Nojoto: Largest Storytelling Platform

ಅನುಪಸ್ಥಿತಿ ಸುಡುಬಿಸಿಲಿನಲ್ಲಿ ಚಂದ್ರನ ಅನುಪಸ್ಥಿತಿ, ಕ

ಅನುಪಸ್ಥಿತಿ

ಸುಡುಬಿಸಿಲಿನಲ್ಲಿ 
ಚಂದ್ರನ ಅನುಪಸ್ಥಿತಿ, 
ಕೊರೆಯುವ ಚಳಿಯಲ್ಲಿ
ಸೂರ್ಯನ ಅನುಪಸ್ಥಿತಿ
ಕಾಡುವುದು...
ಕಷ್ಟದ ಅನುಪಸ್ಥಿತಿಯಲ್ಲಿ 
ಸುಖಕ್ಕೆ ಎಲ್ಲಿಯ ಬೆಲೆ ??..

ವಿಶಾಲ ಸಾಗರದಲ್ಲಿ 
ಭೂಭಾಗದ ಅನುಪಸ್ಥಿತಿ..
ಮರುಭೂಮಿಯಲ್ಲಿ 
ಹನಿ ನೀರಿನ ಅನುಪಸ್ಥಿತಿ..
ಕತ್ತಲಲ್ಲಿ ಬೆಳಕಿನ  
ಅನುಪಸ್ಥಿತಿ ಕಾಡುವುದು...
ಸೋಲಿನ ಅನುಪಸ್ಥಿತಿಯಿಲ್ಲದೇ
ಗೆಲುವಿನ ಬೆಲೆ ಹೇಗೆ ??..

ವಿರುದ್ಧ ಮೌಲ್ಯಗಳು
ಒಂದನೊಂದು ಬಿಟ್ಟಿರಲಾರವು
ಒಂದೇ ನಾಣ್ಯದ ಎರಡು
ಮುಖಗಳು ಪೂರಕವಾಗಿಹವು..
ಒಂದರ ಅನುಪಸ್ಥಿತಿ
ಇನ್ನೊಂದನ್ನು ಕಾಡುತ್ತಿರುವುದು.....— % & Absence
ಅನುಪಸ್ಥಿತಿ

ಸುಡುಬಿಸಿಲಿನಲ್ಲಿ 
ಚಂದ್ರನ ಅನುಪಸ್ಥಿತಿ, 
ಕೊರೆಯುವ ಚಳಿಯಲ್ಲಿ
ಸೂರ್ಯನ ಅನುಪಸ್ಥಿತಿ
ಕಾಡುವುದು...
ಕಷ್ಟದ ಅನುಪಸ್ಥಿತಿಯಲ್ಲಿ 
ಸುಖಕ್ಕೆ ಎಲ್ಲಿಯ ಬೆಲೆ ??..

ವಿಶಾಲ ಸಾಗರದಲ್ಲಿ 
ಭೂಭಾಗದ ಅನುಪಸ್ಥಿತಿ..
ಮರುಭೂಮಿಯಲ್ಲಿ 
ಹನಿ ನೀರಿನ ಅನುಪಸ್ಥಿತಿ..
ಕತ್ತಲಲ್ಲಿ ಬೆಳಕಿನ  
ಅನುಪಸ್ಥಿತಿ ಕಾಡುವುದು...
ಸೋಲಿನ ಅನುಪಸ್ಥಿತಿಯಿಲ್ಲದೇ
ಗೆಲುವಿನ ಬೆಲೆ ಹೇಗೆ ??..

ವಿರುದ್ಧ ಮೌಲ್ಯಗಳು
ಒಂದನೊಂದು ಬಿಟ್ಟಿರಲಾರವು
ಒಂದೇ ನಾಣ್ಯದ ಎರಡು
ಮುಖಗಳು ಪೂರಕವಾಗಿಹವು..
ಒಂದರ ಅನುಪಸ್ಥಿತಿ
ಇನ್ನೊಂದನ್ನು ಕಾಡುತ್ತಿರುವುದು.....— % & Absence