Nojoto: Largest Storytelling Platform
harishkaje6423
  • 13Stories
  • 21Followers
  • 109Love
    50Views

Harish Kaje

https://youtube.com/channel/UCas7Gxk-1ondZTtmd9be3Ng

  • Popular
  • Latest
  • Video
d46fac11ed20b5473b1a11f3ee002079

Harish Kaje

#ಅಂತರಾಳ

#ಅಂತರಾಳ #Poetry

d46fac11ed20b5473b1a11f3ee002079

Harish Kaje

ಮೌನಧಾರೆಯ ಪರದೆ ಎಳೆದಾಗಿದೆ
ಮನಸಿನ ದುಗುಡ ಹೊರ ಹೊಮ್ಮಿದೆ
ಭಾವವದು ನೋವಿನ ರೂಪವಾಗಿದೆ
ಬಾಳಿದು ಕಟುಕರ ಕೈಯ ಕಾವ್ಯವಾಗಿದೆ!!!

d46fac11ed20b5473b1a11f3ee002079

Harish Kaje

ಏನೇ ಕುಳ್ಳಿ 
ಆಡುವೆ ಏಕೆ ಮಳ್ಳಿ ಮಳ್ಳಿ

d46fac11ed20b5473b1a11f3ee002079

Harish Kaje

ಮನದ ಭಾವಗಳು ಅರಳುತಿದೆ 
ಹೂವಿನ ಎಸಳುಗಳು ಅರಳಿದಂತೆ
ರವಿತೇಜನ ಸ್ಪರ್ಶಕ್ಕೊಳಗಾಗಿ
ಶುಭೋದಯ. #ಶುಭೋದಯ

#ಶುಭೋದಯ

d46fac11ed20b5473b1a11f3ee002079

Harish Kaje

ನನ್ನೆದೆ ಮೀಟಿದ ತಂತಿ ನೀನೆ ನೀನೇನಾ
ಅದರೊಳು ಮೂಡಿದ ನಗುವಿನ ಗಾನ ನಿನದೇನಾ
ಆ ಸವಿಗಾನ ನಿನ್ನ ಧ್ವನಿಯದೇನಾ॥ಪ॥

ಸಾಹಿತ್ಯ ಲೋಕದಿ ಪಯಣಿಸುತಿರುವ 
ಈ ಒಂಟಿ ಜೀವಕೆ ಜಂಟಿತನವಾಗಿ
ನೀ ಎನ್ನೆದೆ ಗೂಡಲಿ ಪುಟ್ಟ ಗುಬ್ಬಿಯಾಗಿ
ಹಾಡಿನ ಚಿಲಿಪಿಲಿ ಮೂಡಿಸಿ ನಲಿಸಿದೆಯಾ॥

ಅಲೆಮಾರಿಯಾಗಿ ಅಲೆದಾಡುತ್ತಿದ್ದ ಈ ಜೀವವ
ತಡೆದು ನೀ ಒಲವಿನರಮನೆಯ ತೆರೆದು
ಪ್ರೇಮದಮೃತದ ದೀವಿಗೆ ೦
ಬೆಳಕಿನಾಮೃತವ ಸ್ಫುರಿಸಿ ಬಾಳನ್ನ ಬೆಳಗಿದೆಯಾ॥

ಸಂಚಾರಿಯಾಗಿ ಸಂಚಯಿಸುತ್ತಿದ್ದ ಈ ಭಾವವ
ಕರೆದು ನೀ ನೆಲೆರೂಪವ ನೀಡುತ
ಸಾಹಿತ್ಯದಾಗರವ ಬರಸೆಳೆದು
ಸಾಹಿತ್ಯ ಲೋಕದಿ ಎನ್ನ ನಿಲ್ಲಿಸಿದೆಯಾ॥ #yqಹರಿಸಾಹಿತ್ಯಗಾನ#yqಕಜೆಬರಹ

yqಹರಿಸಾಹಿತ್ಯಗಾನyqಕಜೆಬರಹ

d46fac11ed20b5473b1a11f3ee002079

Harish Kaje

ತಂಗಾಳಿಯ ಜೊತೆಗೆ ಬರುವೆ 
ಕಾಣಲು ನಿನ್ನ ಚೆಲುವನು 
ತಂಪಾಗಿಸುವೆ ನಿನ್ನ ಸುಮವೆ
ಸೇವಿಸಲು ನಿನ್ನ ಘಮಲನು॥

ಸಂಪ್ರೀತಿಯ ಹೊತ್ತು ತರುವೆ
ಸಹೃದಯಕೆ ಮುಡಿದು ಬಿಡಲು
ಸಂಗಾತಿಯ ನೋಡಲೆಂದೇ
ಸಹಗಾತಿಯಾಗುವೆ ಗಾಳಿಗೆ॥

ಸಂಚಾರವ ಬಯಸಿ ನಿಲುವೆ
ನಿನ್ನ ಕಾಣುವ ತವಕದಿಂದ
ಸಹಚಾರನ ನಾನು ಪಡೆವೆ
ನಿನ್ನ ಒಲವಿನ ಉಡುಗೊರೆಯಿಂದ॥
✍ಹರೀಶ್ ಕಜೆ.

©Harish Kaje #yqಅನುರಾಗದಹೊನಲು

yqಅನುರಾಗದಹೊನಲು #Poetry

d46fac11ed20b5473b1a11f3ee002079

Harish Kaje

ಅವಳನು ಕಾಣದ ಲತೆಯಂತೆ 
ಬಳುಕುವ ನೀರಲಿ ಮೀನಂತೆ
ಸರಸದಲಿ ಸಮನಾರಿಲ್ಲ
ವಿರಸದಲಿ ಸಿಹಿಯೆಂದಿಲ್ಲ
ಹೊಂದಾಣಿಕೆಯ ಗುಣವೇ
ಬದುಕಿನ ಮೂಲ ಪ್ರಾಣ॥

ಅವಳ ಕಣ್ಣ ಕಾಂತಿ ಹೊಳೆವ ಮಿಂಚಂತೆ
ಬಾನಲ್ಲಿ ಹೊಳಯುವ ತಾರೆಗಳಂತೆ
ಪ್ರೀತಿಯಲ್ಲಿ ಮೀರಿಸೋರಿಲ್ಲ
ದ್ವೇಷದಲ್ಲಿ ಗೆಲ್ಲೋಕ್ಕಾಗಲ್ಲ
ತಾಳ್ಮೆಯ ಸಹಜತೆಯೇ
ಬದುಕಿಗೆ ಮೂಲ ಆಧಾರ॥ #yqಅಂತರಾಳ

yqಅಂತರಾಳ

d46fac11ed20b5473b1a11f3ee002079

Harish Kaje

ತಾರೆಗಳೇ ತಾರೆಗಳೇ ಬನ್ನಿರಿ ಎನ್ನಯ ಮೈಸಿರಿಗೆ
ಮೇಘಗಳೇ ಮೇಘಗಳೇ ನಿಲ್ಲಿರಿ ಎನ್ನಯ ಮನಸೊಳಗೆ
ಕುಸುಮಗಳೇ ಕುಸುಮಗಳೇ ಅರಳಿರಿ ಎನ್ನಯ ಕನಸೊಳಗೆ! #ಹರೀಶ್ ಕಜೆ

#ಹರೀಶ್ ಕಜೆ

d46fac11ed20b5473b1a11f3ee002079

Harish Kaje

ಮುಂಜಾವಿನ ಹೊನಲಿಗೂ 
ಬೇಕಂತೆ ಬಿಸಿ ಬಿಸಿ ಕಾಫಿ
ಈ ಚಳಿ ಗಾಳಿ ಬೀಸುವ ಕಾಲದಿ
ಶುಭೋದಯ. #ಶುಭೋದಯ

#ಶುಭೋದಯ

d46fac11ed20b5473b1a11f3ee002079

Harish Kaje

ಕೊಂಚ ಮಾತಾಡು ಮುನಿಸ ತೊರೆದು
ವಿರಸ ಮರೆತು ನೀ ಎನ್ನೊಡನೆ 
ಇನಿಯನೇ ದೂರ ದೂರ ಸಾಗದಿರು
ನೀ ದೂರ ತೀರ
ಬಾ ನೀನು ಎನ್ನ ಹತ್ತಿರ
ಮುನಿಸಿನ ಕೈಗೆ ಕೊಡಬೇಡ ನಿನ ಬುದ್ಧಿಯ
ತಡೆದು ಕೋ ಕೊಂಚ ತಾಳ್ಮೆಯ
ಉಳಿಯಲಿ ಉಳಿದು ಬೆಳೆಯಲೀ
ಈ ನಮ್ಮ ನಂಟು. #ಹರೀಶ್ ಕಜೆ

#ಹರೀಶ್ ಕಜೆ

loader
Home
Explore
Events
Notification
Profile