ಅಂತರ್ಮುಖ ಎಲ್ಲವನ್ನೂ ಬಲ್ಲೆ ನೀನು ನನ್ನೊಳಗಿನ ಹುಳುಕನ್ನು ಆದರೂ ಧೈರ್ಯ ಸಾಲುತ್ತಿಲ್ಲ ನಿಜ ಮುಖ ತೋರಲು..... ತಪ್ಪು-ಒಪ್ಪುಗಳೇನೆಂಬ ಸತ್ಯ ಗೊತ್ತಿದ್ದರೂ ಏಕೆ ಈ ಸೋಗಿನ ಮುಖವಾಡ... ಅನಿಸುತ್ತಿಲ್ಲವೇ ನಿನಗೆ ನಾನು ಗೋಮುಖ ವ್ಯಾಘ್ರನೆಂದು ಆದರೂ ಧೈರ್ಯ ಸಾಲುತ್ತಿಲ್ಲ ನೈಜವಾಗಿ ಬದುಕಲು... ಒಳಗೊಂದು-ಹೊರಗೊಂದು ದ್ವಿಮುಖಗಳ ಭಾವ.. ಇನ್ನೆಷ್ಟು ದಿನ..... ಈ ನಿನ್ನ ಗೋಸುಂಬೆ ಆಟ ಇನ್ನಾದರೂ ಧೈರ್ಯ ಮಾಡು ಮನ ಮೆಚ್ಚುವಂತೆ ಬದುಕುವೆನೆಂದು... Dual face