Nojoto: Largest Storytelling Platform
v8120375473386
  • 154Stories
  • 0Followers
  • 0Love
    0Views

Vನಾಯಕ ಮುದಡಗಿ

  • Popular
  • Latest
  • Video
adee4d69712ef05ad27f627076ef3c12

Vನಾಯಕ ಮುದಡಗಿ

ಕುಸುಮ ಕೇಳಿತು,
ನಾ ಹೇಗೆ ಧನ್ಯತೆಯಿಂದ ನಿನ್ನ ಪೂಜಿಸಿ ಭಜಿಸಲಿ, ಓ ರವಿ ? ಎಂದು.
ರವಿ ಹೇಳಿದನು,
ಹೆಚ್ಚೇನು ಬೇಡ, ನಿನ್ನ ಪರಿಶುದ್ಧ ಸರಳ ಮಂದಸ್ಮಿತ ಮೌನ ಸಾಕೆನಗೆ ಎಂದು... ಮೌನದ ಮಂದಿರ ಸಾಕೆನಗೆ....✨
#ಮೌನರಾಗ

ಮೌನದ ಮಂದಿರ ಸಾಕೆನಗೆ....✨ #ಮೌನರಾಗ

0 Love

adee4d69712ef05ad27f627076ef3c12

Vನಾಯಕ ಮುದಡಗಿ

ತುಂಬಿ ತುಳಕ್ಯಾನ ನೋಡ ನಮ್ಮ ವರಕವಿ ಕವಿ ...!!

ತುಂ ತುಂ ತುಂ ತುಂಬಿ ಬಂದಾನ ನೋಡ 
ತುಂಬಿಯ ಹಂಗ ಕನ್ನಡ ಪದಗಳ ರಸವನ್ನಹೀರಿ
ತುಂತುರು ಹನಿಗಳ ನಡುವೆ ತಕದಿಮಿವೆನಿಸಿ 
ತಣಿಸಲು ಬಂದಾನ ನೋಡ ಶ್ರಾವಣಮಾಸದಿ 
ತುಂಬಿ ಬಂದಾನ ನೋಡ,ಇವ ಶ್ರಾವಣ ಕವಿ ||

ಮುತ್ತು ಪೋಣಿಸಿದಾಂಗ ಪದಗಳ ಪೋಣಿಸ್ಯಾನ
ಮಂದಾರಪುಷ್ಪದಾಂಗ ಮನದಿ ಮನಮಾಡ್ಯಾನ
ಮನ ಕಲ್ಲುಮಾಡಿದವಗ ಕವನದ ಸಕ್ಕರಿ ಹಂಚಿ ಸಿಹಿಮಾಡ್ಯಾನ
ಮಾಂತ್ರಿಕನು ಇವನು ಮನದಿ ತಣಿಸುವಾಂಗ ಮಂತ್ರವ ಹಾಕ್ಯಾನ
ತುಂಬಿ ಬಂದಾನ ನೋಡ, ಇವ ಶಬ್ದ ಗಾರುಡಿಗ ||

ಗತ್ತಿಲೇ ಬರದಾನ ಗಂಡೆದೆಯ ಕವಿ ವೀರ
ಕಾವ್ಯಕ್ಕೆ ಸರಿಕಾಣಿ ಅದು ಇವನ ರುದ್ರವೀಣೆ
ಸೋಗಿಲ್ಲ ಅವನಿಗೆ ಸಾಂತ್ವನ ಹೇಳುವ ಸಂತ 
ಅದನ ಬಾಳಾಗ ಬೆಂದು ಬರೆದಾನ ಬಡಕವಿ 
ತುಂಬಿ ಬಂದಾನ ನೋಡ,ಇವ ವರಕವಿ ||

ತುಂ ತುಂ ತುಂ ತುಂಬಿ ಬಂದಾನ ನೋಡ ಜಗದ ಯುಗದ ರಸಿಕರ ವರಕವಿ 
ತುಂಬಿ ತುಳಕ್ಯಾನ ನೋಡ ನಮ್ಮ ಬೇಂದ್ರೆ ಕವಿ ||

0 Love

adee4d69712ef05ad27f627076ef3c12

Vನಾಯಕ ಮುದಡಗಿ

......

0 Love

adee4d69712ef05ad27f627076ef3c12

Vನಾಯಕ ಮುದಡಗಿ

.... ...

...

0 Love

adee4d69712ef05ad27f627076ef3c12

Vನಾಯಕ ಮುದಡಗಿ

ಸಾವಿರಾರು ಸರದಿಯ ಜನುಮ ಸಂದರು ಸಾರಥಿಯಾಗ ಬಯಸುವೆ ಸವಿಗನ್ನಡ ಸಾರಲು... ಗರ್ವದಿಂದ ಗರ್ಜಿಸ ಬಯಸುವೆ ನಾನು ಕನ್ನಡಿಗನೆಂದು...💛❤️
#ಕನ್ನಡರಾಜ್ಯೋತ್ಸವ 
#ಕನ್ನಡಿಗನಮನದಮಾತು

ಗರ್ವದಿಂದ ಗರ್ಜಿಸ ಬಯಸುವೆ ನಾನು ಕನ್ನಡಿಗನೆಂದು...💛❤️ #ಕನ್ನಡರಾಜ್ಯೋತ್ಸವ #ಕನ್ನಡಿಗನಮನದಮಾತು

0 Love

adee4d69712ef05ad27f627076ef3c12

Vನಾಯಕ ಮುದಡಗಿ

ಕಳಿಸಿರುವೆ ನಾನೊಂದು ಆಕಾಶಬುಟ್ಟಿ...! ✨ಸೋಲು ಗೆಲುವುಗಳ ಪ್ರೀತಿಯನು ಒಯ್ಯುತ್ತಿರುವ ದೀಪ...ನನ್ನ ಆಕಾಶ ದೀಪ ✨
#ಆಕಾಶದೀಪ
#ಕನ್ನಡಕವನಗಳು  #ಕನ್ನಡಿಗನಮನದಮಾತು

✨ಸೋಲು ಗೆಲುವುಗಳ ಪ್ರೀತಿಯನು ಒಯ್ಯುತ್ತಿರುವ ದೀಪ...ನನ್ನ ಆಕಾಶ ದೀಪ ✨ #ಆಕಾಶದೀಪ #ಕನ್ನಡಕವನಗಳು #ಕನ್ನಡಿಗನಮನದಮಾತು

0 Love

adee4d69712ef05ad27f627076ef3c12

Vನಾಯಕ ಮುದಡಗಿ

.... Sometimes in the pages we don't mind reading itself, there will be the answeres we search for...
#malgudidays

Sometimes in the pages we don't mind reading itself, there will be the answeres we search for... #MalgudiDays

0 Love

adee4d69712ef05ad27f627076ef3c12

Vನಾಯಕ ಮುದಡಗಿ

ಯಾನವಿದು ಮನದಾನವಿದು
ರಂಗಾಯಣದ ರಂಗ ತರಂಗವಿದು
ಗೋವಿಂದನ ಗಾನ ನಾರಿಯರ ನಾಟ್ಯವಿದು
ಬಿಳಿಗಿರಿಯ ಒಡೆಯ ಸೋತ ಸೋಲಿಗರ ಬಾಲೆಯ ನಾಟಕವಿದು ನಾಟಕದ ಅನುಭವ

ನಾಟಕದ ಅನುಭವ

0 Love

adee4d69712ef05ad27f627076ef3c12

Vನಾಯಕ ಮುದಡಗಿ

                           ಸೋಜಿಗರ ಬಾಲೆ

ನಿನ್ನ ಕಂಡು ಪದವೊಂದು ಕಟ್ಟಿ ಅದ ಹೇಳಲೇನಿಸಿದೆ
ತಾನಾ ರಚಿತವಾಗಿ ಏರುಪೇರುಗಳಿಂದ ಕ್ರಮ ಮರೆತಿದೆ ||
ತಾರಾಂಗಣದಲ್ಲಿ ತೇಲುತಿರುವ ತಂಗಾಳಿ ಮಿಡಿಯುತ್ತಿದೆ
ಸೃಷ್ಟಿಯ ಸಿಂಗಾರವ ಹಂಸವಾಹಿನಿಯ ವೀಣೆ ನುಡಿಯುತಿದೆ ||

ರಂಗು ಹಂಗಿನ ಹಸಿರು ಸೀರೆ, ಮಿಂಚುವ ಮಿಂಚುಗಣ್ಣಿನವಳು
ತುಳುಕು ನಡೆಯಲ್ಲಿ ಅರಳಿ ಉದುರಿದ ಮಲ್ಲಿಗೆ ಇವಳು ||
ನೂಲ ಹರಿದು ಎದಿ ಮ್ಯಾಗ ಸರಿದು ಬಿಗ್ಯಾವ ಸರ ಮುತ್ತ
ಆ ಬ್ರಹ್ಮ ರಚಿಸಿದ ಕೃತಿಯ ಹೊಸ ಚೊಚ್ಚಲ ಚೆಲುವೆಗ್ಯಾಳ ಕುಸುಮಾಲೆ ಅಂತ ||

ಹಸಿರ ಹೊದಿಕೆಯ ಬಿಳಿ ಕಲ್ಲಿನ ಒಡೆಯನಾದ ರಂಗನ
ಮನಸೋಲಿಸಿದ ಶೃಂಗಾರದ ಕಲ್ಪವೃಕ್ಷ ಆ ಬಾಲೆ ||
ಉತ್ತರ ಕರ್ನಾಟಕದ ಮಾತಿನಿಂದ ತುಂತುರಿಸಿ ಮನ ಎಚ್ಚರಿಸಿ
ಮಳೆಯಾಗಿ ಮಿಂದಿಸಿದ ಕುಸುಮಾಲೆ ಪಾತ್ರದ ಈ  ಸೋಜಿಗರ ಬಾಲೆ || ಸೋಜಿಗರ ಬಾಲೆ - ಸೃಷ್ಟಿ✨

#ಕವನವೊಂದನುಬರೆಯುವೆ 
#ಕನ್ನಡಕವಿತೆ 
#ಸೋಜಿಗರ ಬಾಲೆ
#ಸೃಷ್ಟಿ

ಸೋಜಿಗರ ಬಾಲೆ - ಸೃಷ್ಟಿ✨ #ಕವನವೊಂದನುಬರೆಯುವೆ #ಕನ್ನಡಕವಿತೆ #ಸೋಜಿಗರ ಬಾಲೆ #ಸೃಷ್ಟಿ

0 Love

adee4d69712ef05ad27f627076ef3c12

Vನಾಯಕ ಮುದಡಗಿ

ಕವಿತೆ ಕವಿಗೆ ಕೇಳಿತು-
ನಿಜವಾದ ಪ್ರೀತಿಯ ಗುರುತೇನು ?
ಕವಿತೆ ಕಿರು ನಗುತ್ತಾ ಹೇಳಿತು ಅತ್ತುಬಿಡು ನೀನೊಮ್ಮೆ ಮಂದಹಾಸದಿ...!!!  शायद वही सच्चा प्यार का फल है !!
#truelove #shayad #kannadalove

शायद वही सच्चा प्यार का फल है !! #truelove #shayad #kannadalove

0 Love

loader
Home
Explore
Events
Notification
Profile