ಬಂಧ ಮೋಕ್ಷಕೆ ಕಾರಣವಾದ ಕುದುರೆಯಂತೆ ಓಡುತ್ತಿರುವ ಮನಸ್ಸಿನ ನಿಗ್ರಹ ಧ್ಯಾನದಿಂದ ಸಾಧ್ಯ. ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ತಿಂಗಳಿಗೆ ಸ್ವಾಗತ. ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡುಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು. ಉದಾಹರಣೆ: ಚಂದ್ರಮುಖಿ ಇಲ್ಲಿ ಮುಖವನ್ನು ಚಂದ್ರಕ್ಕೆ ಹೋಲಿಸಲಾಗಿದೆ. ಈಗ ಮನಸ್ಸನ್ನು ಯಾವುದಕ್ಕದರೂ ಹೋಲಿಸಿ, ನಿಮ್ಮ ಕವನವನ್ನು ಮುಂದುವರಿಸಿ.