Nojoto: Largest Storytelling Platform

ಮನೆಯ ಬೆಳಕು ಯಜ್ಞ ಯಾಗಾದಿಗಳು ಪೂಜೆ ಪುನಸ್ಕಾರಗಳು ಇಷ್ಟ ಹ

ಮನೆಯ ಬೆಳಕು

ಯಜ್ಞ ಯಾಗಾದಿಗಳು
ಪೂಜೆ ಪುನಸ್ಕಾರಗಳು
ಇಷ್ಟ ಹರಕೆಗಳೂ ನಡೆದಿಹವು
ಪುತ್ರ ಸಂತಾನಕ್ಕಾಗಿ.....

ಜನಕನ ಪುತ್ರಿ ಇಲ್ಲದ 
ರಾಮಾಯಣ....
ದ್ರುಪದನ ಪುತ್ರಿ ಇಲ್ಲದ
ಮಹಾಭಾರತ 
ಊಹಿಸಲು ಸಾಧ್ಯವೇ?!!

ಭಾರ, ಭಾರ ಎಂದು
ಹೀಯಾಳಿಸುವ ಮೂಢರು
ಪುತ್ರನೇ ಬೇಕೆಂದು ಹಲುಬುತ್ತಾ
ಚೈನಿ ಕ್ಯಾಲೆಂಡರ್ ಸುತ್ತುತ್ತಾ...
ಭ್ರೂಣ ಪತ್ತೆಯಲ್ಲಿ ತೊಡಗುವ
ಅಕ್ಷರ ಕಲಿತ ನಿರಕ್ಷರಿಗಳು..

ತಿಳಿಯದಾದರಾ ನಮ್ಮನ್ನೆಲ್ಲಾ 
ಹೆತ್ತ ತಾಯಿಯೂ ಪುತ್ರಿಯ 
ಇನ್ನೊಂದು ರೂಪವೆಂದು....
ಪುತ್ರಿಯಾಗುವಳು ಹೆಣ್ಣಾಗಿ, 
ಕಣ್ಣಾಗಿ, ಬೆಳಕಾಗಿ ಮನೆಯ
ದೇವತೆಯಾಗಿ...... Happy daughters day
ಮನೆಯ ಬೆಳಕು

ಯಜ್ಞ ಯಾಗಾದಿಗಳು
ಪೂಜೆ ಪುನಸ್ಕಾರಗಳು
ಇಷ್ಟ ಹರಕೆಗಳೂ ನಡೆದಿಹವು
ಪುತ್ರ ಸಂತಾನಕ್ಕಾಗಿ.....

ಜನಕನ ಪುತ್ರಿ ಇಲ್ಲದ 
ರಾಮಾಯಣ....
ದ್ರುಪದನ ಪುತ್ರಿ ಇಲ್ಲದ
ಮಹಾಭಾರತ 
ಊಹಿಸಲು ಸಾಧ್ಯವೇ?!!

ಭಾರ, ಭಾರ ಎಂದು
ಹೀಯಾಳಿಸುವ ಮೂಢರು
ಪುತ್ರನೇ ಬೇಕೆಂದು ಹಲುಬುತ್ತಾ
ಚೈನಿ ಕ್ಯಾಲೆಂಡರ್ ಸುತ್ತುತ್ತಾ...
ಭ್ರೂಣ ಪತ್ತೆಯಲ್ಲಿ ತೊಡಗುವ
ಅಕ್ಷರ ಕಲಿತ ನಿರಕ್ಷರಿಗಳು..

ತಿಳಿಯದಾದರಾ ನಮ್ಮನ್ನೆಲ್ಲಾ 
ಹೆತ್ತ ತಾಯಿಯೂ ಪುತ್ರಿಯ 
ಇನ್ನೊಂದು ರೂಪವೆಂದು....
ಪುತ್ರಿಯಾಗುವಳು ಹೆಣ್ಣಾಗಿ, 
ಕಣ್ಣಾಗಿ, ಬೆಳಕಾಗಿ ಮನೆಯ
ದೇವತೆಯಾಗಿ...... Happy daughters day