Nojoto: Largest Storytelling Platform

ನಾನೆಂಬ ಶೂನ್ಯ ಬಿರುದು ಬಾವಲಿಗಳ ಬೆನ್ನತ್ತಿ ಮಾನ ಸನ್ಮಾನಗ

ನಾನೆಂಬ ಶೂನ್ಯ

ಬಿರುದು ಬಾವಲಿಗಳ ಬೆನ್ನತ್ತಿ
ಮಾನ ಸನ್ಮಾನಗಳ ಬಯಸಿ
ಆತ್ಮಪ್ರಶಂಸೆಯ ಮೋಹಕ್ಕೆ
ಸಿಲುಕಿ ಅಂಧನಾಗಿರುವೆ ನಾನು...

ನೈಜತೆಯು ಮರೆಯಾಗಿ
ಬರೀ ತೋರ್ಪಡಿಕೆಯ  
ಮುಖವಾಡದ ಬೂಟಾಟಿಕೆಯ 
ಪ್ರದರ್ಶನವಾಗುತ್ತಿದೆ ಇಂದು..

ಮನವೆಂಬ ಮಹಾ ದರ್ಪಣಕೆ 
ತಿಳಿದಿಹುದು ನನ್ನಯ ಅಸಲಿ 
ಮುಖ ಏನೆಂದು..
ಆದರೂ ತಿಳಿಯುತ್ತಿಲ್ಲ ಎನಗೆ 
ನನ್ನ ನಾ ತಿಳಿಯುವುದು ಹೇಗೆಂದು....

ಮೆಲ್ಲನೆ........
ಉಸಿರಿಸಿತು ಮನ......
ನಿನ್ನಯ ನಡೆ ನುಡಿಗಳನ್ನು
ನಿನ್ನ ಮನ ಮೆಚ್ಚುವಂತಿದ್ದರೆ ಸಾಕೆಂದು..... I am zero
ನಾನೆಂಬ ಶೂನ್ಯ

ಬಿರುದು ಬಾವಲಿಗಳ ಬೆನ್ನತ್ತಿ
ಮಾನ ಸನ್ಮಾನಗಳ ಬಯಸಿ
ಆತ್ಮಪ್ರಶಂಸೆಯ ಮೋಹಕ್ಕೆ
ಸಿಲುಕಿ ಅಂಧನಾಗಿರುವೆ ನಾನು...

ನೈಜತೆಯು ಮರೆಯಾಗಿ
ಬರೀ ತೋರ್ಪಡಿಕೆಯ  
ಮುಖವಾಡದ ಬೂಟಾಟಿಕೆಯ 
ಪ್ರದರ್ಶನವಾಗುತ್ತಿದೆ ಇಂದು..

ಮನವೆಂಬ ಮಹಾ ದರ್ಪಣಕೆ 
ತಿಳಿದಿಹುದು ನನ್ನಯ ಅಸಲಿ 
ಮುಖ ಏನೆಂದು..
ಆದರೂ ತಿಳಿಯುತ್ತಿಲ್ಲ ಎನಗೆ 
ನನ್ನ ನಾ ತಿಳಿಯುವುದು ಹೇಗೆಂದು....

ಮೆಲ್ಲನೆ........
ಉಸಿರಿಸಿತು ಮನ......
ನಿನ್ನಯ ನಡೆ ನುಡಿಗಳನ್ನು
ನಿನ್ನ ಮನ ಮೆಚ್ಚುವಂತಿದ್ದರೆ ಸಾಕೆಂದು..... I am zero