ನಾನೆಂಬ ಶೂನ್ಯ ಬಿರುದು ಬಾವಲಿಗಳ ಬೆನ್ನತ್ತಿ ಮಾನ ಸನ್ಮಾನಗಳ ಬಯಸಿ ಆತ್ಮಪ್ರಶಂಸೆಯ ಮೋಹಕ್ಕೆ ಸಿಲುಕಿ ಅಂಧನಾಗಿರುವೆ ನಾನು... ನೈಜತೆಯು ಮರೆಯಾಗಿ ಬರೀ ತೋರ್ಪಡಿಕೆಯ ಮುಖವಾಡದ ಬೂಟಾಟಿಕೆಯ ಪ್ರದರ್ಶನವಾಗುತ್ತಿದೆ ಇಂದು.. ಮನವೆಂಬ ಮಹಾ ದರ್ಪಣಕೆ ತಿಳಿದಿಹುದು ನನ್ನಯ ಅಸಲಿ ಮುಖ ಏನೆಂದು.. ಆದರೂ ತಿಳಿಯುತ್ತಿಲ್ಲ ಎನಗೆ ನನ್ನ ನಾ ತಿಳಿಯುವುದು ಹೇಗೆಂದು.... ಮೆಲ್ಲನೆ........ ಉಸಿರಿಸಿತು ಮನ...... ನಿನ್ನಯ ನಡೆ ನುಡಿಗಳನ್ನು ನಿನ್ನ ಮನ ಮೆಚ್ಚುವಂತಿದ್ದರೆ ಸಾಕೆಂದು..... I am zero