Nojoto: Largest Storytelling Platform

ನೋಟದೊಂದಿಗೆ ಆರಂಭ ನಗುವಿನೊಂದಿಗೆ ಪರಿಚಯ ಹೆಸರು ಅರಿಯುವ ತವ

ನೋಟದೊಂದಿಗೆ ಆರಂಭ
ನಗುವಿನೊಂದಿಗೆ ಪರಿಚಯ
ಹೆಸರು ಅರಿಯುವ ತವಕ
ತಿಳಿದಾಗ ಮನದಲಿ ಪುಳಕ ||1||

ಮಾತನಾಡಲು ಕಾರಣದ ಶೋಧನೆ
ನೆನಪಾಯ್ತು ಸದ್ವಿಚಾರದ ಬೋಧನೆ
ಸಂಭಾಷಣೆಯಲ್ಲಿ ಹಾಸ್ಯದ ಮಿಶ್ರಣ
ಉದಿಸಿತು ಮನದಲಿ ಪ್ರೇಮ ಅರುಣ||2||

ವಚನದೊಂದಿಗೆ ಸಂದೇಶ ನಿರಂತರ
ಹಗಲಿರುಳು ಕಾಡುವ ನೆನಪು ಮಧುರ
ಗತಿಸಿದ ಗಂಟೆಗಳು ಕ್ಷಣದಂತೆ ಗೋಚರ
ವರುಷ ದಿನದಂತೆ ನವ ಅನುಭವಸಾರ||3||

ಸಾಗುತಿತ್ತು ಸತತ ಅನುರಾಗದ ಪಯಣ
ಹಠಾತ್ತನೆ ನಿಂತಿತು ಒಲವಿನ ಪ್ರಯಾಣ 
ಬರಲಿಲ್ಲ ಮುಂದುವರಿಯಲು ಕರೆಯು 
ಮನದ ಗೂಡಲ್ಲಿ ಕಾಡಿತು ಅಸ್ಥಿರತೆಯು||4|| ಕಾಯಬೇಕೆ?

#ಕರೆ #yqjogi #yqkannada #collab #ಪ್ರೀತಿ #amargude #collabwithjogi #YourQuoteAndMine
Collaborating with YourQuote Jogi
ನೋಟದೊಂದಿಗೆ ಆರಂಭ
ನಗುವಿನೊಂದಿಗೆ ಪರಿಚಯ
ಹೆಸರು ಅರಿಯುವ ತವಕ
ತಿಳಿದಾಗ ಮನದಲಿ ಪುಳಕ ||1||

ಮಾತನಾಡಲು ಕಾರಣದ ಶೋಧನೆ
ನೆನಪಾಯ್ತು ಸದ್ವಿಚಾರದ ಬೋಧನೆ
ಸಂಭಾಷಣೆಯಲ್ಲಿ ಹಾಸ್ಯದ ಮಿಶ್ರಣ
ಉದಿಸಿತು ಮನದಲಿ ಪ್ರೇಮ ಅರುಣ||2||

ವಚನದೊಂದಿಗೆ ಸಂದೇಶ ನಿರಂತರ
ಹಗಲಿರುಳು ಕಾಡುವ ನೆನಪು ಮಧುರ
ಗತಿಸಿದ ಗಂಟೆಗಳು ಕ್ಷಣದಂತೆ ಗೋಚರ
ವರುಷ ದಿನದಂತೆ ನವ ಅನುಭವಸಾರ||3||

ಸಾಗುತಿತ್ತು ಸತತ ಅನುರಾಗದ ಪಯಣ
ಹಠಾತ್ತನೆ ನಿಂತಿತು ಒಲವಿನ ಪ್ರಯಾಣ 
ಬರಲಿಲ್ಲ ಮುಂದುವರಿಯಲು ಕರೆಯು 
ಮನದ ಗೂಡಲ್ಲಿ ಕಾಡಿತು ಅಸ್ಥಿರತೆಯು||4|| ಕಾಯಬೇಕೆ?

#ಕರೆ #yqjogi #yqkannada #collab #ಪ್ರೀತಿ #amargude #collabwithjogi #YourQuoteAndMine
Collaborating with YourQuote Jogi
amargudge1414

Amar Gudge

Bronze Star
New Creator