ಕಾರ್ಯಕೆ ದಿನದ ವಿದಾಯ ಶ್ರಮಕೆ ವಿಶ್ರಾಂತಿ ಸಮಯ ರವಿಯು ಹಾಡಿದ ದಿನಕೆ ಮಂಗಲ ನಿವಾರಿಸಿದ ಚಂದ್ರ ತಾಪದ ಗೊಂದಲ ಕೆಂಪೇರಿದ ಮುಗಿಲಿನ ವದನ ಸ್ವಾಗತಕ್ಕೆ ತಾರೆಗಳ ಆಗಮನ ಭಾನಂಗಳದಲಿ ನಕ್ಷತ್ರಗಳು ಗೋಚರ ಎಲ್ಲೆಲ್ಲಿಯೂ ಹೊಳಪಿನ ಬೆಳಕುಗಳ ಸಾಗರ ಮರಳಿ ಗೂಡಿನತ್ತ ಚಿಲಿಪಿಲಿ ಧ್ವನಿ ಶಾಂತ ಸ್ಥಿತಿಯತ್ತ ಮತ್ತೆ ಸಿದ್ಧ ಅವನಿ ಭುವಿಯನ್ನೆ ಬದಲಿಸಿದ ವಿಶಿಷ್ಟ ವಾತಾವರಣ ಹೃದಯಂಗಮವಾದ ಪ್ರಕೃತಿಯ ಕ್ರೀಡಾಂಗಣ ದಿನಕ್ಕೆ ವಿದಾಯ ಭಾವಗೀತೆ ಯುಟ್ಯೂಬ್ ಚಾನೆಲ್ "ಕವನಾಮರದಲ್ಲಿ" ನೋಡಿ ಪ್ರೋತ್ಸಾಹಿಸಿ 👇👇👇👇 #amargude #kannadaquotes #yqjogi_kannada