Nojoto: Largest Storytelling Platform

ಹಣತೆ ಹಚ್ಚುವವಳು ನೀನೇ ಘನತೆ ತರುವವಳೂ ನೀನೇ ಮಮತೆ ತೋರುವವಳ

ಹಣತೆ ಹಚ್ಚುವವಳು ನೀನೇ
ಘನತೆ ತರುವವಳೂ ನೀನೇ
ಮಮತೆ ತೋರುವವಳೂ ನೀನೇ
ಶ್ರೇಷ್ಠತೆಯ ಪ್ರತಿಮೆಯೂ ನೀನೇ
ಧನ್ಯತೆಯ ಭಾವವೂ ನೀನೇ
ಸಮತೆಯ ಸ್ವರೂಪವೂ ನೀನೇ
ಕ್ಷಮತೆಯ ಪ್ರತಿರೂಪವೂ ನೀನೇ
ಆದ್ಯತೆಯ ಅನುಬಂಧವೂ ನೀನೇ
ಸೌಮ್ಯತೆಯ ಸಮಚಿತ್ತವೂ ನೀನೇ
ಜನನ ಮರಣದ ಸಾರಥಿ ನೀನೇ
ನೋವು ನಲಿವಿನ ಛಾಯೆಯೂ ನೀನೇ 
ಏಳಿಗೆ ಅವನತಿಯ ರೂವಾರಿ ನೀನೇ
ಪ್ರೀತಿಯ ಹೆಸರಾದವಳೂ ನೀನೇ
ನೀನಿಲ್ಲದೆ ಬದುಕಿಲ್ಲ ಬದುಕಿಗೆ ನೀನೇ ಎಲ್ಲ 

0359ಎಎಂ31122019 #ನೀನೇ
ಹಣತೆ ಹಚ್ಚುವವಳು ನೀನೇ
ಘನತೆ ತರುವವಳೂ ನೀನೇ
ಮಮತೆ ತೋರುವವಳೂ ನೀನೇ
ಶ್ರೇಷ್ಠತೆಯ ಪ್ರತಿಮೆಯೂ ನೀನೇ
ಧನ್ಯತೆಯ ಭಾವವೂ ನೀನೇ
ಸಮತೆಯ ಸ್ವರೂಪವೂ ನೀನೇ
ಕ್ಷಮತೆಯ ಪ್ರತಿರೂಪವೂ ನೀನೇ
ಆದ್ಯತೆಯ ಅನುಬಂಧವೂ ನೀನೇ
ಸೌಮ್ಯತೆಯ ಸಮಚಿತ್ತವೂ ನೀನೇ
ಜನನ ಮರಣದ ಸಾರಥಿ ನೀನೇ
ನೋವು ನಲಿವಿನ ಛಾಯೆಯೂ ನೀನೇ 
ಏಳಿಗೆ ಅವನತಿಯ ರೂವಾರಿ ನೀನೇ
ಪ್ರೀತಿಯ ಹೆಸರಾದವಳೂ ನೀನೇ
ನೀನಿಲ್ಲದೆ ಬದುಕಿಲ್ಲ ಬದುಕಿಗೆ ನೀನೇ ಎಲ್ಲ 

0359ಎಎಂ31122019 #ನೀನೇ