Nojoto: Largest Storytelling Platform
vageesha4924
  • 155Stories
  • 3Followers
  • 8Love
    8.6KViews

ತೇರು ವಾಗೀಶ್

ಮನದಾಳದ ಭಾವನೆಗಳ ಅಕ್ಷರ ರೂಪ

  • Popular
  • Latest
  • Video
894cab380587cc6aef08ca18ea687862

ತೇರು ವಾಗೀಶ್

ನಾಳೆ ಎಂಬ ಭ್ರಮೆ

ನಾಳೆ, ನಾಳೆ ಎಂದೇಕೆ 
ಮುಂದೂಡುವೆ....
ಕಾಯುವುದು ಯಾಕೆ
ಶುಭ ದಿನದ ಮುಹೂರ್ತಕ್ಕಾಗಿ....

ಅನಿಸುತ್ತಿಲ್ಲವೇ ನಿನಗೆ
ಇದೆಲ್ಲಾ ಕಳ್ಳ ಮನದ
ಹುಸಿಯ ಸಾಂತ್ವನದ
ಸುಳ್ಳು ಸಬೂಬು ಎಂದು...
ತಿಳಿಯುತ್ತಿಲ್ಲವೇ ನಿನಗೆ
ಈ ಕಪಟಿ ಮನದ ಮುಂದೂಡಿಕೆಯ
ಕಳ್ಳ ಪ್ರವೃತ್ತಿಯ ಆಲಸ್ಯವೆಂದು..

ಇನ್ನೂ ಎಷ್ಟು ದಿನ ಈ ಮುಂದೂಡಿಕೆ
ಇನ್ನೆಷ್ಟು ದಿವಸ ಈ ಪ್ರವೃತ್ತಿ?..
ನಾಳೆಗೆ ಬದಲಾಗಿ ಇಂದು..
ಈ ಕ್ಷಣವೇ ಎಂದು ಕಾರ್ಯ
ಪ್ರವೃತ್ತವಾಗದ ಹೊರತು
ಆಲಸ್ಯವೆಂಬ ಭ್ರಮೆಯ
ಪೊರೆಯನ್ನು ಸರಿಸದ ಹೊರತು
ನಾಳೆ ಎಂಬುದು ಬದಲಾಗದು...

894cab380587cc6aef08ca18ea687862

ತೇರು ವಾಗೀಶ್

ದಾಸ ಶ್ರೇಷ್ಠ ಕನಕದಾಸರು

ದಂಡನಾಯಕನಾದರೂ 
ಸಿಗದ ಸಂತೋಷ..
ಕೊಪ್ಪರಿಗೆ ನಿಧಿ ಸಿಕ್ಕರೂ
ಬಾರದ ನೆಮ್ಮದಿ...
ಎಲ್ಲವೂ ನಶ್ವರ ನಶ್ವರ
ಆದಿಕೇಶವನೊಬ್ಬನೇ ಶಾಶ್ವತ.

ಹಾಡಿದ ಪ್ರಾರ್ಥನೆ ಎಲ್ಲವೂ
ಕಾಗಿನೆಲೆ ಕೇಶವನಿಗಾಗಿ
ಕನ್ನಡ ಸಾಹಿತ್ಯದ ಕೀರ್ತನೆಗಳಾಗಿ
ನಿನ್ನೀ ಭಕ್ತಿಯ ಶಕ್ತಿಗೆ ಒಲಿದ
ಉಡುಪಿಯ ಕೃಷ್ಣ ಕೇಶವನಾಗಿ... 

ಕನಕದಾಸರ ಜಯಂತಿಯ 
ಶುಭಾಶಯಗಳು 💐💐 Kanakadasaru

Kanakadasaru

894cab380587cc6aef08ca18ea687862

ತೇರು ವಾಗೀಶ್

ಮಾತೃ ಭಾಷೆ ಕನ್ನಡ 

ಇತಿಹಾಸದ ಕಾಲಘಟ್ಟದಲ್ಲಿ
ನಶಿಸಿವೆ ನೂರಾರು ಭಾಷೆಗಳು...
ನಶಿಸಲು ಕಾರಣ ಒಂದೇ...
ಭಾಷೆಯ ಬಳಸದೇ..
ಭಾಷೆಯ ಬರೆಯದೇ..
ಭಾಷೆಯ ಓದದೇ..ಭಾಷೆಯ ಕಲಿಸದೇ.
ಸೇರದಿರಲಿ ಈ ಸಾಲಿನಲ್ಲಿ ನಮ್ಮ ಕನ್ನಡ...

ಕರುಳ ಕುಡಿಗಳಿಗೆ ಕನ್ನಡದಲ್ಲಿ 
ಮಾತನಾಡಿಸದೇ.. ಓದದೆ-ಬರೆಯದೆ
ಉಳಿಸುವುದೇಗೆ ಮಾತೃಭಾಷೆ ಕನ್ನಡ.....
ಇರಲಿ ವೃತ್ತಿಗಾಗಿ ಹಲವು ಭಾಷೆ
ಆದರೆ ಹೃದಯಕ್ಕಾಗಿ ಒಂದೇ ಭಾಷೆ
ಅದುವೇ ನಮ್ಮ ಹೆಮ್ಮೆಯ ಕನ್ನಡ.. ಕನ್ನಡ

ಕನ್ನಡ

894cab380587cc6aef08ca18ea687862

ತೇರು ವಾಗೀಶ್

ಸ್ವರ್ಗ ನರಕ

ಸ್ವರ್ಗ ನರಕಗಳ ಗೊಡವೆ ಏಕೆ ?
ಕಾಣದ ಲೋಕದ ಭ್ರಮೆ ಏಕೆ ?
ನಿನ್ನಂತರಂಗದ ಪುಟ್ಟ ಪ್ರಪಂಚದಲ್ಲಿ
ಎಲ್ಲವೂ ಅಡಗಿರುವಾಗ....

ನಿನ್ನದೇ ಸ್ಥಳ...  ನಿಮ್ಮವರೇ ಜನ 
ನಿನ್ನ ಬಂಧು ಸಂಬಂಧಗಳ
ಬರುವ ಸನ್ನಿವೇಶಗಳ
ಸ್ವರ್ಗ ನರಕಗಳನ್ನಾಗಿ 
ಸೃಷ್ಟಿಸಿಕೊಳ್ಳುವ  ಆಯ್ಕೆಯೂ  
ಸಹ ನಿನ್ನದೇ..... ಇರುವಾಗ
ಕಾಣದ ಲೋಕದ ಭ್ರಮೆ ಏಕೆ?? ಸ್ವರ್ಗ ನರಕ

ಸ್ವರ್ಗ ನರಕ

894cab380587cc6aef08ca18ea687862

ತೇರು ವಾಗೀಶ್

ಸಹೃದಯಿ ಕನ್ನಡಿಗ

ಅನ್ಯ ಭಾಷಿಕರ ಹೃದಯ
ಗೆಲ್ಲಲು ಅವರ ಭಾಷೆಯಲ್ಲೇ
ವ್ಯವಹರಿಸುವೆ ನೀನು....

ಅನ್ಯ ಭಾಷಿಕರಿಗೆ ಕನ್ನಡವ
ಕಲಿಸದೇ.. ಕನ್ನಡವ ನುಡಿಸದೇ..
ಹೃದಯ ಶೂನ್ಯನಾಗಿರುವೆ ನೀನು...

ಕನ್ನಡವ ಸ್ತುತಿಸದೇ... ಕನ್ನಡ 
ಕಲಿಸದೇ... ಕನ್ನಡವ ಉಳಿಸದೇ..
ಕನ್ನಡೀಕರಿಸದೆ ಈ ನಾಡಿನ
ಸಾರ್ವಭೌಮನಾಗುವೆಯಾ ನೀನು....??? ಸಹೃದಯಿ ಕನ್ನಡಿಗ

ಸಹೃದಯಿ ಕನ್ನಡಿಗ

894cab380587cc6aef08ca18ea687862

ತೇರು ವಾಗೀಶ್

ಕರ್ನಾಟಕ ಏಕೀಕರಣ

ಸ್ವಾತಂತ್ರದ ಹೊಸ್ತಿಲಲ್ಲಿ 
ಹಲವು ಪ್ರಾಂತ್ಯಗಳಲ್ಲಿ 
ಹರಿದು ಹಂಚಿ ಹೋದೆವು ನಾವು... 
ತಾಯ್ನುಡಿಯ ಹಂಬಲಿಸಿ ಕರೆದವು
ಕರುಳ ಬಳ್ಳಿಯ ಮಕ್ಕಳಿಗಾಗಿ ಕೂಗು... 

ನಾವು ಕೂಗಿ ಕೂಗಿ ಕರೆದೆವು
ನಾವು ಕನ್ನಡಿಗರೆಂದು..... 
ಕನ್ನಡಿಗರ ಕೂಗು ಕೇಳುತ್ತಾ
ಹುಡುಕುತ್ತಾ ಬಂದರು..
ಏಕೀಕರಣ ನಿರ್ಮಾತೃಗಳು..

ಏಕೀಕರಣ ರೂವಾರಿಗಳ 
ಹೋರಾಟದ ಫಲವಾಗಿ 
ಉದಯವಾಯಿತು ಈ 
ನಮ್ಮ ಚೆಲುವ ಕನ್ನಡನಾಡು....
ಕರ್ನಾಟಕವೆಂದು ನಾಮಕರಣಗೊಂಡು...
     ಕರ್ನಾಟಕ ಏಕೀಕರಣ

ಕರ್ನಾಟಕ ಏಕೀಕರಣ

894cab380587cc6aef08ca18ea687862

ತೇರು ವಾಗೀಶ್

ಬೆಟ್ಟದ ಹೂವಿನ ಕನವರಿಕೆ

ಕನ್ನಡ ನಟಸಾರ್ವಭೌಮನ ಮಗ
ಹೃದಯ ಸಾರ್ವಭೌಮನ ನೆನೆದು 
ಕೋಟಿ ಹೃದಯಗಳು ಭಾವುಕವಾಗಿವೆ..

ರಾಜರತ್ನನ ವಿನಯ ಸರಳತೆಯಲಿ
ಮಿಂದೆದ್ದ ಯುವರತ್ನನ ಅಗಲಿಕೆಯು
ಭಾರವಾಗಿಸಿದೆ ಕೋಟಿ ಹೃದಯಗಳನ್ನು...

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ 
ತಿಳಿಯದಂತೆ.. ಕೊಟ್ಟು  ಕೊಟ್ಟಿಲ್ಲದಂತೆ
ಬದುಕಿ ತೋರಿಸಿದ ಹೃದಯ ಸಾಮ್ರಾಟ ನೀನು..

ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದೆನ್ನುತ್ತಾ 
ದೊಡ್ಡವರಿಗಿಂತ ಬಲು ದೊಡ್ಡವನಾದ
ಮರೆಯಲಾಗದ ಬೆಟ್ಟದ ಹೂವು ನೀನು.. Punith Rajkumar

Punith Rajkumar

894cab380587cc6aef08ca18ea687862

ತೇರು ವಾಗೀಶ್

ಪ್ರಜಾಪ್ರಭುತ್ವದ ಗೆಲುವು

ಬ್ರಿಟನ್ ದೇಶದ ಪ್ರಧಾನಿಯಾಗಿ
ಇನ್ಫೋಸಿಸ್ ಸುಧಕ್ಕನ ಅಳಿಯ
ರಿಷಿ ಸುನಾಕ್ ರ ಆಯ್ಕೆಯು 
ನಮ್ಮೆಲ್ಲರ ಹೆಮ್ಮೆಯ ಗೆಲುವು 
ಎಂಬಂತೆ ಕೂಗಿ ಬೀಗಿದೆವು......

ಎರಡು ಶತಕಗಳ ಕಾಲ ನಮ್ಮನ್ನಾಳಿದ
ಬ್ರಿಟಿಷರಿಗೆ ಓವ೯ ಭಾರತೀಯನಿಂದ 
ಆಳಿಸಿಕೊಳ್ಳುವ ಕಾಲ ಬಂದಿತು ಎಂದು 
ಪುಂಕಾನು ಪುಂಕವಾಗಿ ಕೂಗಾಡಿದೆವು....

ಆದರೆ !!....
ಅರ್ಹ ವ್ಯಕ್ತಿ ಯಾರಾದರೇನಂತೆ...
ಜಾತಿ ಮತ ದೇಶ ಧರ್ಮವ ಮೀರಿ 
ಅಧಿಕಾರ ನೀಡಿದ  ಬ್ರಿಟನ್ ಜನತೆಯ
ದೂರ ದೃಷ್ಟಿಯ ಐತಿಹಾಸಿಕ ಗೆಲುವೆಂದು....
ಪ್ರಜಾಪ್ರಭುತ್ವದ ರೋಚಕ ದಿಗ್ವಿಜಯವೆಂದು..
ತಿಳಿಯದಾದೇವು ನಾವು.... Rishi sunak

Rishi sunak

894cab380587cc6aef08ca18ea687862

ತೇರು ವಾಗೀಶ್

ಗ್ರಹಣ

ಗ್ರಹಣಗಳಿಲ್ಲದೇ ವಷ೯ಗಳಿಲ್ಲ
ಪರಿಭ್ರಮಣವಿಲ್ಲದೇ ಚಲನೆಯಿಲ್ಲ... 
ನೆರಳು ಬೆಳಕಿನ ವಿಸ್ಮಯದ
ಸೂರ್ಯ ಭೂಮಿ ಚಂದ್ರರ
ಸುಂದರ ಕಣ್ಣಾಮುಚ್ಚಾಲೆ ಆಟ....

ಗ್ರಹಣಗಳೇನೆಂದು ವೈಜ್ಞಾನಿಕವಾಗಿ 
ಓದಿದ್ದು ಆಯ್ತು... ತಿಳಿದಿದ್ದು ಆಯ್ತು..
ಪರೀಕ್ಷೆಯಲ್ಲಿ ಉದ್ದುದ್ದ ಬರೆದಿದ್ದು ಆಯ್ತು 
ಆದರೂ ಗ್ರಹಣ ಬಡಿದಿರುವುದು ಮನಸ್ಸಿಗೋ
ಗ್ರಹಗಳಿಗೋ ತಿಳಿಯದಾದೇನು ??

ಸಮುದ್ರ ಅಣೆಕಟ್ಟಿನ ನೀರಿಗೆ ಇಲ್ಲದ 
ಗ್ರಹಣ ಛಾಯೆ.... ಮನೆಯಲ್ಲಿರುವ 
ನೀರಿಗೆ ಗ್ರಹಣದ ಛಾಯೆ ತಟ್ಟೀತೇ...
ಪ್ರಾಣಿ ಪಕ್ಷಿಗಳಿಗಿಲ್ಲದ ಗ್ರಹಣ ದೋಷ... 
ನರನಿಗೆ ದೋಷ ತಟ್ಟೀತೆ?? 
ಗ್ರಹಣದ ವ್ಯೂಹದೊಳಗೆ ಸಿಲುಕಿಸಿದವರು
ಯಾರೋ ತಿಳಿಯದಾದೆನು ?? Solar eclipse

Solar eclipse

894cab380587cc6aef08ca18ea687862

ತೇರು ವಾಗೀಶ್

ಸುಭಾಷ್ ಚಂದ್ರ ಬೋಸ್

ಸಾಕು ಸಾಕಾಗಿದೆ ಮಂದಗಾಮಿಗಳ
ಸಹವಾಸ....ಉಪವಾಸ ಸತ್ಯಾಗ್ರಹಗಳ 
ಗೋಗರೆಯುವ ಶಾಂತಿ ಸಂಧಾನದ ನಾಟಕ....
ಇನ್ನೂ ಹೆಚ್ಚು ದಿವಸ ಕಾಯಿಸಲಾರೆನು 
ತಾಯಿ ಭಾರತಿಯನ್ನು ಬಂಧನ ಮುಕ್ತಗೊಳಿಸಲು.....

ಶಾಂತಿಯಿಂದ ಸ್ವರಾಜ್ಯ ಸಿಗುವುದೆಂಬ 
ಭ್ರಮೆಯಿಂದ ಹೊರಬರದ ಹೊರತು...
ನವ ತರುಣರಲ್ಲಿ ಸ್ವಾತಂತ್ರ್ಯದ
ಕಿಡಿಯ ಕಿಚ್ಚು ಹಚ್ಚಿಸದ ಹೊರತು.. 
ಪರಂಗಿಗಳಿಗೆ ಫಿರಂಗಿಯ ಗುಂಡುಗಳ
ಮೂಲಕ ಉತ್ತರ ನೀಡದ ಹೊರತು... 
ಇನ್ನೆಲ್ಲಿ ದಕ್ಕೀತು ನಿಮಗೆ ಸ್ವಾತಂತ್ರ್ಯ??

ನೀಡುವೆನು ನಿಮಗೆ ಬಿಸಿ ರಕ್ತದ ವಾಗ್ದಾನ...
ಸ್ವರಾಜ್ಯಕ್ಕಾಗಿ ಕೊಡಿ ನಿಮ್ಮ ಬಿಸಿಯ ನೆತ್ತರ...
ಕೊಂಡೊಯ್ಯುವೆನು  ಭಾರತಾಂಬೆಯ ಧ್ವಜವನು
ಮುಗಿಲೆತ್ತರ...ಸ್ವತಂತ್ರದ ಹತ್ತಿರ..ಹತ್ತಿರ..

ಸ್ವರಾಜ್ಯಕ್ಕಾಗಿ ಮೊಳಗಿತು ಕ್ರಾಂತಿಯ ಕಹಳೆ
ದೇಶದಲ್ಲೆಡೆ ಪಸರಿಸಿತು ಹೋರಾಟದ ಜ್ವಾಲೆ..
ರಾಷ್ಟ್ರೀಯ ಸೇನೆ ಸೇರಲು ತರುಣರ ತವಕ
ಬಿಳಿ ಮೊಗದ ಪರಂಗಿಗಳಿಗೆ ಹೆಚ್ಚಾಯ್ತು ನಡುಕ
ಜೈ ಹಿಂದ್... ಇಕ್ವಿಲಾಬ್ ಜಿಂದಾಬಾದ್..
ಶಾಂತಿಯಿಂದ ಕ್ರಾಂತಿಯೆಡೆಗೆ ಹೊಸ ಮನ್ವಂತರದ
ಹಾದಿಯಲ್ಲಿ ವೇಗವಾಗಿ ಸಾಗಿತು ಸ್ವತಂತ್ರ ಭಾರತ... Subhash Chandra Bose

Subhash Chandra Bose

loader
Home
Explore
Events
Notification
Profile