Nojoto: Largest Storytelling Platform

*ತಂದ ಜೀವಕಳೆ* ಮುಂಗಾರಿನ ಈ ಅಭಿಷೇಕ ತಂತು ಇಳೆ ಮೈಗೆ ಪುಳಕ

*ತಂದ ಜೀವಕಳೆ*

ಮುಂಗಾರಿನ ಈ ಅಭಿಷೇಕ
ತಂತು ಇಳೆ ಮೈಗೆ ಪುಳಕ
ಗುಡುಗು ಸಿಡಿಲಾರ್ಭಟಕೆ
ಬೆಚ್ಚಿ ಜೀವಗಳೆದೆಯಲಿ ಅಂಜಿಕೆ

ಸಸ್ಯ ಶಾಮಲೆಗೆ ಜಳಕ  ಮಾಡಿಸಿ
ಹಸಿರಿನುಡುಗೆಯ ಚಂದದಿ ಉಡಿಸಿ
ಸುಮಗಳ ಪರಿಮಳ ಪಸರಿಸಿ
ಹೊಸ ಭಾಷ್ಯ ಬರೆದ ಮಳೆರಾಯ
 
ಕೆರೆಕಟ್ಟೆಗಳ ಒಡಲ ತುಂಬಿಸಿ
ಅಂತರ್ಜಲವ ಮರುಪೂರ್ಣಿಸಿ
ವರ್ಷವಿಡಿ ಬಾಳ ಹಸನಾಗಿಸಿ
ನಿಸರ್ಗಕೆ ತಂದ ಜೀವಕಳೆಯ

*ಅಮು ಭಾವಜೀವಿ* #ತಂದ #ಜೀವಕಳೆ
*ತಂದ ಜೀವಕಳೆ*

ಮುಂಗಾರಿನ ಈ ಅಭಿಷೇಕ
ತಂತು ಇಳೆ ಮೈಗೆ ಪುಳಕ
ಗುಡುಗು ಸಿಡಿಲಾರ್ಭಟಕೆ
ಬೆಚ್ಚಿ ಜೀವಗಳೆದೆಯಲಿ ಅಂಜಿಕೆ

ಸಸ್ಯ ಶಾಮಲೆಗೆ ಜಳಕ  ಮಾಡಿಸಿ
ಹಸಿರಿನುಡುಗೆಯ ಚಂದದಿ ಉಡಿಸಿ
ಸುಮಗಳ ಪರಿಮಳ ಪಸರಿಸಿ
ಹೊಸ ಭಾಷ್ಯ ಬರೆದ ಮಳೆರಾಯ
 
ಕೆರೆಕಟ್ಟೆಗಳ ಒಡಲ ತುಂಬಿಸಿ
ಅಂತರ್ಜಲವ ಮರುಪೂರ್ಣಿಸಿ
ವರ್ಷವಿಡಿ ಬಾಳ ಹಸನಾಗಿಸಿ
ನಿಸರ್ಗಕೆ ತಂದ ಜೀವಕಳೆಯ

*ಅಮು ಭಾವಜೀವಿ* #ತಂದ #ಜೀವಕಳೆ