Nojoto: Largest Storytelling Platform
shamna5654039728668
  • 293Stories
  • 27Followers
  • 3.6KLove
    12.3KViews

Shamna

Writing and Reading is my hobby

https://instagram.com/hrudaya_sparshi

  • Popular
  • Latest
  • Video
d26926ef05407cdc07ef87a7ae6115de

Shamna

d26926ef05407cdc07ef87a7ae6115de

Shamna

ಮನದ ಮಾತುಗಳ
ಹೇಳಲೇನು..?
ಮನವಿಟ್ಟು ಕೇಳುವೆಯಾ
ನೀನು..?


ಮನದ ಮಾತುಗಳ ಆಲಿಸಲು
ಮನವಿದ್ದರೆ ಸಾಕು
ಹೇಳು ನೀನು ಕೇಳುವೆ ನಾನು..


ಹಲವು ಕಾರಣಗಳು ಜೊತೆ ಸೇರಿ
ಮೂಡಿದೆ ಗೊಂದಲ..
ನಿಖರವಾದ ಮಾತುಗಳ ನೀ
ಅಪೇಕ್ಷಿಸದಿರು..



ಸ್ಪಷ್ಟವೋ ಅಸ್ಪಷ್ಟವೋ
ಆಲಿಸುವ ಮನವಿದ್ದರೆ ಸಾಲದೇ?
ಕೊಂಕು ಮಾತುಗಳ ಬಿಂಕವೇಕೆ..?

©Shamna
d26926ef05407cdc07ef87a7ae6115de

Shamna

ಮರುಭೂಮಿಯ ಗುಲಾಬಿ

ಪ್ರೀತಿಯ ನೋವಿನಲಿ
ಬೆಂದ ಹೃದಯವಿದು
ತ್ಯಾಗದ ಪರಿಕಲ್ಪನೆಗೆ
ಪ್ರತಿಬಿಂಬವಿದು

ಪರಿಶುದ್ಧ ಪ್ರೇಮದ 
ಪರಿಯಿದು
ಕಣ್ಣೀರ ಧಾರೆಯಲ್ಲಿ
ಅರಳಿದ ಹೂವಿದು

ಒಂಟಿ ಹೃದಯದ
ವೇದನೆಯಿದು
ಬಂಜರು ಭೂಮಿಯಲ್ಲಿ
ಅರಳಿ ನಿಂತ ಒಂಟಿ ಪುಷ್ಪವಿದು

ಮರಣ ಖಾಯಿಲೆಗೆ
ರಾಮಬಾಣವಿದು
ಹುಡುಕಿ ಹೋದವರ 
ಮರಣ ಪಾಶವಿದು

ಹೆಣ್ಣೊಬ್ಬಳ ತ್ಯಾಗದ
ಪರಿಣಾಮವಿದು
ಪರಿಶುದ್ಧ ಹೃದಯಗಳೆರಡರ
ಸಂಗಮವಿದು..!!

©Shamna #Love
#Story
#fantasy
d26926ef05407cdc07ef87a7ae6115de

Shamna

ಯಾರಿಗೆ ಬೇಕು ಈ
ನೆನಪುಗಳು
ಮಾರಲು ಬಂದಿರುವೆ
ನಾ ನೆನಪುಗಳ ಸಂತೆಗೆ

ಕೊಳ್ಳಲು ಇಷ್ಟವಿದ್ದವರು
ದಯಮಾಡಿ ಎದುರಾಗಿ
ಮನಸುಗಳ ನೋವಿದೆ
ಕನಸುಗಳ ಕಣ್ಣೀರಿಗೆ ..

ಕಾಣದ ಕೈಗಳು ನೀಡಿದ
ಭರವಸೆಯ ಮಾತುಗಳು
ಸುಳ್ಳಾದ ನೆಪವಿದೆ
ಕನಸಿನ ಕನ್ನಡಿ ನುಚ್ಚು
ನೂರಾಗಿ ಕರಗಿ ಹೋದ
ಕನಸುಗಳಿವೆ..

ಮರೆಯಾದ ಸ್ನೇಹದ
ಸುಂದರ ನೆನಪಿದೆ
ಮುರಿದ ಮನಸಿನ 
ನಲ್ಮೆಯ ನಗುವಿಗೆ..

ಯಾರಿಗೆ ಬೇಕು ಈ
ನೆನಪುಗಳು
ಮಾರಲು ಬಂದಿರುವೆ
ನಾ ನೆನಪಿನ ಸಂತೆಗೆ!

©Shamna #Memories
d26926ef05407cdc07ef87a7ae6115de

Shamna

ಕದ್ದು ಕದ್ದು ನೋಡುತಿದೆ ಆ ಕಣ್ಣೋಟ
ಹೃದಯದಿ ಆರಂಭ ನಿನ್ನ ನೋಡುವ ಪರದಾಟ

ಕಣ್ಣಂಚಲ್ಲಿದೆ ಪ್ರೀತಿ
ಜಗ ಮರೆಸುವ ಸ್ವರೂಪ
ನಾಚುವ ಪರಿ ಪ್ರೀತಿಯ ಆಲಾಪ
ರೆಪ್ಪೆಯ ಜೊತೆ ಸೇರಿ
ಪ್ರೀತಿಯ ಸಲ್ಲಾಪ

ಕಣ್ಣು ಕಣ್ಣು ಸೇರಲು
ಶುರು ಪ್ರೀತಿ ಕಂಪನ
ಮಾತಾಯಿತು ಮೌನ
ಮನ ಮಾಡಿತು ಒಲವ ಧ್ಯಾನ

ಕಾಡಿಗೆ ಕಣ್ಣು ನೀಡಿತು
ಒಲವ ಕರೆಯೋಲೆ
ಮನದ ಮಾತನು ಕಣ್ಣಲೇ
ಹೇಳೇ ನೀ ಬಾಲೆ...

©Shamna
d26926ef05407cdc07ef87a7ae6115de

Shamna

ಹನಿಯಾಗಿ ಜಿನುಗಿ
ಕೆನ್ನೆ ಮೇಲಿನಿಂದ ಜಾರುತಿರುವ
ಕಣ್ಣೀರ ಕುರುಹೂ ಕಾಣಿಸದು
ಮುಗಿಲ ಹನಿಗಳ ಧಾರೆಯಲಿ ಒಂದಾಗಿ

ಭಾರವಾದ ಉಸಿರಿನ ಸದ್ದು
ಹೊರ ಬೀಳುತ್ತಿಲ್ಲ
ಹನಿಗಳ ಚಟಪಟ ಕಲರವದಲಿ ಬೆರೆತು

ತಣ್ಣನೆಯ ತಂಗಾಳಿ
ತಡೆದು ನಿಲ್ಲಿಸಿದೆ ದೇಹದ
ಬಿಸಿ ಇನ್ನೊಬ್ಬರಿಗೆ ತಿಳಿಯದಂತೆ!

ಕುಳಿತಲ್ಲೇ ಸ್ತಬ್ಧವಾಗಿರೋ
ಮನಸ್ಸಿಗೆ ಯಾವುದರ ಪರಿವಿಲ್ಲದೆ
ಹೊರ ಹಾಕುತ್ತಿದೆ ಕಂಬನಿ
ಯಾರಿಗೂ ತಿಳಿಯದು ಎಂಬ ಧೈರ್ಯದಿ

ನೋಡುತ್ತಿರುವ ಜನ
ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ
ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ

ಅವರಿಗೇನು ತಿಳಿದಿದೆ..?
ನನ್ನ ಪಾಲಿಗೆ ವರ್ಷಧಾರೆ
ನೆನೆದು ಸಂಭ್ರಮಿಸುವ ಸುಖವಲ್ಲವೆಂದು?!

©Shamna
d26926ef05407cdc07ef87a7ae6115de

Shamna

ಬರೆಯದ ನೂರು ಕವಿತೆಗಳು
ಮನದೊಳಗೆ..
ಬರೆಯುವೆನೆಂದರೆ ಎತ್ತಲೋ ಹೊರಟಿವೆ
ಪದಗಳ ಮೆರವಣಿಗೆ..

ನೂರಾರು ಕವಿತೆಗಳ ಬರೆಯಬೇಕೆಂಬಾಸೆ
ಆದರೆ ಶಬ್ದಗಳ ಕೊರತೆ..
ಈ ಮೌನ ಮರೆಯಲಾಗದ ಕವನ
ಮಾತು, ಬರೆದು ಮರೆತು ಬಿಡುವ ಸಂಭ್ರಮ

ಅಂತರಂಗದ ಭಾಷೆ ಅಕ್ಷರದ ರೂಪದಲಿ
ಬಿಳಿ ಹಾಳೆಗಳ ಮೇಲೆ ಬೀಳಲಾರವು 
ತುಸು ಕೋಪ ಬೇಸರ ಮನದಲಿ
ಲೇಖನಿಯೂ ವಹಿಸಿದೆ ಮೌನವನು..

ಉತ್ತರವೆ ಸಿಗದಂಥ ಪ್ರಶ್ನೆಗಳು ಹಲವಾರು
ಪ್ರತಿದಿನವು ಕೈಬೀಸಿ ಕರೆಯುತಿಹ ಭಾವಗಳು
ಬರೆಯಲಾಗದೆ ಕುಳಿತು ಚಡಪಡಿಸುತ್ತಿರುವೆ
ಭಾವನೆಯ ಪಯಣದಲಿ ಮೌನ ವಹಿಸಿ..

©Shamna
d26926ef05407cdc07ef87a7ae6115de

Shamna

ಕಣ್ಣ ಕುಡಿಯಂಚಿನಲಿ 
ಕಿರುನಗುವೊಂದು ಮೂಡಿದೆ
ನನ್ನ ಬಾಳ ಬೆಳದಿಂಗಳ 
ಬಾನಿನಂಗಳದಿ ಚುಕ್ಕಿ ನೀನಾಗಿರುವೆ

ಪುಟ್ಟ ಕಂಗಳಲೇನೋ
ಅದು ಪ್ರೀತಿಯ ಧಾರೆ
ಅಸ್ಪಷ್ಟ ಕಲ್ಪನೆಗೆ ನಿಜ ರೂಪ
ನೀ ತಂದೆ..

ನಿನ್ನ ಯೋಚನೆಯಲ್ಲೇ
ಆರಂಭ ನನ್ನ ದಿನ
ಬಾಳಿನ ಕಥೆಗೆ ನೀನೇ ಮುನ್ನುಡಿ
ಅನುರಾಗ ಮಂದಿರದಿ
ನಿನ್ನದೇ ಪ್ರತಿಬಿಂಬವಿದೆ..

ನನ್ನೆಲ್ಲಾ ಯೋಚನೆಯಲೂ
ನೀನೇ ಸುಳಿದಾಡುತಿರುವೆ
ಸೂಚನೆಯೇ ನೀಡದೆ
ಮನವ ಕದ್ದೊಯ್ದಿರುವೆ

ರಸ ಸಾಗರದಲಿ ಒಲವ 
ಕಮಲ ಅರಳಿ ನಿಂತಿದೆ
ಮುದ್ದು ಮನಸಿನ ಮುಗ್ಧ
ಪ್ರೇಮಕೆ ನಾ ವಶವಾಗಿಹೆ..

©Shamna
d26926ef05407cdc07ef87a7ae6115de

Shamna

ಓ ಹೃದಯಾ.. ಓ ಹೃದಯಾ..
ಯಾಕೆ ಸೊರಗಿರುವೆ?
ಮಾತಿನ ಮಹಲಿಗೆ ಬೀಗವ ಜಡಿದು
ಮೌನವ ತಳೆದಿರುವೆ..!

ಮಾತಿಗೂ ಮೌನಕೂ 
ನೋವಿನ ಲೇಪನ ತೇಯ್ದು
ಎಲ್ಲಿ ನಡೆದಿರುವೆ..?

ನೋವಲಿ ಬೆಂದಿರೋ ಭಾವ
ಕಣ್ಣೀರ ಪಾಲಾಗಿದೆ ಜೀವ
ಅಳುತಿದೆ ಮನವೂ ನೋವ ಧರಿಸಿ
ನಗುತಲಿದೆ ಅಧರವೂ ಮೌನ ವಹಿಸಿ

©Shamna
d26926ef05407cdc07ef87a7ae6115de

Shamna

ಬೆಳದಿಂಗಳ ರಾತ್ರಿಯಲ್ಲಿ 
ನಿನ್ನದೇ ನೆನಪಿನಲ್ಲಿ ಬರೆದೆ ಈ ಕವನ

ಹರೆಯದ ಹೊಸ ಆಸೆಯ 
ಬಿಸಿ ಮಾಡುವ ಸಮಯ 
ಇರಬಾರದೇ ಇಲ್ಲಿ ನೀನು 
ನಿಜ ಮಾಡಲು ಈ ಭ್ರಮೆಯ..?

ನಗ್ನ ಮೌನವಿದು ಒಲವ ಮಂದಾರ
ನಿರೀಕ್ಷೆಯ ನೋವದು ಒಲವಲ್ಲಿ ನಿರಂತರ

ಅನಾಮಿಕ ಭಾವವಿದು ಬಯಸುತಿದೆ ಹೆಸರು
ಹೆಸರಿನ ಬಂಧನಕ್ಕೆ..
ನಿಲ್ಲುವುದೇ ಭಾವದ ಉಸಿರು..?

©Shamna
loader
Home
Explore
Events
Notification
Profile