Nojoto: Largest Storytelling Platform

ಕಾರ್ಯಕೆ ದಿನದ ವಿದಾಯ ಶ್ರಮಕೆ ವಿಶ್ರಾಂತಿ ಸಮಯ ರವಿಯು ಹಾಡಿ

ಕಾರ್ಯಕೆ ದಿನದ ವಿದಾಯ
ಶ್ರಮಕೆ ವಿಶ್ರಾಂತಿ ಸಮಯ
ರವಿಯು ಹಾಡಿದ ದಿನಕೆ ಮಂಗಲ
ನಿವಾರಿಸಿದ ಚಂದ್ರ ತಾಪದ ಗೊಂದಲ

ಕೆಂಪೇರಿದ ಮುಗಿಲಿನ ವದನ
ಸ್ವಾಗತಕ್ಕೆ ತಾರೆಗಳ ಆಗಮನ
ಭಾನಂಗಳದಲಿ ನಕ್ಷತ್ರಗಳು ಗೋಚರ
ಎಲ್ಲೆಲ್ಲಿಯೂ ಹೊಳಪಿನ ಬೆಳಕುಗಳ ಸಾಗರ

ಮರಳಿ ಗೂಡಿನತ್ತ ಚಿಲಿಪಿಲಿ ಧ್ವನಿ
ಶಾಂತ ಸ್ಥಿತಿಯತ್ತ ಮತ್ತೆ ಸಿದ್ಧ ಅವನಿ
ಭುವಿಯನ್ನೆ ಬದಲಿಸಿದ ವಿಶಿಷ್ಟ ವಾತಾವರಣ 
ಹೃದಯಂಗಮವಾದ ಪ್ರಕೃತಿಯ ಕ್ರೀಡಾಂಗಣ

ದಿನಕ್ಕೆ ವಿದಾಯ ಭಾವಗೀತೆ ಯುಟ್ಯೂಬ್ ಚಾನೆಲ್ "ಕವನಾಮರದಲ್ಲಿ" ನೋಡಿ ಪ್ರೋತ್ಸಾಹಿಸಿ 👇👇👇👇 #amargude #kannadaquotes #yqjogi_kannada
ಕಾರ್ಯಕೆ ದಿನದ ವಿದಾಯ
ಶ್ರಮಕೆ ವಿಶ್ರಾಂತಿ ಸಮಯ
ರವಿಯು ಹಾಡಿದ ದಿನಕೆ ಮಂಗಲ
ನಿವಾರಿಸಿದ ಚಂದ್ರ ತಾಪದ ಗೊಂದಲ

ಕೆಂಪೇರಿದ ಮುಗಿಲಿನ ವದನ
ಸ್ವಾಗತಕ್ಕೆ ತಾರೆಗಳ ಆಗಮನ
ಭಾನಂಗಳದಲಿ ನಕ್ಷತ್ರಗಳು ಗೋಚರ
ಎಲ್ಲೆಲ್ಲಿಯೂ ಹೊಳಪಿನ ಬೆಳಕುಗಳ ಸಾಗರ

ಮರಳಿ ಗೂಡಿನತ್ತ ಚಿಲಿಪಿಲಿ ಧ್ವನಿ
ಶಾಂತ ಸ್ಥಿತಿಯತ್ತ ಮತ್ತೆ ಸಿದ್ಧ ಅವನಿ
ಭುವಿಯನ್ನೆ ಬದಲಿಸಿದ ವಿಶಿಷ್ಟ ವಾತಾವರಣ 
ಹೃದಯಂಗಮವಾದ ಪ್ರಕೃತಿಯ ಕ್ರೀಡಾಂಗಣ

ದಿನಕ್ಕೆ ವಿದಾಯ ಭಾವಗೀತೆ ಯುಟ್ಯೂಬ್ ಚಾನೆಲ್ "ಕವನಾಮರದಲ್ಲಿ" ನೋಡಿ ಪ್ರೋತ್ಸಾಹಿಸಿ 👇👇👇👇 #amargude #kannadaquotes #yqjogi_kannada
amargudge1414

Amar Gudge

Bronze Star
New Creator