Nojoto: Largest Storytelling Platform
nojotouser5636567776
  • 17Stories
  • 57Followers
  • 114Love
    0Views

🌻ಶಿವಪುಷ್ಪ ಸಂಜಾತ✊

ಡಾllಮಹಾಂತೇಶ್ , Dr Mahantesh, ಕನ್ನಡಿಗ😍ನಿಸರ್ಗದ ಆರಾಧಕ🌻🍀🏝,Doctor💊, Gallivanter, Pogonophile, Photographer, Epistemophilic, Fitness Freak

  • Popular
  • Latest
  • Video
c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

ಇಬ್ಬನಿ🌨
ಗಾಳಿಯೊಳಗೆ ನೀರೊ, ನೀರೊಳಗೆ ಗಾಳಿಯೊ
ಮುಂಜಾನೆಯ ನೋಟಕೆ ಹಾಕಿದ ಪರದೆ
ಅದಾವ ಜಾದೂಗಾರನ ಸೆಲೆಯೊ,ಕಲೆಯೊ
ಹೊಂಗಿರಣದ ಸುಳಿವಿಲ್ಲ ಸಂಚಾರ ಸಾಗಿದೆ 

ಮೈ ಕೊರೆಯೊ ತಂಪು ಮೈಗೆ ತಾಗುತಿರಲು
ಜಡನಿದ್ದೆಗು ಕುತೂಹಲಕು ಜಗಳಾಟ
ಪರದೆಯೊಳು ನುಸುಳಿ ಮುನ್ನುಗ್ಗುತಿರಲು
ನಿಸರ್ಗದ ಅರಮನೆಯದೆ ಕಣ್ಣೋಟ         

ಮರ ಹೂಬಳ್ಳಿಗೆ ಸೊಗಸಾಗಿ ಆವರಿಸಿ
ಬಲೆ ಬೀಸುತಿಹೆ ನಿತ್ಯ ನಿಸರ್ಗಕೆ
ಕೋಗಿಲೆ ಗುಂಪಲಿ ಹೃನ್ಮನವ ಬೆರೆಸಿ
ಹಾಡುವೆ ರಾಗತಾಳವು ಇನ್ನೇತಕೆ               
 
ಉತ್ಸಾಹವ ಎರವಲು ಕೊಡುವೆಯಾ
ಇಬ್ಬನಿಯೇ ನಾ ನಿನಗೆ ಆಭಾರಿ
ನನ್ನೊಡನೆ ಒಪ್ಪಂದ ಮಾಡುವೆಯಾ
ನಾನುಳಿಯುವೆ ಎಂದೆಂದಿಗೂ ಸಂಚಾರಿ #ಕನ್ನಡ #ಕನ್ನಡಪದ್ಯ #ಇಬ್ಬನಿಹಾಡು #kannadapoem #mycomposition  #naturelove

#ಕನ್ನಡ #ಕನ್ನಡಪದ್ಯ #ಇಬ್ಬನಿಹಾಡು #kannadapoem #mycomposition #NatureLove

c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

ಇಬ್ಬನಿ🌨
ಗಾಳಿಯೊಳಗೆ ನೀರೊ, ನೀರೊಳಗೆ ಗಾಳಿಯೊ
ಮುಂಜಾನೆಯ ನೋಟಕೆ ಹಾಕಿದ ಪರದೆ
ಅದಾವ ಜಾದೂಗಾರನ ಸೆಲೆಯೊ,ಕಲೆಯೊ
             ಹೊಂಗಿರಣದ ಸುಳಿವಿಲ್ಲ ಸಂಚಾರ ಸಾಗಿದೆ    (೧)

ಮೈ ಕೊರೆಯೊ ತಂಪು ಮೈಗೆ ತಾಗುತಿರಲು
ಜಡನಿದ್ದೆಗು ಕುತೂಹಲಕು ಜಗಳಾಟ
ಪರದೆಯೊಳು ನುಸುಳಿ ಮುನ್ನುಗ್ಗುತಿರಲು
            ನಿಸರ್ಗದ ಅರಮನೆಯದೆ ಕಣ್ಣೋಟ              (೨)
      
ಮರ ಹೂಬಳ್ಳಿಗೆ ಸೊಗಸಾಗಿ ಆವರಿಸಿ
ಬಲೆ ಬೀಸುತಿಹೆ ನಿತ್ಯ ನಿಸರ್ಗಕೆ
ಕೋಗಿಲೆ ಗುಂಪಲಿ ಹೃನ್ಮನವ ಬೆರೆಸಿ
           ಹಾಡುವೆ ರಾಗತಾಳವು ಇನ್ನೇತಕೆ                  (೩)

ಉಲ್ಲಾಸವ ಎರವಲು ಕೊಡೆಯಾ
ಇಬ್ಬನಿಯೇ ನಾ ನಿನಗೆ ಆಭಾರಿ
ನನ್ನೊಡನೆ ಒಪ್ಪಂದ ಮಾಡುವೆಯಾ
ನಾನುಳಿಯುವೆ ಎಂದೆಂದಿಗೂ ಸಂಚಾರಿ    (೪) #ಕನ್ನಡ #ಕನ್ನಡಪದ್ಯ #ಇಬ್ಬನಿಹಾಡು #ನಿಸರ್ಗ #kannadapoem #mycomposition

#ಕನ್ನಡ #ಕನ್ನಡಪದ್ಯ #ಇಬ್ಬನಿಹಾಡು #ನಿಸರ್ಗ #kannadapoem #mycomposition

c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

 #ಕನ್ನಡ #ಕನ್ನಡಕವಿತೆ #ಪ್ರೀತಿ #ಕವಿಹೖದಯ #kannada #lovesong #loveatfirstsight #lovebirds

#ಕನ್ನಡ #ಕನ್ನಡಕವಿತೆ #ಪ್ರೀತಿ #ಕವಿಹೖದಯ #kannada #lovesong #loveatfirstsight #lovebirds #nojotophoto

c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

 #lovesong #lovebirds #emotions #ಕನ್ನಡ #ಕನ್ನಡಕವನ #ಪ್ರೀತಿ

#lovesong #lovebirds #Emotions #ಕನ್ನಡ #ಕನ್ನಡಕವನ #ಪ್ರೀತಿ #nojotophoto

c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

 #ಕನ್ನಡ #ಕನ್ನಡಪದ್ಯ #ಪ್ರೀತಿ #ಅಗಲಿಕೆ 
#lovesong #emotion #lovebirds

#ಕನ್ನಡ #ಕನ್ನಡಪದ್ಯ #ಪ್ರೀತಿ #ಅಗಲಿಕೆ #lovesong #Emotion #lovebirds #nojotophoto

c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

ಸಾಗರದ ಅಲೆಗಳು , ಮನದಾಳದ ಭಾವನೆಗಳು 
ಏರಿಳಿತ ಕಾಣುವದು ಪ್ರಕೖತಿ ಸಹಜ.
ಅಲೆಗಳು ದಡಕಪ್ಪಳಿಸಿ,ಭಾವನೆಗಳು ಜೀವಕಪ್ಪಳಿಸಿ 
ಹೆದರಿಸುತಿರೆ ಎದೆಗುಂದಬೇಡವೋ ಮನುಜ.  

ಸಾಗರದೊಡಲಲಿ ಜೀವಜಲಚರ ಹಾಯಾಗಿರೆ
ಸೖಷ್ಟಿಕರ್ತನ ಮೇಲೆಷ್ಟು ಅವುಗಳ ನಂಬಿಕೆ,
ಜೀವನ ಅಲ್ಲೋಲಕಲ್ಲೋಲವೆನಿಸಿದರೂ 
ಕಾಲಚಕ್ರಕೆ ತಲೆಬಾಗಿ ನಡೆಯೋಣ ಆತುರವೇಕೆ

ಮನುಜನುಗುಳುವ ವಿಷವನಂಗಿ, ಜಗದ 
ನಿಯಮವ ಮೀರದೆ ಸಾಗರವಿಲ್ಲವೇ ಮೌನ
ಉರಿವವರು ಉರಿಯಲಿ,ಕುದಿಯುವರು ಕುದಿಯಲಿ
ಯಾರಗಿವಿಗೊಡದೆ ಸಾಧನೆಯಲಿರೋನೇ ಜಾಣ

ಹುಣ್ಣಿಮೆಯು ಹತ್ತಿರವಾಗುತಿರೆ, ಸಾಗರದಲೆಗಳು 
ಮಿತಿಮೀರಿದರೂ ಕಡಲಾಗುವುದಿಲ್ಲವೇ ಪ್ರಶಾಂತ,
ಸೋಲುಗೆಲುವಿನ ಏರಿಳಿತಗಳನ್ನ ಎದುರಿಸಿ
ಸಮತೋಲನ ಕಾದರಲ್ಲವೇ ಮನುಕುಲಕೆ ಹಿತ #ಕನ್ನಡ #ಕನ್ನಡಕವಿತೆ #ಕನ್ನಡಬರಹ #kannadapoem #kannada #mycomposition #philosophy

#ಕನ್ನಡ #ಕನ್ನಡಕವಿತೆ #ಕನ್ನಡಬರಹ #kannadapoem #kannada #mycomposition #philosophy

c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

ಇಬ್ಬನಿ🌨

ಗಾಳಿಯೊಳಗೆ ನೀರೊ, ನೀರೊಳಗೆ ಗಾಳಿಯೊ
ಮುಂಜಾನೆಯ ನೋಟಕೆ ಹಾಕಿದ ಪರದೆ
ಅದಾವ ಜಾದೂಗಾರನ ಸೆಲೆಯೊ,ಕಲೆಯೊ
ಹೊಂಗಿರಣದ ಸುಳಿವಿಲ್ಲ ಸಂಚಾರ ಸಾಗಿದೆ (೧)

ಮೈ ಕೊರೆಯೊ ತಂಪು ಮೈಗೆ ತಾಗುತಿರಲು
ಜಡನಿದ್ದೆಗು ಕುತೂಹಲಕು ಜಗಳಾಟ
ಪರದೆಯೊಳು ನುಸುಳಿ ಮುನ್ನುಗ್ಗುತಿರಲು
ನಿಸರ್ಗದ ಅರಮನೆಯದೆ ಕಣ್ಣೋಟ         (೨)

ಮರ ಹೂಬಳ್ಳಿಗೆ ಸೊಗಸಾಗಿ ಆವರಿಸಿ
ಬಲೆ ಬೀಸುತಿಹೆ ನಿತ್ಯ ನಿಸರ್ಗಕೆ
ಕೋಗಿಲೆ ಗುಂಪಲಿ ನನ ಧ್ವನಿಗೂಡಿಸಿ
ಹಾಡುವೆ ರಾಗತಾಳವು ಇನ್ನೇತಕೆ               (೩)

ಉಲ್ಲಾಸವ ಎರವಲು ಕೊಡೆಯಾ
ಇಬ್ಬನಿಯೇ ನಾ ನಿನಗೆ ಆಭಾರಿ
ನನ್ನೊಡನೆ ಒಪ್ಪಂದ ಮಾಡುವೆಯಾ
ನಾನುಳಿಯುವೆ ಎಂದೆಂದಿಗೂ ಸಂಚಾರಿ    (೪) #ಕನ್ನಡ #ಕನ್ನಡಕವನ #ಕವಿಹೖದಯ #ಇಬ್ಬನಿ #ಮುಂಜಾನೆ #kannadapoem #foggymorning #mycomposition

#ಕನ್ನಡ #ಕನ್ನಡಕವನ #ಕವಿಹೖದಯ #ಇಬ್ಬನಿ #ಮುಂಜಾನೆ #kannadapoem #foggymorning #mycomposition

c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

ಜಲಪಾತದ ಅಡಿಯಲ್ಲಿ😍
 
ಕಣಿವೆಯ ಇಳಿಜಾರಿನಲಿ ನಿನ ಬಳುಕಾಟ ನೋಡಲು
ಸಾಲಾಗಿ ನಿಂತಿವೆ ಮೇಘಧೂತರ ಹಿಂಡು
ಕಾರ್ಮೋಡ ಕವಿದು ವರುಣ ಬಂದಾದರೂ 
ಹೆಜ್ಜೆಹಾಕುತಿಲ್ಲ ಅವು ನಿನ ವೈಯಾರವ ಕಂಡು (೧)

ಬಾನಿಂದ ಧರೆಗಿಳಿದು ನೀ ಧುಮ್ಮಿಕ್ಕಿ ಬರುತಿರೆ
ಏರಿಳಿತ ಅನುಭವಿಸುವುದೆನ್ನ ಉಸಿರಾಟ
ಝುಳುಝುಳು ಶಬ್ದವೆ ಶೖಂಗಾರ ಗೀತೆಯಾಗಿರೆ 
ಕೇಳುವರಾರು ನನ್ನ ತೊಳಲಾಟ                     (೨)

ನಿತ್ಯ ನಿನ ಸ್ಪರ್ಶಿಸುವ ಆ ಹಾಸುಗಲ್ಲು
ಪೋಣಿಸುತಿದೆ ಅಂದದ ಹನಿಮುತ್ತು
ಇಬ್ಬನಿಯ ಮೂಲಕ ನೀ ತಂಗಾಳಿಯ ತರುತಿರಲು
ಸೊಗಸಾದ ಸಂಜೆಗೆ ಈ ಕಣ್ಣು ಕಾದಿತ್ತು            (೩)

                 ಶಿವಪುಷ್ಪ ಸಂಜಾತ✊ #ಕನ್ನಡ #ಕನ್ನಡಕವಿತೆ #ಕನ್ನಡಕವನ #ಜಲಪಾತ #ನಿಸರ್ಗ #kannadapoem #nature #falls #feelings

#ಕನ್ನಡ #ಕನ್ನಡಕವಿತೆ #ಕನ್ನಡಕವನ #ಜಲಪಾತ #ನಿಸರ್ಗ #kannadapoem #Nature #Falls #feelings

c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

#OpenPoetry     ಹೀಗೊಂದು ಪ್ರಾರ್ಥನೆ🙏

ರವಿಯೇ ಆಗಸವ ತೊರೆದಂತಿದೆ
ಧರಣಿಗೆ ಹೊಂಗಿರಣ ಮತ್ತೆ ಬರುವುದೇ?
ಗೂಡೊಂದು ಕಳಚಿ, ಬೀಡೊಂದು ಮಡಚಿ
ಬಿದ್ದಾಗಲೂ ಮಳೆಯು ನಿಲ್ಲಲಾರದೇ?

ತಿಂಗಳ ಹಿಂದೆ, ನಮ್ಮ ಕಣ್ಣ ಮುಂದೆ
ಭುವಿಯ ದಾಹದ ಸಂದೇಶ, ಇಂದ್ರಗೆ ಹೋಗಿದೆ
ನದಿಯುಕ್ಕಿ ಹರಿದು, ತನ್ನದಾರಿಯ ತೊರೆದು
ಇಂದು ಮನೆಹೊಕ್ಕರು, ಪ್ರವಾಹ ಕುಂದಲಾರದೇ?

ನಡುಬೀದಿಯ ಜಲಪಾತ, ಬಿರುಕುಗಳ ಪ್ರಪಾತ
ಜಲಾಶಯ ಉಕ್ಕುತ್ತಿದೆ ಒಳಹರಿವು ತಡಿಲಾರದೆ
ಇಳೆ ಮೇಲಿನ ಪೈರು,ಒಲೆ ಮೇಲಿನ ಸಾರು
ಕೈಗೆಟಕುತಿಲ್ಲ ಇದಕೆ ನ್ಯಾಯ ದೊರಕದೇ?

ದೈವ ನ್ಯಾಯಾಲಯದಿ, ಸರ್ವಾನುಮತದಿ
ಮೊಕದ್ದಮೆ ಹೂಡಿ ವಾದ ಮಂಡಿಸಲಾಗದೇ?
ವರುಣನ ರಂಪಾಟಕೆ, ಕರುಣೆಯಿರದ ಮನಕೆ
ಜಾನುವಾರಗಳು  ಬಳಲುತಿವೆ ತಪ್ಪು ಮಾಡದೇ

ವರುಣನ ಅಳುವೋ, ಆಡಂಬರದ ನಗುವೋ
ನೊಂದ ಒಂದಿನಿತು ಮನಕೆ ತಿಳಿಯದಾಗಿದೆ
ಸೋತು ಶರಣಾಗಿ, ಬೇಡುವೆವು ತಲೆಬಾಗಿ
ಇನ್ನಷ್ಟು ಅಗಲಿಕೆಯ ಸಹಿಸಲಾಗದೆ🙏

ಶಿವಪುಷ್ಪ ಸಂಜಾತ✊ #ಕನ್ನಡ #ಕನ್ನಡಕವಿತೆ #ಕನ್ನಡಕವನ #ಕನ್ನಡಕವಿ #ಪ್ರವಾಹ #ಉತ್ತರಕರ್ನಾಟಕ #Kannadapoem #floods

#ಕನ್ನಡ #ಕನ್ನಡಕವಿತೆ #ಕನ್ನಡಕವನ #ಕನ್ನಡಕವಿ #ಪ್ರವಾಹ #ಉತ್ತರಕರ್ನಾಟಕ #kannadapoem #floods #OpenPoetry

c916f01a6d3cbb18d7ef7e582a18e657

🌻ಶಿವಪುಷ್ಪ ಸಂಜಾತ✊

#OpenPoetry    ಆ ದಿನ (ಭಾಗ ೨)
ಗುಂಪಲಿ ಒಬ್ಬಳಿದ್ದಳಾಕೆ
ಇರಲಿಲ್ಲ ನನ್ನಷ್ಟು ಎತ್ತರ
ಕಣ್ಣು ಕಣ್ಣು ಸೆಳೆದವು
ಒಳಗೊಳಗೆ ಮಾತಾಡಿದೆ ಹೋಗಿ ಹತ್ತಿರ

ಕಲ್ಪನೆಯ ಹಾದಿಯಲಿ ಗಿರಿಯ
ತುದಿಯೇರಿದ್ದೆ ನಾ ಮುಂಗಡ
ಅದೇಕೋ ತಡೆಲಾರದೆ
ಮಾತಾಡಬೇಕೆಂದೆ ಅವಳ ಸಂಗಡ

ಜೋರಾಯಿತು ಮಳೆರಾಯನ ಆರ್ಭಟ
ಕಾಲ್ಕಿತ್ತೆವು ಬಂಡೆಯ ಕಡೆಗೆ
ಕೊಂಚ ನೋಡಿದಳು ಅತ್ತಿತ್ತ
ಬಂದಳು ನಮ್ಮೆಡೆಗೆ ಅವರೊಟ್ಟಿಗೆ

ಲಜ್ಜೆಬಿಟ್ಟು ಶುರುಮಾಡಿದೆ ಮಾತು
ಸಿಹಿಮಾತಿಗೆ ಮಾತು ಬಳೆದೇ ಬಿಟ್ಟಿತಲ್ಲ
ತುಂಬಾ ಒಳ್ಳೆ ಗುಣದವಳು
ಆದರೆ ಕನ್ನಡತಿಯಲ್ಲ

ಪಟಾಕಿ ಅವಳು ಮಾತಲಿ
ಗಮನ ಸೆಳೆಯೋ ಸ್ಫುರದ್ರೂಪಿ
ಸ್ನೇಹಿತೆಯಾದಳು ಅಂದಿಂದ 
ಈ ಕವನದ, ನಿಜಜೀವನದ ವಾಸ್ತುಶಿಲ್ಪಿ #ಕನ್ನೃ #ಕನ್ನಡಕವಿತೆ #ಕನ್ನಡಕವನ #ಒಲವಗೀತೆ #ಮುಂಗಾರಿನದಿನ #kannadpoem #lovepoetry

#ಕನ್ನೃ #ಕನ್ನಡಕವಿತೆ #ಕನ್ನಡಕವನ #ಒಲವಗೀತೆ #ಮುಂಗಾರಿನದಿನ #kannadpoem #lovepoetry #OpenPoetry

loader
Home
Explore
Events
Notification
Profile