ಮಳೆಯ ಸಿಂಚನ ಬಿಸಿಲ ಬೇಗೆಗೆ ಕಾದು ಬಸವಳಿದು ಬಾಯಿತೆರೆದು ಕುಳಿತಿದ್ದ ಧರಣಿಗೆ..... ಮಳೆಯೆಂಬ ಗೆಳೆಯನ ಆಗಮನವು ನವೋತ್ಸಾಹ ಮೂಡಿಸಿತು.... ತುಂತುರು ಹನಿಗಳ ಪ್ರೋಕ್ಷಣೆ, ತೇವ-ಶಾಖದ ಆದ್ರ೯ತೆಯ ಘಮಲಿಗೆ ಒಣಗಿದ್ದ ಗರಿಕೆಯು ಚಿಗುರಿ ಹಸಿರಾಯಿತು... ಜುಳು ಜುಳು ನಾದವ ಹರಿಸುತ ಹೊರಟವು ಝರಿ ತೊರೆಗಳು, ತೂಗಿ ತೂಗಿ ಮೈದುಂಬಿದವು ತರುಲತೆಗಳು.... ಮಳೆಯೆಂಬ ಗೆಳೆಯನ ಆಗಮನವು ನವೋತ್ಸಾಹ ಮೂಡಿಸಿತು.... First Rain