Nojoto: Largest Storytelling Platform

*ಸೋತ ಸದಾಶಯಗಳು* ಕಿತ್ತು ತಿನ್ನುತ್ತಿವೆ ಬಡವರ ರಕ್ತ ಮಾಂಸ

*ಸೋತ ಸದಾಶಯಗಳು*

ಕಿತ್ತು ತಿನ್ನುತ್ತಿವೆ ಬಡವರ
ರಕ್ತ ಮಾಂಸವನೆಲ್ಲಾ
ತೊಟ್ಟು ಹನಿಯೂ ನೆಲ ತಾಕಲು
ಬಿಡದೆ ಹೀರುತಿವೆ ಜಿಗಣಿಗಳು 

ಒಂದೆಡೆ ಕೊಟ್ಟಂತೆ ಮಾಡಿ 
ಇನ್ನೊಂದೆಡೆ ನೂರು ಕಾನೂನು ಮಾಡಿ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆದಾಡಿ 
ನಿತ್ರಾಣಗೊಂಡವನ ಹೀರಿವೆ ಸೊಳ್ಳೆಗಳು 

ಆಶ್ರಯಕೆ ಮನೆಯ ಕೊಟ್ಟು
ಕಟ್ಟಿಕೊಳ್ಳುವಷ್ಟರಲ್ಲಿ ಬರಿಗೈಯಾಗಿ 
ಕಡತಗಳ ಹಿಡಿದು ಕಛೇರಿಗಳ  ಅಲೆದು 
ನರಳುತಿಹನು ನಡುರಸ್ತೆಯಲ್ಲೇ ಕುಸಿದು 

ಉದ್ಯೋಗದ ಖಾತ್ರಿ  ಇಲ್ಲದೇ 
ಉಳ್ಳವರ ಕೈಗೆ ಹಗ್ಗ ಕೊಟ್ಟು 
ಮೂಗಿಗೆ ತುಪ್ಪ ಸವರಿಸಿಕೊಂಡು 
ಆ ಘಮಲಿನಮಲೇರಿ ಬಿದ್ದ ಗರ ಬಡಿದು

ಬಡವರ ಹೆಸರಲ್ಲಿ 
ಕೋಟಿ ಕೋಟಿ ಯೋಜನೆಗಳು
ಫಲಾನುಭವಿ ಎನಿಸಿಕೊಂಡವನಿಗೆ 
ಮಾತ್ರ ಇಲ್ಲ ಯಾವ ಪ್ರಯೋಜನೆಗಳು 

ರಾಜಕೀಯದ ಶಿಫಾರಸಿಗೆ
ಬಲಿಯಾದವು ಆಶಯಗಳು 
ಬಡವನ ಬವಣೆ ತಪ್ಪದೇ 
ಸೋತಿವೆ ಎಲ್ಲಾ ಸದಾಶಯಗಳು 

*ಅಮುಭಾವಜೀವಿ* #ಸೋತ #ಸದಾಶಯಗಳು
*ಸೋತ ಸದಾಶಯಗಳು*

ಕಿತ್ತು ತಿನ್ನುತ್ತಿವೆ ಬಡವರ
ರಕ್ತ ಮಾಂಸವನೆಲ್ಲಾ
ತೊಟ್ಟು ಹನಿಯೂ ನೆಲ ತಾಕಲು
ಬಿಡದೆ ಹೀರುತಿವೆ ಜಿಗಣಿಗಳು 

ಒಂದೆಡೆ ಕೊಟ್ಟಂತೆ ಮಾಡಿ 
ಇನ್ನೊಂದೆಡೆ ನೂರು ಕಾನೂನು ಮಾಡಿ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆದಾಡಿ 
ನಿತ್ರಾಣಗೊಂಡವನ ಹೀರಿವೆ ಸೊಳ್ಳೆಗಳು 

ಆಶ್ರಯಕೆ ಮನೆಯ ಕೊಟ್ಟು
ಕಟ್ಟಿಕೊಳ್ಳುವಷ್ಟರಲ್ಲಿ ಬರಿಗೈಯಾಗಿ 
ಕಡತಗಳ ಹಿಡಿದು ಕಛೇರಿಗಳ  ಅಲೆದು 
ನರಳುತಿಹನು ನಡುರಸ್ತೆಯಲ್ಲೇ ಕುಸಿದು 

ಉದ್ಯೋಗದ ಖಾತ್ರಿ  ಇಲ್ಲದೇ 
ಉಳ್ಳವರ ಕೈಗೆ ಹಗ್ಗ ಕೊಟ್ಟು 
ಮೂಗಿಗೆ ತುಪ್ಪ ಸವರಿಸಿಕೊಂಡು 
ಆ ಘಮಲಿನಮಲೇರಿ ಬಿದ್ದ ಗರ ಬಡಿದು

ಬಡವರ ಹೆಸರಲ್ಲಿ 
ಕೋಟಿ ಕೋಟಿ ಯೋಜನೆಗಳು
ಫಲಾನುಭವಿ ಎನಿಸಿಕೊಂಡವನಿಗೆ 
ಮಾತ್ರ ಇಲ್ಲ ಯಾವ ಪ್ರಯೋಜನೆಗಳು 

ರಾಜಕೀಯದ ಶಿಫಾರಸಿಗೆ
ಬಲಿಯಾದವು ಆಶಯಗಳು 
ಬಡವನ ಬವಣೆ ತಪ್ಪದೇ 
ಸೋತಿವೆ ಎಲ್ಲಾ ಸದಾಶಯಗಳು 

*ಅಮುಭಾವಜೀವಿ* #ಸೋತ #ಸದಾಶಯಗಳು