Nojoto: Largest Storytelling Platform

ಓ ಹೆಣ್ಣೆ,,, ಮಂಕಾಗಿ ಮೂಲೆಗುಂಪಾಗಿರುವೆ ಏಕೆ!! ನೀ ಮನಸು ಮ

ಓ ಹೆಣ್ಣೆ,,,
ಮಂಕಾಗಿ ಮೂಲೆಗುಂಪಾಗಿರುವೆ ಏಕೆ!!
ನೀ ಮನಸು ಮಾಡಿದರೆ,
ತಲುಪಲೂ ಬಲ್ಲೆ ಚಂದ್ರಲೋಕಕ್ಕೆ!!

ಗೋಡೆಗಳ ನಡುವಣ ಲೆಕ್ಕಾಚಾರವ ತೊರೆದು,
ಸಮಾಜದ ಅವಹೇಳನಗಳ ಕಿತ್ತೊಗೆದು,,
ಅವರಿವರ ಗಾಳಿಮಾತುಗಳನ್ನು ಬದಿಗಿರಿಸಿ,,

ಝೆಂಕರಿಸುವ ದುಂಬಿಯಾಗು
ಗರಿಗೆದರುವ ನವಿಲಾಗು
ವರ್ಣಪೂರಿತ ಚಿಟ್ಟೆಯಾಗು
ಆಗಸ ಮುಟ್ಟುವ ಪಟವಾಗು
ನಿನಗಿಷ್ಟವಾದ ಪಥದೆಡೆಗೆ ಬೆಂಬಿಡದೆ ಸಾಗು!!

ನಿನಗಲ್ಲದ ಈ ಲೋಕ ಮತ್ತಾರಿಗೆ ಹೆಣ್ಣೆ!!
ಛಲದ ರಥವೇರಿ, ಗೆದ್ದು ತೋರು ಇಡೀ ಜಗವನ್ನೆ....

 ಹೆಣ್ಣು... ಛಲದ ರೂವಾರಿ!
#dpcherie #ಹೆಣ್ಣು #yqjogi_kannada
ಓ ಹೆಣ್ಣೆ,,,
ಮಂಕಾಗಿ ಮೂಲೆಗುಂಪಾಗಿರುವೆ ಏಕೆ!!
ನೀ ಮನಸು ಮಾಡಿದರೆ,
ತಲುಪಲೂ ಬಲ್ಲೆ ಚಂದ್ರಲೋಕಕ್ಕೆ!!

ಗೋಡೆಗಳ ನಡುವಣ ಲೆಕ್ಕಾಚಾರವ ತೊರೆದು,
ಸಮಾಜದ ಅವಹೇಳನಗಳ ಕಿತ್ತೊಗೆದು,,
ಅವರಿವರ ಗಾಳಿಮಾತುಗಳನ್ನು ಬದಿಗಿರಿಸಿ,,

ಝೆಂಕರಿಸುವ ದುಂಬಿಯಾಗು
ಗರಿಗೆದರುವ ನವಿಲಾಗು
ವರ್ಣಪೂರಿತ ಚಿಟ್ಟೆಯಾಗು
ಆಗಸ ಮುಟ್ಟುವ ಪಟವಾಗು
ನಿನಗಿಷ್ಟವಾದ ಪಥದೆಡೆಗೆ ಬೆಂಬಿಡದೆ ಸಾಗು!!

ನಿನಗಲ್ಲದ ಈ ಲೋಕ ಮತ್ತಾರಿಗೆ ಹೆಣ್ಣೆ!!
ಛಲದ ರಥವೇರಿ, ಗೆದ್ದು ತೋರು ಇಡೀ ಜಗವನ್ನೆ....

 ಹೆಣ್ಣು... ಛಲದ ರೂವಾರಿ!
#dpcherie #ಹೆಣ್ಣು #yqjogi_kannada
dpcherie1379

d.p cherie

New Creator