Nojoto: Largest Storytelling Platform

ಸಾವು ನಿಗೂಢ ಸಾವೆಂಬುದು ನಿಗೂಢ ಭೇದಿಸಲಾಗದ ನಿಲುಕಲಾರದ ರಹ

ಸಾವು ನಿಗೂಢ

ಸಾವೆಂಬುದು ನಿಗೂಢ
ಭೇದಿಸಲಾಗದ ನಿಲುಕಲಾರದ
ರಹಸ್ಯದ ಗಂಟು...
ಪುರಾಣಗಳು ಹೇಳಿವೆ
ಸಾವನ್ನು ಗೆಲ್ಲುವ ಅಮರತ್ವದ
ಅಮೃತಕ್ಕಾಗಿ ನಡೆದಿರುವ 
ಸುರ ಅಸುರರ ಹೋರಾಟಗಳು
ಆದರೂ ಸಾವು ಯಾರನ್ನು ಬಿಟ್ಟಿಲ್ಲ...

ತ್ರೇತಾಯುಗದ ಶ್ರೀ ರಾಮ 
ದ್ವಾಪರಯುಗದ ಶ್ರೀ ಕೃಷ್ಣರ
ಆಯುಷ್ಯ ಯುಗಾಂತ್ಯಕ್ಕೆ
ಮುಗಿಯಿತೆ ?? 
ಧರ್ಮ ಬೋಧಿಸಿದ 
ಬುದ್ಧ ಮಹಾವೀರ ಯೇಸು
ಮಹಮದ್ ಪೈಗಂಬರರ
ಜೀವನದ ಅಂತ್ಯವು 
ಪರಿನಿರ್ವಾಣದಿಂದಲ್ಲವೇ.... 

ಹುಟ್ಟಿದ ಮೇಲೆ ಸಾವು ಖಚಿತ
ಎಂಬುದೇ ಪರಮ ಸತ್ಯ..
ಹುಟ್ಟಿರುವುದೇ ಬದುಕಲಿಕ್ಕಾಗಿ
ಸಾವಿನ ಬಗ್ಗೆ ಯೋಚನೆ ಏಕೆ ?
ಜೀವನದ ಕುತೂಹಲ ಇರುವುದೇ
ಈ ಸಾವಿನ ಆಟದಲ್ಲಿ....
ಬರುವ ಸಾವಿಗಾಗಿ ಇರುವ ಖುಷಿಯ
ಮರೆತು ಕೊರಗುವುದೇಕೆ ??!! Ded
ಸಾವು ನಿಗೂಢ

ಸಾವೆಂಬುದು ನಿಗೂಢ
ಭೇದಿಸಲಾಗದ ನಿಲುಕಲಾರದ
ರಹಸ್ಯದ ಗಂಟು...
ಪುರಾಣಗಳು ಹೇಳಿವೆ
ಸಾವನ್ನು ಗೆಲ್ಲುವ ಅಮರತ್ವದ
ಅಮೃತಕ್ಕಾಗಿ ನಡೆದಿರುವ 
ಸುರ ಅಸುರರ ಹೋರಾಟಗಳು
ಆದರೂ ಸಾವು ಯಾರನ್ನು ಬಿಟ್ಟಿಲ್ಲ...

ತ್ರೇತಾಯುಗದ ಶ್ರೀ ರಾಮ 
ದ್ವಾಪರಯುಗದ ಶ್ರೀ ಕೃಷ್ಣರ
ಆಯುಷ್ಯ ಯುಗಾಂತ್ಯಕ್ಕೆ
ಮುಗಿಯಿತೆ ?? 
ಧರ್ಮ ಬೋಧಿಸಿದ 
ಬುದ್ಧ ಮಹಾವೀರ ಯೇಸು
ಮಹಮದ್ ಪೈಗಂಬರರ
ಜೀವನದ ಅಂತ್ಯವು 
ಪರಿನಿರ್ವಾಣದಿಂದಲ್ಲವೇ.... 

ಹುಟ್ಟಿದ ಮೇಲೆ ಸಾವು ಖಚಿತ
ಎಂಬುದೇ ಪರಮ ಸತ್ಯ..
ಹುಟ್ಟಿರುವುದೇ ಬದುಕಲಿಕ್ಕಾಗಿ
ಸಾವಿನ ಬಗ್ಗೆ ಯೋಚನೆ ಏಕೆ ?
ಜೀವನದ ಕುತೂಹಲ ಇರುವುದೇ
ಈ ಸಾವಿನ ಆಟದಲ್ಲಿ....
ಬರುವ ಸಾವಿಗಾಗಿ ಇರುವ ಖುಷಿಯ
ಮರೆತು ಕೊರಗುವುದೇಕೆ ??!! Ded