Nojoto: Largest Storytelling Platform

ಅವಳು ಬರುತ್ತಿರುವಳು ವಾಯು ವರದಿಯನ್ನೊಪ್ಪಿಸುತಿಹನು ಗಿಡ

ಅವಳು ಬರುತ್ತಿರುವಳು 
ವಾಯು  ವರದಿಯನ್ನೊಪ್ಪಿಸುತಿಹನು

ಗಿಡ - ಮರಗಳು ಮೈಮುರಿಯುವಂತೆ ಅಲ್ಲಾಡಿಹವು !
ಹುಲ್ಲು ಕಡ್ಡಿಗಳು ದಿಕ್ಕಾಪಾಲಾಗಿ ಸುಂಟರಗಾಳಿಯಲ್ಲಿ ಸುತ್ತಿಹವು! 
ಸೂರ್ಯನೆದರಿ ಮೇಘಗಳ ಸೆರಗಳಡಗಿಹನು !

ಹಕ್ಕಿಪಕ್ಕಿಗಳೆಲ್ಲ  ಗೂಡಸೇರಿಹರು !
ದನಕರುಗಳು ದಿಕ್ಕೆಟ್ಟು ಓಡಿಹವು !
ಯಾರದೋ ಮೇಘಗಳಿಂದೆ ಅಶರೀರವಾಣಿ ಎಚ್ಚರಿಸಿದಂತೆ ಭಾಸವಾಗಿಹುದು!

ಸುತ್ತಲೂ ಯಾರೋ ತನ್ನ ಭುಜಬಲಗಳಿಂದ ಅಕ್ರಮಿಸಿದಂತೆ ಕಾಣುತಿಹದು!
ಸುತ್ತಲೂ ಕಾರ್ಮೋಡ ವ್ಯೂಹ ರಚಿಸಿಹುದು !
ಶ್ಶಾನಗಳೆಲ್ಲ ಕೂಗುತ್ತಾ ಬರಮಾಡಿ ಕೊಳ್ಳುತಿಹರು !

ಅವಳೇ ತನ್ನ ತಂಗಿಯ ಕಾಣಲು !
ತನುವ ತಣಿಸಲು !
ಭಗೀರಥ ಋಷಿಯಾಸೆಯಂತೆ 
ಧುಮ್ಮಿಕ್ಕಿ ಬರುತಿಹಳು!
ಧೋ ಎಂದು ಸುರಿಯುತಿಹಳು! #life #nature #rain #wind #rainydays #nojoto