🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷 ಅರ್ಥದಲ್ಲೇನೂ ಸುಖವಿಲ್ಲ. ಅರ್ಥವಗಳಿಸಿ ಆತ್ಮಪುತ್ರರ್ಗಿರಿಸಬೇಡ. ಆರಿಗಾರೂ ಇಲ್ಲ. ಶಿವನಲ್ಲದೆ ಹಿತವರಿಲ್ಲವೆಂದರಿದು, ಶಿವನೊಡವೆಯ ಶಿವನವರಿಗೆ ಕೊಡು ಮರುಳೆ. ಅರ್ಥದಲ್ಲೇನೂ ಸುಖವಿಲ್ಲ. ಅರ್ಥವನಾರ್ಜಿಸುವಲ್ಲಿ ದುಃಖ. ಅರ್ಜಿಸಿದ ಧನವ ರಕ್ಷಿಸುವಲ್ಲಿ ದುಃಖ. ನಾಶವಾದಡೆ ದುಃಖ, ವೆಚ್ಚವಾದಡೆ ದುಃಖ. ಈ ಪರಿಯಲ್ಲಿ ಅರ್ಥದಿಂದ ಸದಾ ದುಃಖವಡೆವವರಿಗೆ ಸುಖವಿಲ್ಲೆಂದರಿಯದೆ, ಧನದರ್ಥದ ಮರವೆಯಲ್ಲಿ ಬಳಲುತ್ತಿಹ, ಮನುಜರಿಗಿನ್ನಾವ ಗತಿಯಿಲ್ಲವಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ. ✍🏻ಸ್ವತಂತ್ರ ಸಿದ್ಧಲಿಂಗೇಶ್ವರರ.ವಚನ ಬಸವ ಬೆಳಗಿನ ಶರಣು ಶರಣಾರ್ಥಿ ಗಳು ✡️✡️🙏🏻🙏🏻💐💐✡️✡️ #ರೇಮಚಿಂತನೆ #ವಚನಸಾಹಿತ್ಯ #yrqtjogi #yrqtbaba