Nojoto: Largest Storytelling Platform

*ಬಾ ಗೆಳತಿ* ಮಂಜಾನೆಯ ಮಂಜಿನ ಮೋಜಿಗೆ ಮನಸೋತು ಖುಷಿ ಪಡುವ

*ಬಾ ಗೆಳತಿ*

ಮಂಜಾನೆಯ ಮಂಜಿನ 
ಮೋಜಿಗೆ ಮನಸೋತು
ಖುಷಿ ಪಡುವ ಬಾ ಗೆಳತಿ 
ನಿನ್ನ ಕಾಲ್ಗೆಜ್ಜೆ ದನಿಗೆ 
ಮೆಲ್ಲ ಅರಳುವ ಹೂ ಕಂಪಿಗೆ
ಸಂಭ್ರಮಿಸುವ ದುಂಬಿಯಾಗೋಣ 
ಬಾ ಗೆಳತಿ 
ತಂಗಾಳಿಗೆ ತೂಗಾಡುವ
ಎಳೆ ಪೈರಿನ ನಡುವೆ ಕೂತ
ಒಲವ ಧ್ಯಾನ ಮಾಡೋಣ ಬಾ
ಎಲೆಮರೆಯಲಿ ಕೂತು 
ಹಾಡುವ ಹಕ್ಕಿಗಳ ಚಿಲಿಪಿಲಿ 
ಕೇಳುತ್ತಾ ನಲಿಯೋಣ ಬಾ
ದಿನವೆಲ್ಲ ಹೀಗೆ ಕಳೆದು
ಬಾಳಿನೆಲ್ಲ ಸುಖ ಪಡೆದು
ನೆಮ್ಮದಿಯ ಪಡೆಯೋಣ ಬಾ

*ಅಮು ಭಾವಜೀವಿ* #ಬಾ #ಗೆಳತಿ
*ಬಾ ಗೆಳತಿ*

ಮಂಜಾನೆಯ ಮಂಜಿನ 
ಮೋಜಿಗೆ ಮನಸೋತು
ಖುಷಿ ಪಡುವ ಬಾ ಗೆಳತಿ 
ನಿನ್ನ ಕಾಲ್ಗೆಜ್ಜೆ ದನಿಗೆ 
ಮೆಲ್ಲ ಅರಳುವ ಹೂ ಕಂಪಿಗೆ
ಸಂಭ್ರಮಿಸುವ ದುಂಬಿಯಾಗೋಣ 
ಬಾ ಗೆಳತಿ 
ತಂಗಾಳಿಗೆ ತೂಗಾಡುವ
ಎಳೆ ಪೈರಿನ ನಡುವೆ ಕೂತ
ಒಲವ ಧ್ಯಾನ ಮಾಡೋಣ ಬಾ
ಎಲೆಮರೆಯಲಿ ಕೂತು 
ಹಾಡುವ ಹಕ್ಕಿಗಳ ಚಿಲಿಪಿಲಿ 
ಕೇಳುತ್ತಾ ನಲಿಯೋಣ ಬಾ
ದಿನವೆಲ್ಲ ಹೀಗೆ ಕಳೆದು
ಬಾಳಿನೆಲ್ಲ ಸುಖ ಪಡೆದು
ನೆಮ್ಮದಿಯ ಪಡೆಯೋಣ ಬಾ

*ಅಮು ಭಾವಜೀವಿ* #ಬಾ #ಗೆಳತಿ