Nojoto: Largest Storytelling Platform
draravindnp1675
  • 468Stories
  • 28Followers
  • 290Love
    2.3KViews

Dr Anapu

writer

  • Popular
  • Latest
  • Video
0b0410434c3ae0a8d271c6366a5b967c

Dr Anapu

ಚಿಮಣಿ

ಅವ್ವ ಹಚ್ಯಾಳ ನೋಡು ಚಿಮಣಿ ದೀಪ
ಅದ್ರ ಬುಡಕ ಕುಂತು ನೀ ಓದ್ಕ
ಹೋಗಬ್ಯಾಡ ನೀ ಒಲಿಯ ಬುಡಕ
ಕಟ್ಟಿಗಿ ಒಲಿಯ ಹೊಗಿ ತಾಗ್ಯಾತು 
ಮೂಗಿನ ನಡಕ.

ಮಬ್ಬು ಕತ್ತಲಿನ ಬೆಳಕು ಕೋಣಿ ಒಳಗ
ಪುಸ್ತಕದ ಸಾಲು ಕಾಣುತಾವ ತುಸು ಮುಸುಕ
ಅಜ್ಜಿಯ ಗುನುಗು ಹಾಡು ಮೂಲಿ ಇಣುಕ
ಬಿಸಾಕಲ್ಲಿನ ರಾಗ ಸ್ವಲ್ಪ ತಡಕ.

ತಮ್ಮನ ಕಾಲ್ಗೆಜ್ಜೆ ಜಿಣ ಜಿಣಕ ಜಿಣಕ
ಅಪ್ಪ ಬಂದಾನ ಬಾಗಿಲ ಬುಡಕ
ಹೊತ್ತಾತು ಏಳ ಇನ್ನು ತಿನ್ನಾಕ
ಮುಂಜಾನೆ ಎದ್ರಾತು ಓದಾಕ.

ಡಾ.ಅನಪು

0b0410434c3ae0a8d271c6366a5b967c

Dr Anapu

ಕಾಡುವ ಸಾಲು

ನಿನ್ನ ಪ್ರೇಮವೇ ನಿನ್ನ
ಪಾವನ ಸಮಾಧಿಯನ್ನು
ಕಟ್ಟುತ್ತಿದೆ ಮೋಹದಲಿ
ಮುಳುಗಬೇಡ.


ಡಾ.ಅನಪು

0b0410434c3ae0a8d271c6366a5b967c

Dr Anapu

ಬದುಕು ಅಹಂಕಾರದಿಂದ ತುಂಬಿರಲಿ
ಆದರೆ ಆ ಅಹಂಕಾರ ಇನ್ನೊಬ್ಬರನ್ನ ಹಾಳುಮಾಡುವುದಕ್ಕೆ ಅಲ್ಲ
ನಿನ್ನ ಸಾಧನೆಗೆ ಮೆಟ್ಟಿಲಾಗಿರಬೇಕು ಅಷ್ಟೇ.

ಡಾ.ಅನಪು

0b0410434c3ae0a8d271c6366a5b967c

Dr Anapu

ಕೆಲವು ವಿಷಯಗಳನ್ನ 
ಕೆಲವರಿಂದ ಕೇಳಿ ತಿಳಿದುಕೊಳ್ಳಬೇಕು
ಆದ್ರೆ ಕೆಲವೊಂದು ವಿಷಯಗಳನ್ನ
ನೋಡಿ ಕಲಿತುಕೊಳ್ಳಬೇಕು
ಪ್ರತಿ ಸಮಯದಲ್ಲೂ 
ಇನ್ನೊಬ್ಬರ ಮೇಲೆ ಅವಲಂಬಿತವಾಗೋದು
ಸರಿ ಅಲ್ಲ.

ಡಾ.ಅನಪು

0b0410434c3ae0a8d271c6366a5b967c

Dr Anapu

ಕಾಡುವ ಸಾಲು

ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು
ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು

ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ
ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು,
 ಧೈರ್ಯ ತಾಳುತಾ

0b0410434c3ae0a8d271c6366a5b967c

Dr Anapu

ಬಹುಶಃ ಕಮರಿದ ಕನಸುಗಳು
ಖಾಲಿ ಬಿದೀಗಳಿಗಾಗಿ.
ಆದರೆ
ಎಂದು ನಿಮ್ಮ ಸ್ನೇಹಿತರೊಂದಿಗೆ
ಹಂಚಿಕೊಳ್ಳುತ್ತಿರೋ
ಅಂದೇ
ನಿಮ್ಮಜೀವನ ಕತ್ತಲೆಯಾಗುವುದರೊಳಗೆ
ನೀವು ಬೆಳಕಿನೆಡೆಗೆ ಮುಖ ಮಾಡಿ ಗೆದ್ದಿರಿ ಎಂದರ್ಥ

ಡಾ.ಅನಪು

0b0410434c3ae0a8d271c6366a5b967c

Dr Anapu

ನಿನ್ನ ಮಗುವ ತೊದಲನುಡಿಗೆ
ಕಾರಣ ನಾನಾಗಬಹುದೇ.!? ಚೆಲುವೆ..

ಬದುಕ ಪಯಣದೂರಿನಲ್ಲಿ
ನಿನ್ನೆದೆಯ ಗೂಡಿನಲ್ಲಿ ಬೆಚ್ಚಗಿರಬಹುದೇ..!? ಓ ಒಲವೇ..

ಡಾ.ಅನಪು

0b0410434c3ae0a8d271c6366a5b967c

Dr Anapu

ತೆಗಳಿದವರೊಂದುದಿನ
ಹೊಗಳಲೊಸುಗ ಬರುವರು
ಕಾಯಬೇಕು ಅಷ್ಟೇ.

ಡಾ.ಅನಪು

0b0410434c3ae0a8d271c6366a5b967c

Dr Anapu

ಯಾರಿಗೆ ಮನುಷ್ಯತ್ವ ಇರತ್ತೋ 
ಅವರಿಗೆ ಮಾತ್ರ ಇನ್ನೊಬ್ಬರ 
ಕಷ್ಟದ ಅರಿವಾಗುತ್ತೆ.

ಡಾ.ಅನಪು Life

Life

0b0410434c3ae0a8d271c6366a5b967c

Dr Anapu

ಅಂದಣಕಿಸಿದವರು
ಇಂದೆಣಿಸಿ ಮಾತನಾಡಿಸುವರು.
ಅದೇ ಸಾಧನೆ ಹೊರತು
ಹೊತ್ತುತಂದ ಹೊನ್ನಲ್ಲ.

ಡಾ.ಅನಪು ಸಾಧನೆ 
#kannadaquotes #lovequotes #life #kannada

ಸಾಧನೆ #kannadaquotes #lovequotes life #kannada

loader
Home
Explore
Events
Notification
Profile