Nojoto: Largest Storytelling Platform

White 🌹ಎಂಥವನಿರಬೇಕ ಗೆಳೆಯ ಎಂಥವನಿರಬೇಕ 🌹 ಎಂಥವನಿರಬೇಕ

White 🌹ಎಂಥವನಿರಬೇಕ ಗೆಳೆಯ ಎಂಥವನಿರಬೇಕ 🌹

ಎಂಥವನಿರಬೇಕ ಗೆಳೆಯ ಎಂಥವನಿರಬೇಕ 
ಮೊಗವನು ನೋಡಿ ನೋವನು ಅರಿವ 
ಸಜ್ಜನನಿರಬೇಕ ಗೆಳೆಯ ಅಂಥವನಿರಬೇಕ 

ಕೈಯ ಚಾಚದೆ ಮನವನು ಓದಿ 
ನೆರವಾಗುವನಿರಬೇಕ ಗೆಳೆಯ ಅಂಥವನಿರಬೇಕ 

ಕುಚೇಲನ ಬಡತನ ಮನದಲೆ ಅರಿತ 
ಕೃಷ್ಣನಂತಿರಬೇಕ ಗೆಳೆಯ ಅಂಥವನಿರಬೇಕ 

ಸಾಯುವೆನೆಂದು ಅರಿತೂ ಕೂಡ 
ಕೌರವ ಪಕ್ಷದಿ ಯುದ್ಧವ ಮಾಡಿದ 
ಕರ್ಣನಂತಿರಬೇಕ ಗೆಳೆಯ ಅಂಥವನಿರಬೇಕ 

ಇಂತಹ ಗೆಳೆಯರು ಸಿಗುವುದೆ ಅಪೂರ್ವ 
ಒಳ್ಳೆಯ ಗೆಳೆಯರು ಸಿಗಲು ನಿಮಗೆ 
ಜೀವನ ಪಾವನ ಸುಖಮಯವಯ್ಯ 

ಗೆಳೆತನವೆಂಬುದು ಸ್ವರ್ಗದ ನಿಷ್ಕರ್ಷ 
ಭೂಮಿಯಲವರು ದೊರಕುವರಯ್ಯ 

ಎಂಥವನಿರಬೇಕ ಗೆಳೆಯ ಎಂಥವನಿರಬೇಕ//

©Amar Gudge
  #Friend