Nojoto: Largest Storytelling Platform

ಜಗಜ್ಯೋತಿ ಅಗೋ ಬೆಳಗುತಿದೆ ಜಗಜ್ಯೋತಿ ಭಾರತಾಂಬೆಯ ದಿವ್ಯ ಜ

ಜಗಜ್ಯೋತಿ

ಅಗೋ ಬೆಳಗುತಿದೆ ಜಗಜ್ಯೋತಿ
ಭಾರತಾಂಬೆಯ ದಿವ್ಯ ಜ್ಯೋತಿ
ಬೆಳಕ ಬಿರುತ ದಾರಿ ತೋರುತ
ಹರವಿಕೊಂಡಿದೆ ನಮ್ಮವರೆನ್ನುತ

ಕಾದಿಹರಿಂದು ಬೆಳಕ ಅರಿಸಲು
ಭಾರತವ ಕತ್ತಲೆಯೊಳಗೆ ಮುಳುಗಿಸಲು
ಬಿಟ್ಟೇವೇ ನಾವು ದೀಪ ಆರಿಸಲು
ಬಂದು ನೋಡಿ ಬೆನ್ನ ಮೂಳೆ ಮುರಿವೆವು.

ಸರ್ವಜನರ ಶಾಂತಿತೋಟದ
ನಂದಾದೀಪವ ಆರದಂತೆ 
ನಮ್ಮ ಜೀವ ಪಣಕ್ಕಿಟ್ಟು 
ರಕ್ಷಿಸಿಕೊಳ್ಳುವೆವು ಬದುಕ ಸವೆಸುವೆವು.

ದುರುಳರ ದರ್ಪಕ್ಕೆ ಆತ್ಮಜ್ಯೋತಿಯಾಗಿವೆ
ಸೈನಿಕರ ಜೀವಗಳು 
ನಮ್ಮೆದೆಯಲಿ ಕೆಚ್ಚನು ಹಚ್ಚಿವೆ
ಬಿಡಲಾರೆವು ನಿಮ್ಮ ಕೊಂದವರ.

ಓ ನನ್ನ ಭಾರತಾಂಬೆಯ ಕರುಳ ಕುಡಿಗಳೇ
ನಿಮಗಿದೋ ನಮಿಸುವೆ ದೀಪವ ಬೆಳಗಿಸಿ
ಬತ್ತಿ ಹೊತ್ತಿ ತೈಲ ಅರುವುದರೊಳಗೆ
ಹೊತ್ತು ತರುವೆವು ದುರುಳರ ಸತ್ತ ದೇಹವ.
 
ನಿಮ್ಮಿ ಸೇವೆ ಪ್ರಜ್ವಲಿಸುವ ದೀಪದಂತೆ
ಅಮರರಾದಿರಿ ಅನಂತ ಜ್ಯೋತಿಯೊಳಗೆ 
ಬೆಳಕಾದಿರಿ ಸಾಧಿಸುವವರಿಗೆ
ನಮಿಸುವೆ ನೀವೆಮ್ಮ ಬಾಳಜ್ಯೋತಿ.

ಅನಪು
9972184591 Soldiers
ಜಗಜ್ಯೋತಿ

ಅಗೋ ಬೆಳಗುತಿದೆ ಜಗಜ್ಯೋತಿ
ಭಾರತಾಂಬೆಯ ದಿವ್ಯ ಜ್ಯೋತಿ
ಬೆಳಕ ಬಿರುತ ದಾರಿ ತೋರುತ
ಹರವಿಕೊಂಡಿದೆ ನಮ್ಮವರೆನ್ನುತ

ಕಾದಿಹರಿಂದು ಬೆಳಕ ಅರಿಸಲು
ಭಾರತವ ಕತ್ತಲೆಯೊಳಗೆ ಮುಳುಗಿಸಲು
ಬಿಟ್ಟೇವೇ ನಾವು ದೀಪ ಆರಿಸಲು
ಬಂದು ನೋಡಿ ಬೆನ್ನ ಮೂಳೆ ಮುರಿವೆವು.

ಸರ್ವಜನರ ಶಾಂತಿತೋಟದ
ನಂದಾದೀಪವ ಆರದಂತೆ 
ನಮ್ಮ ಜೀವ ಪಣಕ್ಕಿಟ್ಟು 
ರಕ್ಷಿಸಿಕೊಳ್ಳುವೆವು ಬದುಕ ಸವೆಸುವೆವು.

ದುರುಳರ ದರ್ಪಕ್ಕೆ ಆತ್ಮಜ್ಯೋತಿಯಾಗಿವೆ
ಸೈನಿಕರ ಜೀವಗಳು 
ನಮ್ಮೆದೆಯಲಿ ಕೆಚ್ಚನು ಹಚ್ಚಿವೆ
ಬಿಡಲಾರೆವು ನಿಮ್ಮ ಕೊಂದವರ.

ಓ ನನ್ನ ಭಾರತಾಂಬೆಯ ಕರುಳ ಕುಡಿಗಳೇ
ನಿಮಗಿದೋ ನಮಿಸುವೆ ದೀಪವ ಬೆಳಗಿಸಿ
ಬತ್ತಿ ಹೊತ್ತಿ ತೈಲ ಅರುವುದರೊಳಗೆ
ಹೊತ್ತು ತರುವೆವು ದುರುಳರ ಸತ್ತ ದೇಹವ.
 
ನಿಮ್ಮಿ ಸೇವೆ ಪ್ರಜ್ವಲಿಸುವ ದೀಪದಂತೆ
ಅಮರರಾದಿರಿ ಅನಂತ ಜ್ಯೋತಿಯೊಳಗೆ 
ಬೆಳಕಾದಿರಿ ಸಾಧಿಸುವವರಿಗೆ
ನಮಿಸುವೆ ನೀವೆಮ್ಮ ಬಾಳಜ್ಯೋತಿ.

ಅನಪು
9972184591 Soldiers
draravindnp1675

Dr Anapu

New Creator

Soldiers