Nojoto: Largest Storytelling Platform
anuradhamangavat3857
  • 16Stories
  • 342Followers
  • 375Love
    0Views

Anuradha Mangavati

  • Popular
  • Latest
  • Video
e337c97c710668da967b67581265e767

Anuradha Mangavati

No one is Loyal in this World,,,and
Dont want be Loyal in this selfish World,,,

©Anuradha Mangavati #Smile
e337c97c710668da967b67581265e767

Anuradha Mangavati

ಮನಸ್ಸಿನ ಮೌನ ನೋಡಿ ನೋಡಿ!!!
ಕಣ್ಣುಗಳು ಕೂಡ  ಮಾತು ಮರೆತು ಹೋಯಿತಲ್ಲ,,,
ನಾಡಿಯ ಮಿಡಿತವೇ  ನುಡಿ ಆಯಿತಲ್ಲ,,,
ಸಮಯ ಕೂಡ ನಿಂತು  ಹೋಯಿತಲ್ಲ,,,???
ಉತ್ತರಗಳಿಲ್ಲದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದವಲ್ಲ?????


Anuradha......💔 #Silent
e337c97c710668da967b67581265e767

Anuradha Mangavati

ಕಾಣದ ಕಾಡಿನ ಕತ್ತಲೆಯ ದಾರಿಯಲ್ಲಿ,,,,
ಕಾಣದ  ಕೈಗಳಿಂದ , ನನ್ನ  ಕಣ್ಣು ಕಟ್ಟಿ ,,,,,
ನಡೆ ಮುಂದೆ ಎಂದು  ಸವಾಲು ಹಾಕಬೇಡ!!!!
ಕೈ ಕಟ್ಟಿ , ಕೇಕೆ ಹಾಕಿ ನಗಬೇಡ!!!!
 ಕರುಣೆಯಿಲ್ಲದ ಕರ್ಮವೇ!!!


,,,Anuradha,,,💔 #feelings
e337c97c710668da967b67581265e767

Anuradha Mangavati

ಪಿಸುಮಾತಿನಲಿ  ಆನೆತೂಕದ ಮಾತು ಆಡಿ,,,
 ಸ್ಥಭ್ದಮನಸ್ಸನ್ನು ಕಲಕಿ ,,,,
ಕಣ್ಣೀರ ನದಿಯಲ್ಲಿ ದೂಡಿ ಹೋಗಬೇಡಿ,,,
ನಾ ; ಈಜಲು ಬಲ್ಲೆ,,,ಮುಳುಗಿಸಲು ಬಲ್ಲೆ!!!
ನನ್ನ ಸಹನೆಯ ಆಳಕ್ಕೂ ಮಿತಿ ಇದೆ!!!!!



,,,Anuradha...💔 #allalone
e337c97c710668da967b67581265e767

Anuradha Mangavati

'ಯಾರ ಕರುಣೆಗೂ ಬೆರಗಬೇಡ;
ಯಾರ ಕಣ್ಣೀರಿಗೂ ಕರಗಬೇಡ;
ನಿನ್ನ ಹೃದಯಸಾಕ್ಷಿಗೆ ಧ್ರೋಹ ಮಾಡಬೇಡ",,,,,




,,,,Anuradha,,,,❤

e337c97c710668da967b67581265e767

Anuradha Mangavati

ದೇವರಿಲ್ಲದ ಗುಡಿಗೊಮ್ಮೆ;
ಜನವಿಲ್ಲದ ಜಾತ್ರೆಗೆ ಹೋಗಿ;
ಅರಿಕೆಯಿಂದ ಹರಿಕೆ ಸಲ್ಲಿಸಿ;
ಪಡೆದ  ಮಹಾಪ್ರಸಾದವೇ ಹಣೆಬರಹ!!!!
 


,,,,,,Anuradha #sunlight
e337c97c710668da967b67581265e767

Anuradha Mangavati

ಎಲ್ಲೆ ಇಲ್ಲದ ಆನಂದದ ಸಾಗರದಲ್ಲಿ;
ಅಂತ್ಯ ವಿಲ್ಲದ ಪ್ರೀತಿಯ ಹೆದ್ದಾರಿ ಹುಡುಕುತ್ತ;
ವಿಶ್ವಾಸವೆಂಬ ದೋಣಿಯಲ್ಲಿ ಅಸೆ ಎಂಬ ಹುಟ್ಟಿನೊಂದಿಗೆ,,, ಹೊರಟ ಪುಟ್ಟ ಹೃದಯಕ್ಕೆ 
ಭಾವನೆಗಳೇ  ಕವಲು,  ಅಲೆಗಳೇ ಕಿರುನಗೆ,,
ತನ್ಮಯತೆಯಲ್ಲಿ ತಲ್ಲೀನಗೊಂಡ ಪುಟ್ಟ ಹೃದಯಕ್ಕೆ,,,,
ಏನೋ ಹುಡುಕಾಟ ???
 


,,,,Anuradha

e337c97c710668da967b67581265e767

Anuradha Mangavati

ನೆಲ ನೋಡುವ ಕಣ್ಣುಗಳಿಂದ,
ನೀಡಿದ ಮೌನದ ಉತ್ತರಗಳು,
ವರ್ತಮಾನದ ಮೂಕಪ್ರೇಕ್ಷಕ ಮತ್ತು ಭವಿಷ್ಯದ ನಿರಾಸೆಯ ನಿಟ್ಟುಸಿರಾಗಬೇಕೆ?????
ಮೌನವನ್ನು ಮಾತಾಗಿಸು ಮುಗ್ಧ ಮನಸೆ!!!!


...Anuradha... #LookingDeep
e337c97c710668da967b67581265e767

Anuradha Mangavati

ಮರಳಿ  ಮತ್ತೊಮ್ಮೆ ಕಣ್ಮುಚ್ಛಿ ಕನಸು ಪೂರ್ತಿಗೊಳಿಸುವ ಆಸೆ 
ಕಾರಣ  ಇಷ್ಟೆ,,, ಅಲ್ಲಿ ...ಮನದಾಸೆಯಂತೆ ಹಾರಾಡುತ್ತಿದ್ದೆ...
ಮನಬಂದಷ್ಟು ಕುಣಿಯುತ್ತಿದ್ದೆ...
ಮನಸ್ಸಿಚ್ಛೆಯಂತೆ ಈಜಾಡುತ್ತಿದ್ದೆ...
ಒಲವಿನ ಹಾಡನ್ನು ಒಲವಿಗೋಸ್ಕರ ಹಾಡುತ್ತಿದ್ದೆ...
ಅಂದದ ಅರಮನೆಯ ಚಂದದ ರಾಣಿ ಯಾಗಿದ್ದೆ...
ನಗುಮೊಗದ ಒಡತಿಯಾಗಿದ್ದೆ...
ಆ  ಕನಸು ಕಳೆದುಹೋದ ಕಾಲ  ಅಷ್ಟೆ ,,,
ಅಸ್ಥಿತ್ವದ ಹುಡುಕಾಟ , ಸಮಯದ ವೇಗದಲ್ಲಿ ಎಲ್ಲ ಮರೆಯಾಗಿದೆ.



                        ...Anuradha ....❤ #sapne
e337c97c710668da967b67581265e767

Anuradha Mangavati

ಬೇಗ ಬಾ ಗಣಪ ...
ನೋಡು ನಿನ್ನ ಭಕ್ತರ ಭರವಸೆಯ ಕಣ್ಣುಗಳನ್ನು,
ಭಕ್ತಿಯ ಪರಮಾವದಿಯನ್ನು,,
ಈಡೇರಿಸು ಎಲ್ಲರ ಆಸೆಗಳನ್ನು,,
ನಿವಾರಿಸು ಎಲ್ಲರ ಸಂಕಷ್ಟ ಗಳನ್ನು,,
ಮನ್ನಿಸು ಎಲ್ಲರ ತಪ್ಪುಗಳನ್ನು,,
ದಯಪಾಲಿಸು ನಿನ್ನ ಅನುಗ್ರಹ ವನ್ನು ,,
ಸಲ್ಲಿಸುವೆ ನಿನಗೆ ಶತಕೋಟಿ ನಮಸ್ಕಾರಗಳನ್ನು..
ಇಂತಿ ನಿನ್ನ.......


.....Anuradha Mangavati...

loader
Home
Explore
Events
Notification
Profile