ಸೃಷ್ಟಿಯ ಅನನ್ಯ ಲೋಕದ ಸೃಷ್ಟಿಯಲ್ಲಿ ನೀನೇ ವಿಶಿಷ್ಟ ನೀನೇ ಅನನ್ಯ ನಿನ್ನ ಹಾಗೆ ನಾನು, ನನ್ನ ಹಾಗೆ ನೀನು, ಇರಲು ಹೇಗೆ ಸಾಧ್ಯ ?? ಬೆರಳಿನ ರೇಖೆಯಿಂದ ಹಿಡಿದು ಕಣ್ಣಿನ ಪಾಪೆಯ ವರೆಗೆ ಎಲ್ಲವೂ ಭಿನ್ನ-ವಿಭಿನ್ನವಿರುವಾಗ.. ಸಿದ್ಧಿ-ಬುದ್ಧಿ ಕೌಶಲ್ಯಗಳು ಇತರರಿಗಿಂತ ಅನನ್ಯವಾಗಿರುವಾಗ.. ಅನ್ಯರೊಂದಿಗೇಕೆ ನಿನ್ನ ಹೋಲಿಕೆ?? ಅರಿಯುವೆಯಾ ನಿನ್ನೊಳಗಿನ ಸುಪ್ತ ಶಕ್ತಿಯ.. ಗುರುತಿಸುವೆಯಾ ನಿನ್ನೊಳಗಿನ ಆ ಅದ್ಭುತ ವ್ಯಕ್ತಿಯ.. ನಿನ್ನ ನೀ ಪರಿಚಯಿಸಿದೇ ತಿಳಿಯುವುದೇಗೆ ಜಗಕೆ ಈ ವಿಶಿಷ್ಟ ವ್ಯಕ್ತಿಯ..ಲೋಕದ ಸೃಷ್ಟಿಯಲ್ಲಿ ನೀನೇ ವಿಶಿಷ್ಟ ನೀನೇ ಅನನ್ಯ .... You are unique