Nojoto: Largest Storytelling Platform
mugalallimantesh2237
  • 32Stories
  • 183Followers
  • 163Love
    0Views

ಮುಗಲಳ್ಳಿ ಮಾಂತೇಶ್

ಕಲ್ಪನೆಯ ಅಲೆಯಲಿ ಗರಿ ಬಿಚ್ಚಿ ಹಾರುತಿವೆ ಹಕ್ಕಿಗಳು ಗರ ಬಡಿದ ಪಕ್ಷಿಯಂತೆ ಬಳಿ ಬರಲು ಹೆಣಗುತ್ತಿವೆ ಕನಸುಗಳು...!!!

https://manteshapc.blogspot.com/?m=0

  • Popular
  • Latest
  • Video
758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

ಹನಿಗವನ 

ಕವಿಯಾದವನ ಮನಸ್ಸು ವಿಶಾಲ ಸಾಗರ 
ಆತ ಸಮುದ್ರದ ಮುತ್ತಿನಂತೆ ಹೆಕ್ಕಿ ತೆಗೆಯುತ್ತಾನೆ ಅಕ್ಷರ
ಅಕ್ಷರಗಳ ಜೊತೆ ವಾಕ್ಯ ಸೇರಿ ಕವಿತೆ ಆಗುವುದೇ ಸುಂದರ
ಸುಂದರ ಕವಿತೆ ಹುಟ್ಟುವುದೆ ಆತನ‌ ಮನಸ್ಸಿಗೆ ಮಧುರ.

ಮನಃದಾಳದ ಮಾತುಗಳು ಕವಿತೆಯಲ್ಲಿ ವಿಸ್ತಾರ
ಕವಿತೆಗಳ ಮೂಲಕ ಸಾಗುತ್ತಿದೆ ಆತನ ಸಂಸಾರ
ಆತನ ಸೋಲು ಗೆಲವುಗಳಿಗೆ ದೊರೆಯಬೇಕು ಸತ್ಕಾರ
ಸಾಹಿತ್ಯ ಸಂಸ್ಕಾರ ಬರೆಯುವ ಕೈಗಳಿಗೆ ಪುರಸ್ಕಾರ..

ಮು.ಮಾಂತೇಶ್ ಉಜ್ಜಿನಿ kavna

kavna

758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

ಹೂಬಳ್ಳಿಯಂತೆ ಮಿನುಗುತಿದೆ ಅವಳ ವೇಲು
ಚಂದ್ರನಂತೆ ಹೊಳೆಯುತ್ತಿದೆ ಅವಳ ಮುಖ
ಸಿಹಿಯಾದ ಜೇನಿನಂತೆ ಅವಳ ತುಟಿಗಳು
ಅವಳನ್ನು ವರ್ಣಿಸಲು ಸಾಲದು ಈ ನನ್ನ ಜನ್ಮ..!!

ಭೂಲೋಕದ ಸುಂದರಿ ಬಳುಕುವ ಬಳ್ಳಿ
ಅವಳು ನಡೆದು ಬರುತ್ತಿರಲು ಮಳ್ಳಿ
ಅವಳು ನನ್ನ ಬಾಳಿಗೆ ಹಾಗ್ಯಾಳ ಬೆಳ್ಳಿ
ಅವಳ ಕಡೆ ಮನಸ್ಸು ತಿರುಗಿ ನೋಡುತ್ತಿದೆ ಹೊಳ್ಳಿ..!!

ಅವಳ ಮಾತು ಕಠೋರ ಮೃದು ಸ್ವಾಭಾವ
ನಾರಿಯಂತೆ ಅವಳೊಳಗೊಬ್ಬ ಚಾಮುಂಡಿ
ತಂಟೆಗೆ ಹೋದರೆ ಅವರ ಪಾಲಿನ ದುರ್ಗಿ
ಆದರೂ ಅವಳಲ್ಲೂ ಚಲುವಿನ  ಕಳೆ 
ಮುಗುಳ್ನಗೆ ಸ್ನೇಹನ ಪ್ರೀತಿನಾ ಎಂದು ತಿಳಿಯದೆ 
ನನ್ನ ಹೃದಯದಲಿ ನೆಲೆನಿಂತ ಅವಳ ಹೃದಯ 
ಮೌನದಿ ಸಾಗುತ್ತಾ ಕಾಲಕಳೆಯುತ್ತಿದೆ..!!! gigd

gigd #story

758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

 ಕವನ

ಕವನ #nojotophoto

758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

 ಕವನ

ಕವನ #nojotophoto

758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

 ಕವನ

ಕವನ #nojotophoto

758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

 ಬಾವಿ

ಬಾವಿ #nojotophoto

758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

ನಿನ್ನ ನೆನಪೆ
ಸದಾ ಕಾಡುತ್ತಿದೆ
ಸಾಯಲು ಬಿಡದೆ
ಬದುಕಲು ಬಿಡದೆ.. ಜಸಹಸ

ಜಸಹಸ #Quote

758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

ಅವಳ ಜೊತೆ ಕಳೆದ 
ನೆನಪುಗಳು
ಕಾಡುತ್ತಿವೆ ನಿದ್ರಿಸಲು ಬಿಡದೆ
ಉರುಳಿದವು ದಿನಗಳು
ತರಗೆಲೆಯಂತೆ....!

ಅವಳ ಮುನಿಸಿಗೆ 
ಸಾಗರದ ಅಲೆ ಅಪ್ಪಳಿಸಿ
ನ ಕಂಡ ಕನಸಿನ ದೋಣಿಗೆ
ಅವಳು ನಾವಿಕನಾಗಬಹುದೇ
ಹೊಸ ವರ್ಷದಾರಂಭಕ್ಕೆ...!! ಕವನ

ಕವನ

758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

ಮೂಡಣದ ಚಿತ್ರದ ಗೊಂಬೆ
ವಜ್ರದ ಹೊಳಪು ವದನದ ಕಂಪು
ಚಂದ್ರನ ಅಂದ ನಯನಕೆ ನೋಟ
 ಬೆಳದಿಂಗಳ ಕಂಪು ಕೆನ್ನೆಯಲಿ ಸಿಹಿಮುತ್ತು...!!!

ಅವಳು ಮೂಡಣದಲಿ ಸೂರ್ಯನ 
ರಶ್ಮಿಗೆ ಅರಳಿದ ಮುಂಜಾನೆಯ ತಾವರೆ
ನನ್ನ ನಿದ್ದೆಗೆಡೆಸಿದ  ಮುಗುಳ್ನಗೆಯ ಅಪ್ಸರೆ....!!!

ಅವಳು ನೆಡೆಯುತ್ತಿರಲು ನವಿಲಿನ‌ ಅಂದ
ಅವಳ ಸೌಂದರ್ಯದ ಸೊಬಗು ಮನಸ್ಸಿಗೆ ಆನಂದ
ಅವಳ ಬಳುಕುವ ವೈಯಾರಕೆ ಮೈಮರತೆ ನಾನು
ನನ್ನ ಕಣ್ಣಲ್ಲೆ ಹೊಂಗನಸು ಮೂಡಿಸಿದಳು ಅವಳು
ಕನಸ್ಸಿನಲ್ಲೆ ನನ್ನನ್ನು ನಾನು ಮರೆತು ಹೋದೆನು ...!!!!

ಅವಳ ವದನದಲಿ ಎಳೆಕಂದನ ನಗೆ ಕಂಡು 
ಅವಳ‌ ಪ್ರೀತಿಗಾಗಿ ಹಂಬಲಿಸುವೆನು ನಾನು 
ಅವಳ ಪ್ರೀತಿಯ ಸೆರೆಮನೆಯಲ್ಲಿ ಬಂಧಿಯಾಗಿರುವೆನು
 ಅವಳು ನನ್ನ ಸಿಹಿ ನಿದ್ದೆಯ ಕದ್ದವಳು
ಕನಸ್ಸಿನಲಿ ಗುರಿ ಸಾಧಿಸಲು ಬಡಿದೆಬ್ಬಿಸಿದವಳು...!!! ಕವನ
#love
#Hashtag
#kannada
#kavana
758f887cd7870eea0cc8669753b3587f

ಮುಗಲಳ್ಳಿ ಮಾಂತೇಶ್

ಹೊಸ ವರ್ಷದ ಸಿಹಿ ಉತ್ಸಾಹ
ಕಹಿ ನೆನಪುಗಳು ಮರೆಯಾಗಿ
ಹೊಸ ಕನಸುಗಳು ಮೂಡಲಿ
ನೀವಿಡುವ ಪ್ರತಿ ಹೆಜ್ಜೆಯು ಕನಸುಗಳು
 ನನಸಾಗುತ್ತ ಸಾಗಲಿ
ನಿಮ್ಮ‌ ಬಾಳ‌ ನೌಕೆಯು ಚಿರಕಾಲ
ಹೊಸವರ್ಷದಿ ಹರ್ಷದಿ ಸಾಗಲಿ..!!!
ಮುಂದಿನ ನಿಮ್ಮ ಭವಿಷ್ಯ 
ನವ ಉಲ್ಲಾಸದೊಂದಿಗೆ ಉಜ್ವಲವಾಗಲಿ
ನನ್ನ ಪ್ರೀತಿಯ ಗುರು ಹಿರಿಯರಿಗೂ ಹಾಗೂ ಮಿತ್ರರಿಗೂ 
!!!_____2020____!!!
ಹೊಸ ವರ್ಷದ ಹಾರ್ದಿಕ ಶುಭಾಶಯಗಳು bbsb

bbsb #Quote

loader
Home
Explore
Events
Notification
Profile