ಮುಂಜಾನೆ ಮೋಡಗಳ ಸರಿಸಿ ಮೆಲ್ಲನೆ ಬಂದ ರವಿಯು ಬೆಳ್ಳಿಚುಕ್ಕಿ ಗಳ ಬದಿಗೊತ್ತಿ ಬೆಳಕಾಯಿತು ಭೂವಿಯು ಎಳೆ ಬಿಸಿಲಿಗೆ ಮೈ ನೀಡಿ ಮರೆತವು ಜಗವ ಬೆಟ್ಟ-ಗುಡ್ಡಗಳು ವಜ್ರದಂತೆ ಮಿನುಗುತ್ತಿರುವವು ಝರಿಯ ಒಳಗಿನ ಹನಿಗಳು ಜೀರುಂಡೆ ಸದ್ದು ಅಡಗಿ ಹಕ್ಕಿಗಳ ಚಿಲಿಪಿಲಿ ಕೇಳುತ್ತಿದೆ ಮಾಮರದ ಮೇಲಿನ ಕೋಗಿಲೆ ರೆಕ್ಕೆ ಬಡಿದು, ಕನಸಿಂದ ಎಬ್ಬಿಸಿದೆ ಮುಂಜಾನೆ ಕನಸು. #yqjogi #yqbaba #yqdidi #yqquotes #yqthoughts #yqkanmani #vikas_gowda_b_k #350thquote