Nojoto: Largest Storytelling Platform

ಹಿಂಜರಿಯಿತು ದೀರ್ಘದಂಧಾಕಾರ ಮರೆಯಾಗುತಿಹ ಮುಗಿಲಲಿ ಇಂದಿರ ತ

ಹಿಂಜರಿಯಿತು ದೀರ್ಘದಂಧಾಕಾರ
ಮರೆಯಾಗುತಿಹ ಮುಗಿಲಲಿ ಇಂದಿರ
ತಾರೆಗಳಲಿ ತುಂಬುತಿಹುದು ತಾತ್ಸಾರ
ನಿಶಾಚರರಿಗೆಲ್ಲಾ ಉದ್ಭವವು ಬೇಸರ

ಮುಗಿಲಿನಲ್ಲಿ ಇಂಚರದ ಸಂಚಾರ
ಭಾಸ್ಕರನಿಗೆ ಚಿಲಿಪಿಲಿಯ ಸತ್ಕಾರ
ಮೂಡಣದಿ ರಂಗಿನಂದದ ಚಿತ್ತಾರ
ಗಗನದಲಿ ಕೃಷ್ಣಮೇಘದ ಸಿಂಗಾರ

ಧರಣಿಯಲ್ಲಿ ತಂಗಾಳಿಯ ಪ್ರಸಾರ
ದಿನದ ಕಾರ್ಯಕ್ಕೆ ಸಜ್ಜಾದ ಭ್ರಮರ
ಕಂಗೊಳಿಸಿಹ ಕುಸುಮಗಳ ಕೇಸರ
ಎಲ್ಲೆಡೆ ಸೂರ್ಯರಶ್ಮಿಯ ಸಂಚಾರ

ಪ್ರಕಾಶಿಸುತಿಹ ಗ್ರಹಾಧಿಪತಿ ನೇಸರ
ನಡೆಸುತಿಹನು ರವಿ ನಿತ್ಯ ಸದಾಚಾರ
ಜಗದೊಳಿತಿಗೆ ಆಗಿಹುದು ಸದ್ವಿಚಾರ
ಅರ್ಪಿಸುವೆವು ನಿತ್ಯವೂ ನಮಸ್ಕಾರ #ಶುಭೋದಯ #ಸೂರ್ಯ #ಸೂರ್ಯೋದಯ #ಕನ್ನಡ #sunrise #shayari #poetry #amargude
ಹಿಂಜರಿಯಿತು ದೀರ್ಘದಂಧಾಕಾರ
ಮರೆಯಾಗುತಿಹ ಮುಗಿಲಲಿ ಇಂದಿರ
ತಾರೆಗಳಲಿ ತುಂಬುತಿಹುದು ತಾತ್ಸಾರ
ನಿಶಾಚರರಿಗೆಲ್ಲಾ ಉದ್ಭವವು ಬೇಸರ

ಮುಗಿಲಿನಲ್ಲಿ ಇಂಚರದ ಸಂಚಾರ
ಭಾಸ್ಕರನಿಗೆ ಚಿಲಿಪಿಲಿಯ ಸತ್ಕಾರ
ಮೂಡಣದಿ ರಂಗಿನಂದದ ಚಿತ್ತಾರ
ಗಗನದಲಿ ಕೃಷ್ಣಮೇಘದ ಸಿಂಗಾರ

ಧರಣಿಯಲ್ಲಿ ತಂಗಾಳಿಯ ಪ್ರಸಾರ
ದಿನದ ಕಾರ್ಯಕ್ಕೆ ಸಜ್ಜಾದ ಭ್ರಮರ
ಕಂಗೊಳಿಸಿಹ ಕುಸುಮಗಳ ಕೇಸರ
ಎಲ್ಲೆಡೆ ಸೂರ್ಯರಶ್ಮಿಯ ಸಂಚಾರ

ಪ್ರಕಾಶಿಸುತಿಹ ಗ್ರಹಾಧಿಪತಿ ನೇಸರ
ನಡೆಸುತಿಹನು ರವಿ ನಿತ್ಯ ಸದಾಚಾರ
ಜಗದೊಳಿತಿಗೆ ಆಗಿಹುದು ಸದ್ವಿಚಾರ
ಅರ್ಪಿಸುವೆವು ನಿತ್ಯವೂ ನಮಸ್ಕಾರ #ಶುಭೋದಯ #ಸೂರ್ಯ #ಸೂರ್ಯೋದಯ #ಕನ್ನಡ #sunrise #shayari #poetry #amargude
amargudge1414

Amar Gudge

Bronze Star
New Creator