Nojoto: Largest Storytelling Platform

ಮರೆವೆನೊಂದು ದಿನ ಮರೆವೆನೊಂದು ದಿನ ಈ ದಿನವ ಬೆಚ್ಚನೆ ಹಾಸಿ

ಮರೆವೆನೊಂದು ದಿನ

ಮರೆವೆನೊಂದು ದಿನ ಈ ದಿನವ
ಬೆಚ್ಚನೆ ಹಾಸಿ ಹೊದ್ದು ಮಲಗಿದ್ದ ಹಾಸಿಗೆಯನ್ನ
ಕಾಣುತ್ತಿದ್ದ ಹೊಂಗನಸುಗಳ

ಮರೆವೆನೊಂದು ದಿನ
ಮುಂಜಾನೆಯ ಸೂರ್ಯನ ನೋಡುವುದ
ಆ ಹಕ್ಕಿಗಳ ನೀನಾದವ

ಮರೆವೆನೊಂದು ದಿನ
ಸ್ನೇಹಿತರ ಸವಿ ನುಡಿಗಳ
ಮುಂಜಾನೆಯ ಮಂಜಿನಲಿ ನಡೆವುದ

ಮರೆವೆನೊಂದು ದಿನ
ಮಳೆಯಲಿ ನೆನವುದ
ಹಳೆಯ ಕಾವಿನ ಕೊಡೆಯ

ಮರೆವೆನೊಂದು ದಿನ
ಅಮ್ಮನ ಆ ಮುತ್ತುಗಳ
ಮನೆಯವರ ಮಾತುಗಳ

ಮರೆವೆನೊಂದು ದಿನ
ನನ್ನೇ ನಾ ಮರೆತು ಏಳುವುದನ್ನ
ಇಹ ಲೋಕದ ಪರಿವಿಲ್ಲದೆ

ಮರೆವೆನೊಂದು ದಿನ 
ಈ ಜಗವನ್ನ ಎಲ್ಲವನ್ನ
ಮರೆಯುವರು ನನ್ನ
ಇವನೊಬ್ಬ ಇದ್ದನೇ..?

ಡಾ.ಅನಪು ಮರೆವೆನೊಂದು ದಿನ  #inspiration #kannada #kavana #ಕನ್ನಡ_ಬರಹಗಳು #ಕವನಗಳು #ಕವನ
ಮರೆವೆನೊಂದು ದಿನ

ಮರೆವೆನೊಂದು ದಿನ ಈ ದಿನವ
ಬೆಚ್ಚನೆ ಹಾಸಿ ಹೊದ್ದು ಮಲಗಿದ್ದ ಹಾಸಿಗೆಯನ್ನ
ಕಾಣುತ್ತಿದ್ದ ಹೊಂಗನಸುಗಳ

ಮರೆವೆನೊಂದು ದಿನ
ಮುಂಜಾನೆಯ ಸೂರ್ಯನ ನೋಡುವುದ
ಆ ಹಕ್ಕಿಗಳ ನೀನಾದವ

ಮರೆವೆನೊಂದು ದಿನ
ಸ್ನೇಹಿತರ ಸವಿ ನುಡಿಗಳ
ಮುಂಜಾನೆಯ ಮಂಜಿನಲಿ ನಡೆವುದ

ಮರೆವೆನೊಂದು ದಿನ
ಮಳೆಯಲಿ ನೆನವುದ
ಹಳೆಯ ಕಾವಿನ ಕೊಡೆಯ

ಮರೆವೆನೊಂದು ದಿನ
ಅಮ್ಮನ ಆ ಮುತ್ತುಗಳ
ಮನೆಯವರ ಮಾತುಗಳ

ಮರೆವೆನೊಂದು ದಿನ
ನನ್ನೇ ನಾ ಮರೆತು ಏಳುವುದನ್ನ
ಇಹ ಲೋಕದ ಪರಿವಿಲ್ಲದೆ

ಮರೆವೆನೊಂದು ದಿನ 
ಈ ಜಗವನ್ನ ಎಲ್ಲವನ್ನ
ಮರೆಯುವರು ನನ್ನ
ಇವನೊಬ್ಬ ಇದ್ದನೇ..?

ಡಾ.ಅನಪು ಮರೆವೆನೊಂದು ದಿನ  #inspiration #kannada #kavana #ಕನ್ನಡ_ಬರಹಗಳು #ಕವನಗಳು #ಕವನ
draravindnp1675

Dr Anapu

New Creator