Nojoto: Largest Storytelling Platform

ಕರುಣಿಸು ದೇವ ಕರುಣಿಸು, ಅಂಧಕಾರವ ಅಳಿಸಿ ಒಳಗಣ್ಣನು ತೆರೆಸಿ

ಕರುಣಿಸು ದೇವ ಕರುಣಿಸು,
ಅಂಧಕಾರವ ಅಳಿಸಿ
ಒಳಗಣ್ಣನು ತೆರೆಸಿ 
ಬೆಳಕಿನೆಡೆಗೆ ನಡೆಸು.

ಭಕ್ತಿ ಬತ್ತಿಯು ಹೆಚ್ಚಾಗುವಂತೆ,
ಭಾವದೆಣ್ಣೆಯು ಕರಗದಂತೆ
ಮನಸಿನ ದೀಪವು ಆರದಂತೆ
ಕರುಣಿಸು ದೇವ ಕರುಣಿಸು.

ಬಾಳಾಟ ನಡೆಯುತಿರುವಂತೆ,
ಎದೆಯ ಬಾಗಿಲು ತೆರೆಸಿ
ನಿನ್ನೊಲುಮೆಯ ಪ್ರಸಾದವ ನೀಡಿ
ಆಂತರ್ಯದೊಳಗೆ ಮುಳುಗಿಸು
ಆತ್ಮದೆತ್ತರಕೆ, ಪರಮಾತ್ಮನ ಸನಿಹಕೆ
ಕರುಣಿಸು ದೇವ ಕರುಣಿಸು. Image Source- Strumm Spiritual YouTube

#ಶ್ರೀರಂಗ #yqjogi #yqkannada #ಮೈಸೂರುwords
ಕರುಣಿಸು ದೇವ ಕರುಣಿಸು,
ಅಂಧಕಾರವ ಅಳಿಸಿ
ಒಳಗಣ್ಣನು ತೆರೆಸಿ 
ಬೆಳಕಿನೆಡೆಗೆ ನಡೆಸು.

ಭಕ್ತಿ ಬತ್ತಿಯು ಹೆಚ್ಚಾಗುವಂತೆ,
ಭಾವದೆಣ್ಣೆಯು ಕರಗದಂತೆ
ಮನಸಿನ ದೀಪವು ಆರದಂತೆ
ಕರುಣಿಸು ದೇವ ಕರುಣಿಸು.

ಬಾಳಾಟ ನಡೆಯುತಿರುವಂತೆ,
ಎದೆಯ ಬಾಗಿಲು ತೆರೆಸಿ
ನಿನ್ನೊಲುಮೆಯ ಪ್ರಸಾದವ ನೀಡಿ
ಆಂತರ್ಯದೊಳಗೆ ಮುಳುಗಿಸು
ಆತ್ಮದೆತ್ತರಕೆ, ಪರಮಾತ್ಮನ ಸನಿಹಕೆ
ಕರುಣಿಸು ದೇವ ಕರುಣಿಸು. Image Source- Strumm Spiritual YouTube

#ಶ್ರೀರಂಗ #yqjogi #yqkannada #ಮೈಸೂರುwords