Nojoto: Largest Storytelling Platform

ಮಳೆಯ ಸಿಂಚನ ಬಿಸಿಲ ಬೇಗೆಗೆ ಕಾದು ಬಸವಳಿದು ಬಾಯಿತೆರೆದು

ಮಳೆಯ ಸಿಂಚನ

ಬಿಸಿಲ ಬೇಗೆಗೆ ಕಾದು
ಬಸವಳಿದು ಬಾಯಿತೆರೆದು 
ಕುಳಿತಿದ್ದ ಧರಣಿಗೆ.....
ಮಳೆಯೆಂಬ ಗೆಳೆಯನ 
ಆಗಮನವು ನವೋತ್ಸಾಹ 
ಮೂಡಿಸಿತು....

ತುಂತುರು ಹನಿಗಳ ಪ್ರೋಕ್ಷಣೆ,
ತೇವ-ಶಾಖದ ಆದ್ರ೯ತೆಯ 
ಘಮಲಿಗೆ ಒಣಗಿದ್ದ ಗರಿಕೆಯು
ಚಿಗುರಿ ಹಸಿರಾಯಿತು...

ಜುಳು ಜುಳು ನಾದವ ಹರಿಸುತ
ಹೊರಟವು ಝರಿ ತೊರೆಗಳು,
ತೂಗಿ ತೂಗಿ ಮೈದುಂಬಿದವು
ತರುಲತೆಗಳು....
ಮಳೆಯೆಂಬ ಗೆಳೆಯನ 
ಆಗಮನವು ನವೋತ್ಸಾಹ 
ಮೂಡಿಸಿತು.... First Rain
ಮಳೆಯ ಸಿಂಚನ

ಬಿಸಿಲ ಬೇಗೆಗೆ ಕಾದು
ಬಸವಳಿದು ಬಾಯಿತೆರೆದು 
ಕುಳಿತಿದ್ದ ಧರಣಿಗೆ.....
ಮಳೆಯೆಂಬ ಗೆಳೆಯನ 
ಆಗಮನವು ನವೋತ್ಸಾಹ 
ಮೂಡಿಸಿತು....

ತುಂತುರು ಹನಿಗಳ ಪ್ರೋಕ್ಷಣೆ,
ತೇವ-ಶಾಖದ ಆದ್ರ೯ತೆಯ 
ಘಮಲಿಗೆ ಒಣಗಿದ್ದ ಗರಿಕೆಯು
ಚಿಗುರಿ ಹಸಿರಾಯಿತು...

ಜುಳು ಜುಳು ನಾದವ ಹರಿಸುತ
ಹೊರಟವು ಝರಿ ತೊರೆಗಳು,
ತೂಗಿ ತೂಗಿ ಮೈದುಂಬಿದವು
ತರುಲತೆಗಳು....
ಮಳೆಯೆಂಬ ಗೆಳೆಯನ 
ಆಗಮನವು ನವೋತ್ಸಾಹ 
ಮೂಡಿಸಿತು.... First Rain