ ನೋಡಬನ್ನಿರಿ ಶಿರಸಿಯ
ಮಲೆನಾಡ ಹೆಬ್ಬಾಗಿಲ ತೋರಣ
ಪಡೆಯಿರೋ ತಾಯಿ ಮಾರಿಕಾಂಬೆಯ ದರುಶನ (ಪ)

ಮುಗಿಲ ಚುಂಬಿಸೋ ಕಾನನ
ಜುಳು ಜಲಧಾರೆಯ ಸಿಂಚನ
ಪಾವನವಾಯಿತು ಜೀವನ
ಶಿರಸಿಯೇ ನನ್ನ ಬೃಂದಾವನ(೧)

ಕಲೆಗಳ ತವರು ಸಂಸ್ಕೃತಿ ಸೆರಗು
ಹೃದಯವಂತರ ನೆಲೆವೀಡು
ಸಹಸ್ರ ಲಿಂಗನ ನೆಲೆ ನೋಡು
ಯಾಣದ ಚಾರಣ ನೀ ಮಾಡು(೨)

ಯಕ್ಷಗಾನ ಭರತನಾಟ್ಯ ಸಂಗೀತದ ಈ ನಾಡು
ಕವಿ ದಿ. ಶ್ರೀ ರಮೇಶ ಹೆಗಡೆಯ ಪುಣ್ಯದ ನಾಡು
ಬನವಾಸಿ ಮಧುಕೇಶ್ವರನ ಕದಂಬ ನಾಡು
ಇದು ನಮ್ಮ ಹೆಮ್ಮೆಯ ಶಿರಸಿ ನೋಡು (೩)

ಸೋಂದಾ ಮಠದ ಸಿರಿ ನೋಡು
ಎಲ್ಲರನ್ನೂ ಪ್ರೀತಿಸುವ ಪುಣ್ಯ ನಾಡು
ಜಲಪಾತಗಳ ಸ್ವರ್ಗ ಕಾಣು
ಇದು ನಮ್ಮ ಉತ್ತರ ಕನ್ನಡ ನೋಡು (೪)

ತಾಯಿ ಮಾರಿಕಾಂಬೆಯ ತಿಲಕದಂತೆ ಹೊಳೆವ
ನಮ್ಮ  ಈ ಶಿರಸಿ ಕಾಣು.
ಕೈ ಮುಗಿದು ನೀ ಪಾದಾರ್ಪಣೆ ಮಾಡು

 ಮಲೆನಾಡು ಶಿರಸಿಯ ಬಗ್ಗೆ
#sirsidiaries #malenadu #kannadaquotes #kavanagalu #lovequotes #inspirationalquotes
ನಮ್ಮ ಶಿರಸಿ

ಬನ್ನಿರೋ ನೋಡಬನ್ನಿರಿ ಶಿರಸಿಯ
ಮಲೆನಾಡ ಹೆಬ್ಬಾಗಿಲ ತೋರಣ
ಪಡೆಯಿರೋ ತಾಯಿ ಮಾರಿಕಾಂಬೆಯ ದರುಶನ (ಪ)

ಮುಗಿಲ ಚುಂಬಿಸೋ ಕಾನನ
ಜುಳು ಜಲಧಾರೆಯ ಸಿಂಚನ
ಪಾವನವಾಯಿತು ಜೀವನ
ಶಿರಸಿಯೇ ನನ್ನ ಬೃಂದಾವನ(೧)

ಕಲೆಗಳ ತವರು ಸಂಸ್ಕೃತಿ ಸೆರಗು
ಹೃದಯವಂತರ ನೆಲೆವೀಡು
ಸಹಸ್ರ ಲಿಂಗನ ನೆಲೆ ನೋಡು
ಯಾಣದ ಚಾರಣ ನೀ ಮಾಡು(೨)

ಯಕ್ಷಗಾನ ಭರತನಾಟ್ಯ ಸಂಗೀತದ ಈ ನಾಡು
ಕವಿ ದಿ. ಶ್ರೀ ರಮೇಶ ಹೆಗಡೆಯ ಪುಣ್ಯದ ನಾಡು
ಬನವಾಸಿ ಮಧುಕೇಶ್ವರನ ಕದಂಬ ನಾಡು
ಇದು ನಮ್ಮ ಹೆಮ್ಮೆಯ ಶಿರಸಿ ನೋಡು (೩)

ಸೋಂದಾ ಮಠದ ಸಿರಿ ನೋಡು
ಎಲ್ಲರನ್ನೂ ಪ್ರೀತಿಸುವ ಪುಣ್ಯ ನಾಡು
ಜಲಪಾತಗಳ ಸ್ವರ್ಗ ಕಾಣು
ಇದು ನಮ್ಮ ಉತ್ತರ ಕನ್ನಡ ನೋಡು (೪)

ತಾಯಿ ಮಾರಿಕಾಂಬೆಯ ತಿಲಕದಂತೆ ಹೊಳೆವ
ನಮ್ಮ  ಈ ಶಿರಸಿ ಕಾಣು.
ಕೈ ಮುಗಿದು ನೀ ಪಾದಾರ್ಪಣೆ ಮಾಡು

 ಮಲೆನಾಡು ಶಿರಸಿಯ ಬಗ್ಗೆ
#sirsidiaries #malenadu #kannadaquotes #kavanagalu #lovequotes #inspirationalquotes
draravindnp1675

Dr Anapu

New Creator