ಮದುವೆಯ ಹಿಂದಿನ ದಿನ ಶಾಸ್ತ್ರದ ದಿನ ಮುಂದಿನದು ಅಡಿ ಬರಹದಲ್ಲಿ ⏬⏬⏬ ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮದುವೆಯ ದಿನ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮದುವೆ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi ನನಗೋ pp ಜಗಿಯುವ ಅಭ್ಯಾಸ. ಈಗಾಗಲೇ ಮೂರು ದಿನ ಮನೆಯಲ್ಲೇ ಕಾರ್ಯಕ್ರಮಗಳಿದ್ದಿದುರಿಂದ ಅವಕಾಶವೇ ಆಗಿರಲಿಲ್ಲ. ಮನೆ ತುಂಬಾ ಬಂಧು ಬಾಂಧವರು. ಹ್ಯಾಪ್ ಮೋರೆ ಹಾಕಿಕೊಂಡೇ ಕಲ್ಯಾಣ ಮಂಟಪಕ್ಕೆ ಹೊರಟಿದ್ದೆ. ನಿಸ್ತೇಜ ಮುಖ. ಆರತಿ ಎತ್ತುವವರು ಸಂಸಾರದ ಬಗ್ಗೆ ಈಗಲೇ ಯೋಚನೆ ಶುರುವಾಗಿದ್ಯಾ ಅಂತ ಕಿಚಾಯಿಸಿದರು. ನನ್ನ ಸಂಕಟ ಅವರಿಗೆ ಗೊತ್ತಿಲ್ಲ. ಇಲ್ಲ ಇವತ್ತೇನಾದ್ರೂ ಮಾಡಿ pp ಜಗಿಯಲೇಬೇಕು. ಇಲ್ಲಾಂದ್ರೆ ನಾಳೆ ಮುಹೂರ್ತದಲ್ಲಿ ಎಡವಟ್ಟಾಗುವುದು ಗ್ಯಾರಂಟಿ. ಶಾಸ್ತ್ರಗಳೆಲ್ಲಾ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ. ಏಕಾಂತವನ್ನು ಸಾಧಿಸಿ ನನ್ನ ಈಶನಿಗೆ ಹೇಗಾದರೂ ಮಾಡಿ pp ತಂದು ಕೊಡು ಅಂದೆ. ಅಣ್ಣ ಇಲ್ಲೆಲ್ಲೂ ಸಿಗಲ್ಲ ದೂರ ಹೋಗ್ಬೇಕು ಅಂದ. ಅದೆಲ್ಲಾ ನನಗೆ ಗೊತ್ತಿಲ್ಲ. ಬೇಕೇ ಬೇಕು ಅಂದೆ. ಸರಿ ಅವನು ಹುಡುಕಾಡಿ ತರುವಷ್ಟರಲ್ಲಿ ಮಧ್ಯರಾತ್ರಿ. ಎಲ್ಲರೂ ಒಂದೊಂದು ನಿದ್ದೆಗೆ ಜಾರಿದ್ದರು. ಒಂದು pp ಹಾಕಿದ ನಂತರವೇ ನಾನು ಲವಲವಿಕೆಯಿಂದ ಮುಂದಿನ ಕಾರ್ಯಗಳಿಗೆ ಅಣಿಯಾದದ್ದು.