Nojoto: Largest Storytelling Platform
ashwinibaragali6407
  • 2.3KStories
  • 3Followers
  • 1Love
    0Views

Ashwini Baragali

  • Popular
  • Latest
  • Video
abb14cb82e22f2b07c5410f94d7bcd4b

Ashwini Baragali

**** ದೀಪಾವಳಿ******
🌋🌋🌋🌋🌋🌋🌋🌋

ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಹಬ್ಬ
ಕನಸುಗಳ ಹಾದಿಯಲಿ ದೀಪಗಳ ಸಾಲಿನ ಹಬ್ಬ....!!

ಬೆಳಕಿನ ಓಕುಳಿಯ ಎರೆಚಿ ಬಾಳು ಬೆಳಗುತ
ಮನೆ-ಮನೆಯಲ್ಲಿ ಖುಷಿಯ ಸರಿಗಮ ಹಂಚುತ....!!

ಮೂಡಿಸುತ ಖುಷಿಯ ಚಿತ್ತಾರ 
ಕಳೆಯುವದು ಎಲ್ಲ ಅಂಧಕಾರ....!!

ಬಾಳನು ಬೆಳಗಲಿ ಬೆಳಕಿನ‌ ಹಬ್ಬ
ಎಲ್ಲರ ನಗುವ ಅರಳಿಸಿ ಒಲವ ಬೆರೆಸಿ...!!

ಹೊಸತನದ ಬೆಳಕ ಹರಿಸಿದ ಹೊಸತನದಲಿ
ಹೊಸ ಬದುಕಿಗೆ ಕಾಲಿಡುತ ಕಾತುರತೆಯಲಿ....!!

ಬೆಳಗಳಲಿ ಎಲ್ಲರ ಬಾಳು ಹಣತೆಯಂತೆ ಸದಾ.....
ದೀಪಗಳ ಸಾಲು ಸಾಲಿನಲ್ಲಿ ಹರಿದು ಬರಲಿ ಹೊಂಬೆಳಕು
ದೀಪವಾಳಿ ಹಬ್ಬದಂತೆ ಪ್ರತಿದಿನವೂ ನಗಲಿ ನಗುವು...!! 

 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ನನ್ನೆಲ್ಲ YQ ಬಳಗದವರಿಗೆ.....

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ನನ್ನೆಲ್ಲ YQ ಬಳಗದವರಿಗೆ.....

0 Love

abb14cb82e22f2b07c5410f94d7bcd4b

Ashwini Baragali

** ನೀಲ ಮುಗಿಲು **
🌹🌷🌹🌷🌹🌷🌹🌷

ನೀಲಾಗಸದಿ ನೀ ನಿಂತು ಕರೆವಾಗ
ಮಾಯೆಯ ಮೋಡಿಯಲಿ ನಾ ಬಂಧಿ
ತಿಳಿನೀಲಿ ಬಣ್ಣ ಬದುಕಿಗೆ ಬಂದಾಗ
ತಿಳಿಯದಂತ ಮರುಳಲಿ ನಾ ಬಂಧಿ.......!!

ನೀಲಮುಗಿಲ ಮಡಿಲಲ್ಲಿ 
ನಿನ್ನದೇ ಒಲವಿನ ಪ್ರತಿಫಲನ
ನೀಲಿ ಶಾಹಿಯ ಪದಗಳಲ್ಲಿ
ನಿನ್ನದೇ ನೆನಪಿನ ಸಂಚಲನ....!!

ನೀಲಿ ಮಳೆಯಾಗುವದೆಂದು
ಬಾನತ್ತ ಬಾಯ್ದೆರೆದು ನಿಂತಾಯ್ತು
ನೀನಿರದ ಖಾಲಿ ಬಾನಲಿ ಇಂದೆಂದೂ
ನಾ ರೆಕ್ಕೆಬಿಚ್ಚಿ ಹಾರದಂತಾಯ್ತು.....!!

ಪ್ರೀತಿಗೆ ಸ್ಪೂರ್ತಿ ನೀಲಾಂಬರ
ಕಳೆದು ಮರೆತೆರೆ ಎಲ್ಲಿಯ ಸಡಗರ
ಆತ್ಮಘಾತಕೆ ಸೋತ ಕಂಗಳ ಅಂಚಲಿ
ಹೇಗೆ ಬಿಡಿಸಲಿ ತಾರೆಗಳ ಒಂಟಿ ಕುಂಚಲಿ....!! OPEN FOR COLLAB✨ #ATnaturebg59
• A Challenge by Aesthetic Thoughts! ✨

Collab with your soulful words.✨ 

• Must use hashtag: #aestheticthoughts 

• Please maintain the aesthetics.

OPEN FOR COLLAB✨ #ATnaturebg59 • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics. #Inspiration #yqbaba #yqdidi #YourQuoteAndMine #yqaestheticthoughts

0 Love

abb14cb82e22f2b07c5410f94d7bcd4b

Ashwini Baragali

ಮನಸ್ಸು ಮುರಿದ ಮಾತಿಗೆ
ಮೌನವಿರದ ಸಾಂತ್ವನ.....!!

ಕಣ್ಣು ತರೆದ ಕನಸಿಗೆ 
ಉಸಿರು ಬಸೆದ ಭಾವನ.....!!

ಜೀವವಿರದ ದೇಹಕ್ಕೆ
ಆತ್ಮದಿಂದ ಬಂಧನ......!!

ಅವನು ಇರದ ಬದುಕಲಿ
ನೆನಪಗಳದ್ದೇ ಕವನ.......!!

ನೆನೆವ ಕ್ಷಣಕ್ಷಣಕ್ಕೂ
ಒಲವೇ ನವನವೀನ.....!!
 #ಕ್ರಾಂತದರ್ಶಿಕಾಂತಿ #ಮಂದಾರ #ಒಲವು_ಧಾರೆ #ನೆನಪು

#ಕ್ರಾಂತದರ್ಶಿಕಾಂತಿ #ಮಂದಾರ #ಒಲವು_ಧಾರೆ #ನೆನಪು

0 Love

abb14cb82e22f2b07c5410f94d7bcd4b

Ashwini Baragali




             ** ಶರಣಾಗತಿಯ ಶರಣು ಗುರುವಿಗೆ **

   ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏💐


            ನಿಮ್ಮ ಅಡಿಗಳಿಗೆ ನಮಿಸುತ್ತ 
            ಅಡಿಬರಹದಲ್ಲಿ ನಿಮಗೊಂದಿಷ್ಟು ಶರಣು ನುಡಿಗಳು ಶರಣೆಂದೆ ಗುರುವೇ ಶರಣು ನಿನಗೆ
ಶರಣಾಗತಿ ದೇವರಿಗಿಂತ ಮಿಗಿಲಾದವರಿಗೆ

ಶಾಖ ಶಕ್ಯಗಳಾಟ ಸುಳ್ಳೆಂದು 
ಶಾಲೆಯನ್ನು ದೇವಾಲಯ ಮಾಡಿದವರಿಗೆ

ಶಿಲೆಯಲ್ಲಿ ಕಲೆಯನ್ನು ಕೆತ್ತಿ
ಶಿಖರದೆತ್ತರಕ್ಕೆ ಬೆಳೆಸಿದವರಿಗೆ

ಶರಣೆಂದೆ ಗುರುವೇ ಶರಣು ನಿನಗೆ ಶರಣಾಗತಿ ದೇವರಿಗಿಂತ ಮಿಗಿಲಾದವರಿಗೆ ಶಾಖ ಶಕ್ಯಗಳಾಟ ಸುಳ್ಳೆಂದು ಶಾಲೆಯನ್ನು ದೇವಾಲಯ ಮಾಡಿದವರಿಗೆ ಶಿಲೆಯಲ್ಲಿ ಕಲೆಯನ್ನು ಕೆತ್ತಿ ಶಿಖರದೆತ್ತರಕ್ಕೆ ಬೆಳೆಸಿದವರಿಗೆ

0 Love

abb14cb82e22f2b07c5410f94d7bcd4b

Ashwini Baragali

Time may change 
People may change
In our life.

Time may come again
People may come again
In our life.

The month September 
May come yearly
Without changing anything
In my life.

I ought to be thankful
To this month
For not revamping anything....!! Happy September, Resties!❤️

May this new beginning help you create more sunshines and accept the rainbows in you🌈

Collab on this prompt and address September with your words!✨

Don't forget to highlight and share this post, so no one misses out!😍

Happy September, Resties!❤️ May this new beginning help you create more sunshines and accept the rainbows in you🌈 Collab on this prompt and address September with your words!✨ Don't forget to highlight and share this post, so no one misses out!😍 #yqbaba #YourQuoteAndMine #yqrestzone #collabwithrestzone #rzdear_september

0 Love

abb14cb82e22f2b07c5410f94d7bcd4b

Ashwini Baragali

** ಹೆಣ್ಣು **
🌷🌷🌷🌷🌷

ಗುಡಿಯಲ್ಲಿ ಕುಳಿತ  ಮೌನ ದೇವತೆ
ಗಡಿಯಲ್ಲಿ ನಿಂತು ದೇಶ ಕಾಯೋ ವೀರ ವನಿತೆ
ಪ್ರತಿ ಕ್ಷಣಕ್ಕೂ ಹೆಚ್ಚುತ್ತಿದೆ ಇವಳ‌ ಘನತೆ
ಶಕ್ತಿ ಶೌರ್ಯಗಳೇ ಒಲವಿಗೆ ಒರತೆ
ಸೋಲಳು ಎಂದೂ ಭಾವದಲಿ ಅಧೀರತೆ
ಕುಂದದು ಎದೆಯೊಳಗಿನ ಮಾನವೀಯತೆ
ಧೈರ್ಯ ಸಾಹಗಳ ಪರಾಕ್ರಮತೆ
ಮೆಚ್ಚಿ ಹರಸಿಹರು ಜಗದ ಜನತೆ.......!! #ಮಂದಾರ #krantadarshikanti #yqquotes #yqwomenempowerment
abb14cb82e22f2b07c5410f94d7bcd4b

Ashwini Baragali

ಈ ಜಗತ್ತಲ್ಲಿ..........

                    ನಮಗೆ ಬೇಕಾಗಿದ್ದು ಸಿಗಲ್ಲ
                    ಸಿಕ್ಕಿದ್ದು ಬೇಕಾದಂತಿರಲ್ಲ....  After a long gap.....

After a long gap.....

0 Love

abb14cb82e22f2b07c5410f94d7bcd4b

Ashwini Baragali

ಅಪ್ಸರೆ ನೀ ಕಂದ ಮುಂದೊಂದು ದಿನ
ನಗುವಿನ ಚಿಲುಮೆ ನೀನು ಪ್ರತಿದಿನ 

ಜಗತ್ತಿಗೆಲ್ಲ ಚೆಂದ ಈ ನಿನ್ನ ಕಣ್ಣ ಅಂದ
ಆ ಮೋಡಿಯಲಿ ಕಳೆದ್ಹೋಗಲು ಬಲು ಚೆಂದ

ನಿನ್ನ ಕೆಣ್ಣೆ ಹೊಳಪು ಕಾಮನ ಬಿಲ್ಲಂತೆ
ಪ್ರತಿಕ್ಷಣ ಸೆಳೆವ ಚೆಲುವ ಕಂಪಂತೆ

ಹೊಗಳಿದಷ್ಟು ಪದಗಳ ಕೊರತೆ
ಎಂದೂ ಬತ್ತದು ನಿನ್ನೊಲವಿನ ಒರತೆ

ಮಗು ನಿನ್ನ ನೋಡುತಿರಲು, ಎತ್ತಿ ಮುದ್ದಾಡುತಿರಲು
ಸ್ವರ್ಗ ಈ ಎರಡು ಕೈಗಳಲ್ಲಿರಬಹುದೆನೋ....!! #ಕ್ರಾಂತದರ್ಶಿಕಾಂತಿ #ಮಂದಾರ

#ಕ್ರಾಂತದರ್ಶಿಕಾಂತಿ #ಮಂದಾರ

0 Love

abb14cb82e22f2b07c5410f94d7bcd4b

Ashwini Baragali

ಏಕಾಂತದ ಕಡಲು
ನನ್ನೆದೆಯ ಒಡಲು
ನೆನಪಾಗುವ ಪ್ರತಿಕ್ಷಣಕ್ಕೂ
ನೆನಪುಗಳೇ ಆಸರೆಯ ಮಡಿಲು....!!

ವಿಳಾಸವಿಲ್ಲದ ಪಯಣ
ವಿವರಿಸಲಾಗದ ಕಾರಣ
ತಲುಪಲಾಗದೇ ಕಳೆದಿರುವೆ
ಬರಿದಾದ ಬದುಕೆಂಬ ಹೂರಣ....!!

ಈ ಸಂಜೆ ಹಿತವಾಗಿದೆ
ತಂಗಾಳಿ ಬೀಸಿ ಹೂವುದುರಿದೆ
ಮೊಳೆತ ಬಯಕೆಯ ಉಸಿರ ನೀಡಲು
ಒಲವ ವರ್ಷಧಾರೆಯು ತನುಮನವ ತುಂಬಿದೆ....!!

ನಿತ್ಯ ಬದುಕಲಿ ನೆನಪುಗಳದ್ದೆ ಪೈಪೋಟಿ
ತಾಳ ತಪ್ಪಿ ನೋವು ಬಾರದೇ ಹತೋಟಿ
ಸುಖವೆಂಬ ಮರೀಚಿಕೆಯ ಮಾಯದಾಟದಲಿ
ಹುಡುಕುತಿರುವೆ ನಿನ್ನನೇ ಎಲ್ಲ ಗಡಿಗಳ ದಾಟಿ....!!

0 Love

abb14cb82e22f2b07c5410f94d7bcd4b

Ashwini Baragali

.... ನೆನಪುಗಳ ನೆನಪಲ್ಲಿ ನಾ ನೆನೆದ ಕ್ಷಣಗಳು..... Quote ಬರೆಯಬೇಕೆನಿಸಿದ ಆತ್ಮೀಯರು ಬರೆದು ಪೋಸ್ಟ್ ಹಾಕಿ.....  Collab ಮಾಡಿ

ನೆನಪುಗಳ ನೆನಪಲ್ಲಿ ನಾ ನೆನೆದ ಕ್ಷಣಗಳು..... Quote ಬರೆಯಬೇಕೆನಿಸಿದ ಆತ್ಮೀಯರು ಬರೆದು ಪೋಸ್ಟ್ ಹಾಕಿ..... Collab ಮಾಡಿ

0 Love

loader
Home
Explore
Events
Notification
Profile