Nojoto: Largest Storytelling Platform
kushalshettykous6583
  • 45Stories
  • 229Followers
  • 470Love
    392Views

Kushal Shetty Koushik

ಕನ್ನಡಿಗ ಜೈ ಕರ್ನಾಟಕ ಮಾತೇ ... writer of poems songs 🎀🎀🎀

  • Popular
  • Latest
  • Video
f46ede1597d36536223c379215a99b6f

Kushal Shetty Koushik

White ಬರೆದದ್ದು ಎಷ್ಟೋ ನಿನಗೆ ತಿಳಿಸದ ಸಾಲುಗಳನ್ನ,
 ಕಳೆದದ್ದು ಎಷ್ಟೋ ಹಿಂಬಾರದ ಸಮಯವನ್ನು,
 ನಡೆದದ್ದು ಎಷ್ಟೋ ಮುಂದೆ ಸಾಗದ ದಾರಿಯನ್ನ :
 ಕಂಡಿದ್ದು ಎಷ್ಟೋ ಮರೆಯಲಾಗದ ಕನಸುಗಳನ್ನು,
ಈಜುತ್ತಾ ಈಜುತ್ತಾ ತಿಳಿದದ್ದು ನಾ ಸೇರಲಾರೆ ದಡವನ್ನು,
 ಕಡೆಗೆ ಉಳಿಸಿ ಹೋದದ್ದು ನಾ ಬದಲಾಯಿಸದ ನನ್ನನ್ನ!!!.

©Kushal Shetty Koushik #good_night
f46ede1597d36536223c379215a99b6f

Kushal Shetty Koushik

White Do u Know who are u ?
If i am the night sky,
U were the moon 🌕
If i am the ocean,
U are the waves 🌊
If i am a garden,
U was the rose 🌹
If i am a flower,
U were the fragrance ❄️
If i am a star,
U are my light☄️
If i am a tree,
U are my roots ✨
If i am a universe,
U are my darkness 🖤

©Kushal Shetty Koushik #International_Day_Of_Peace
f46ede1597d36536223c379215a99b6f

Kushal Shetty Koushik

White ಮನದಾಳದ  ಮುದ್ದಿನ ಮೌನವು ನೀನು, 
ಹೇಳಲಾಗದ ಸಾಲುಗಳ ಪದವು ನೀನು,
ನಾ ಎಂದಿಗೂ ತುಂಬದ ಬಿಟ್ಟ ಸ್ಥಳ ನೀನು,
 ಏಕೆ ಹೀಗೆ ನನ್ನೊಳಗೆ ಪ್ರಶ್ನೆಯಾಗಿ ಉಳಿದೆ ನೀನು,
 ಒಮ್ಮೆಯಾದರೂ ಉತ್ತರವಾಗಿ ಬದಲಾಗಬಾರದೇನು?

©Kushal Shetty Koushik #sad_shayari
f46ede1597d36536223c379215a99b6f

Kushal Shetty Koushik

White ಪ್ರೀತಿಯ ಬಡಿತಕೆ ಹೃದಯವು ನೀನಾಗಿರು,
 ಹೂ ಅರಳುವಾಗ ಶಬ್ದವು ನೀನಾಗಿರು,
 ತಂಗಾಳಿಯ ತಂಪು ನೀನಾಗಿರು,
 ಸಂಗೀತ ಸ್ವರಗಳ ಇಂಪು ನೀನಾಗಿರು,
 ನಗುವ ಚಂದಿರನ ಬೆಳದಿಂಗಳು ನೀನಾಗಿರು,
 ಕಾಮನಬಿಲ್ಲಿನ ಬಣ್ಣವು ನೀನಾಗಿರು,
 ನಾನಿರುವ ಜಗವೆಲ್ಲವೂ ನೀನಾಗಿರು,
 ನಾನೆಂದು  ತಿಳಿದಿರುವ ನನ್ನೊಳಗೂ ನೀನೆ          ಇರು, ಸದಾ ನೆನಪಿಸುತ್ತಿರು.❤️

©Kushal Shetty Koushik
  #llove
f46ede1597d36536223c379215a99b6f

Kushal Shetty Koushik

White someone : wt make's you to write kavana?

Me :  when surface of my heart touched by her emotional wave's word's flow's on paper like water droplet's where mouth is shut but still the voice is loud..

©Kushal Shetty Koushik #sirisha
f46ede1597d36536223c379215a99b6f

Kushal Shetty Koushik

White ಸೂರ್ಯನು ಮುಳುಗಿದ ಚಂದ್ರನು ಬೆಳಗಿದ,
 ಹೂಗಳು ಅರಳಿದವು ಎಲೆಗಳು ಉದುರಿದವು,
 ಮಾಸಗಳು ಕಳೆದವು ಋತುಗಳು ಅಳೆದವು,
 ಪರ್ವತಗಳು ಬಾಗಿದವು ನಕ್ಷತ್ರಗಳು ಚದುರಿದವು,
 ಸಮಯದೊಂದಿಗೆ ಎಲ್ಲವೂ ಸಾಗಿದವು,
 ಆದರೆ ಮನದಾಳವ ಅಪ್ಪಿ ನಿಂತ ಆ ನಿನ್ನ ನೆನಪುಗಳ ಅಪ್ಪುಗೆ,                ಸಮಯದೊಂದಿಗೆ ಸಾಗದೆ ನನ್ನೊಡನೆ ಉಳಿದವು!!

©Kushal Shetty Koushik poetry

poetry #Poetry

f46ede1597d36536223c379215a99b6f

Kushal Shetty Koushik

ನಿನ್ನ ಅರ್ಧ ಚಂದ್ರ ನೋಟಕ್ಕೆ ಧರೆಗಿಳಿದ ಪೂರ್ಣ ಚಂದಿರ, 
 ಆ ಕಮಲದಳದ ನಯನವ ನೋಡಲು ಎಷ್ಟು ಸುಂದರ, 
 ನಲಿಯುವ ಕಣ್ರೆಪ್ಪೆ  ಬಡಿತಕ್ಕೆ ನವಿಲುಗರಿಯೇ ಚಿತ್ತಾರ!        
ಈ ನೇತ್ರಾನಂದವ ವರ್ಣಿಸಲು ಸಿಗುತ್ತಿಲ್ಲ  ಮನ ಓಲಿಸುವ ಆಧಾರ!                                         ಈ ಅವರಣಿಯ ಅತೀಂದ್ರಿಯ ಕ್ಷಣಕ್ಕೆ ನನ್ನ ಕವನದ ಉಪಸಂಹಾರ.

©Kushal Shetty Koushik ಮಿಸ್ಸಿಂಗ್ g

ಮಿಸ್ಸಿಂಗ್ g #Quotes

f46ede1597d36536223c379215a99b6f

Kushal Shetty Koushik

ಕಾಯುತ್ತಿರುವೆ ನೋಡಲು ಆ ನಿನ್ನ ಕಣ್ಣೋಟವ,
 ತಂಗಾಳಿ ಸಹ ಕಾಯುತ್ತಿತ್ತು ನೋಡಲು ಆ  ಬೆಳದಿಂಗಳ ನಗುವ,
 ನಿನ್ನ ಮಾತಿನ ಶಬ್ದಕ್ಕೆ ಹುಟ್ಟಿದ್ದೆ ಸಪ್ತಸ್ವರವಾ?
 ಈ  ಮೋಹಕ ರೂಪದಿಂದ ವರ್ಣಿಸಿದರೇನೋ ಸ್ವರ್ಗವ,
 ಪುಟ್ಟ ಹೃದಯದ ಬೊಗಸೆಯಲಿ ತುಂಬಿಸುವೆ ಪ್ರೀತಿಯ ಸಾಗರವ!
 ಈ ನನ್ನ ಒಲವ ಆಲಿಸು ಅಂಗೈಯಲ್ಲೇ ಸೃಷ್ಟಿಸುವೆ ಆಗಸವ.

©Kushal Shetty Koushik
  #hibiscussabdariffa
f46ede1597d36536223c379215a99b6f

Kushal Shetty Koushik

ಮನಸೋತಿದ್ದು ಅದೇ ಮೊದಲ ಸಾರಿ               ಮನಸೋತಿದ್ದು ಅದೇ ಕೊನೆಯ ಸಾರಿ
 ಆ ನಿನ್ನ ನವಿಲು ಕಣ್ಗಳ ನೋಟಕ್ಕೆ
 ಆ ನಿನ್ನ ಮುಗುಳು ನಗುವಿನ ಶಬ್ದಕ್ಕೆ
 ಕಳೆದು ಹೋದೆ ನಾ ನಿನ್ನಲ್ಲಿ ಹುಡುಕಬೇಕು ನನ್ನನ್ನು ನಾನು ಇನ್ನೆಲ್ಲಿ
 ಎಂದಿಗೂ ಮಾಸದು ಆ ನಿನ್ನ ನೆನಪು ಇದು ಸತ್ಯ🫶
 ಕಾಣುವ ಆಸೆ ನಿನ್ನೊಳಗೆ ನನ್ನ ಪ್ರತಿ ನಿತ್ಯ🤍

©Kushal Shetty Koushik #mountainsnearme love
f46ede1597d36536223c379215a99b6f

Kushal Shetty Koushik

ನಾ ಹಾಡುವ ಹಾಡಿನ ಸ್ವರವಾಗಿರುವೆ
 ನಾ ಬರೆದ ಕವನದ ಪದವಾಗಿರುವೆ
 ನಾ ನುಡಿವಾ ನುಡಿಯ ಶಬ್ದವಾಗಿರುವೆ
 ನಾ ನೋಡುವ ನೋಟವು ನೀನಾಗಿರುವೆ
 ನಾ ಕಳೆವ ಪ್ರತಿ ಕ್ಷಣವು ನೀನನ್ನೊಡವಿರುವೆ
 ನಾ ಹುಡುಕದ ಎಲ್ಲಾ ಗಳಿಗೆಯಲ್ಲೂ ನೀನಿರುವೆ
 ನೀ ನನಗೆ ಅನಿವಾರ್ಯವಾಗುವಾಗ ಎಲ್ಲಿರುವೆ?
 ಮೋಡದ ಹಿಂದೆ ಮರೆಯಾಗುವೆ,  ಗಾಳಿಯೊಡನೆ ಮಾಯವಾಗುವೆ,ಜೇನಿಗೆ ಸಿಹಿಯಾಗುವೆ,ನೆನಪಿಗೆ ನೆರಳಾಗುವೆ,
 ನನಗೂ ತಿಳಿಸದೆ ಈ ಹೃದಯದಿ ಮುದ್ದಾಗುವೆ!

©Kushal Shetty Koushik #Exploration
loader
Home
Explore
Events
Notification
Profile