Nojoto: Largest Storytelling Platform

ಹೆಣ್ಣು ಮಗಳು ಜನಿಸಿ ಮನೆಯ ಬೆಳಕಾಗಿ/ ಬೆಳೆಯುವಳು ಹೆತ್ತವರ

ಹೆಣ್ಣು ಮಗಳು

ಜನಿಸಿ ಮನೆಯ ಬೆಳಕಾಗಿ/
ಬೆಳೆಯುವಳು ಹೆತ್ತವರ ಕನಸಾಗಿ/
ಸಹೋದರರಿಗೆ ತಾಯಿಯಾಗಿ/
ಮನೆಗೆ ಲಕ್ಷ್ಮಿಯ ಕಳೆಯಾಗಿ // ಫ //

ಸುತ್ತಮುತ್ತಲಿನವರಿಗೆ ಗೆಳತಿಯಂತೆ /
ಮಾತನಾಡುವಳು ಮುದ್ದು ಕೂಸಂತೆ /
ಇವಳು ತಂದೆಯ ಗೌರವವಂತೆ/
ತಾಯಿಗೆ ಇವಳೇ ಆಸರೆಯಂತೆ //ಅ ಫ //

ಮೆಟ್ಟಿದ ಮನೆಯ ಜ್ಯೋತಿ/
ಬಿಡಳು ತವರು ಮನೆಯ ನೀತಿ /
ಇವಳು ಸಂಸ್ಕೃತಿಯ ಪ್ರತೀಕ /
ಸಹನೆಗೆ ಇವಳೇ ಸಮಾನಾರ್ಥಕ //೧//

ಕನಸಹೊತ್ತು ನೂರು/
ಸೇರುವಳು ಗಂಡನ ಮನೆಯ ಸೂರು /
ಇವಳಿಗೆ ಪತಿಯೇ ದೇವರು /
ಜಗದಲಿ ಇವಳಿಗೆ ಸರಿಸಾಟಿ ಯಾರು??// ೨ //
 #ಕನ್ನಡ
#ಭಾವಗೀತೆ
#yqquotes
#ಕನ್ನಡ_ಬರಹಗಳು
ಹೆಣ್ಣು ಮಗಳು

ಜನಿಸಿ ಮನೆಯ ಬೆಳಕಾಗಿ/
ಬೆಳೆಯುವಳು ಹೆತ್ತವರ ಕನಸಾಗಿ/
ಸಹೋದರರಿಗೆ ತಾಯಿಯಾಗಿ/
ಮನೆಗೆ ಲಕ್ಷ್ಮಿಯ ಕಳೆಯಾಗಿ // ಫ //

ಸುತ್ತಮುತ್ತಲಿನವರಿಗೆ ಗೆಳತಿಯಂತೆ /
ಮಾತನಾಡುವಳು ಮುದ್ದು ಕೂಸಂತೆ /
ಇವಳು ತಂದೆಯ ಗೌರವವಂತೆ/
ತಾಯಿಗೆ ಇವಳೇ ಆಸರೆಯಂತೆ //ಅ ಫ //

ಮೆಟ್ಟಿದ ಮನೆಯ ಜ್ಯೋತಿ/
ಬಿಡಳು ತವರು ಮನೆಯ ನೀತಿ /
ಇವಳು ಸಂಸ್ಕೃತಿಯ ಪ್ರತೀಕ /
ಸಹನೆಗೆ ಇವಳೇ ಸಮಾನಾರ್ಥಕ //೧//

ಕನಸಹೊತ್ತು ನೂರು/
ಸೇರುವಳು ಗಂಡನ ಮನೆಯ ಸೂರು /
ಇವಳಿಗೆ ಪತಿಯೇ ದೇವರು /
ಜಗದಲಿ ಇವಳಿಗೆ ಸರಿಸಾಟಿ ಯಾರು??// ೨ //
 #ಕನ್ನಡ
#ಭಾವಗೀತೆ
#yqquotes
#ಕನ್ನಡ_ಬರಹಗಳು