Find the Latest Status about love story album gaan from top creators only on Nojoto App. Also find trending photos & videos about, love story album gaan.
VIIKAS KUMAR
New Year Resolutions Key benefits/uses of SBL Arsenicum Album Dilution 30 CH: Helps in treating respiratory ailments such as cough, wheezing, and breathing difficulties Useful in treating fever and weakness caused due to infections Provides relief from acidity and indigestion Relieves anxiety and stress related to recurrent health problems Used as a prophylactic (preventive) medicine against coronavirus infections Directions for use: Take 2-3 drops of dilution in 1 teaspoon of water thrice a day or as directed by the physician. ©VIIKAS KUMAR arsenic album 30 ch homeopathy medicine benefits
arsenic album 30 ch homeopathy medicine benefits
read moreYakshitha
ಕನ್ನಡ ಫೀಡ್ ಲೈಬ್ರರಿ ಬರೆಯಿರಿ ಅಧಿಸೂಚನೆ ಪ್ರೊಫೈಲ್ Vijaya Bharathi Romance Classics Thriller 4.7 ಶ್ರಾವಣ ಸಂಜೆ 3 mins 309 Kannada Story : #795 Kannada Story Romance : #95 ಕುಂಭದ್ರೋಣ ರಾತ್ರಿ ಶ್ರಾವಣ ಸಂಜೆ ಮಳೆಗಾಲದ ಆ ಸಂಜೆಯಲ್ಲಿ ಆಫೀಸ್ ನಿಂದ ಮನೆಗೆ ಹೊರಡುವ ಸಮಯಕ್ಕೆ ಸರಿಯಾಗಿ ಆಕಾಶ ದಲ್ಲಿ ದಟ್ಟವಾದ ಕಾರ್ಮೋಡಗಳು ಕವಿದು, ಇನ್ನೊಂದು ಅರೆಕ್ಷಣ ದಲ್ಲಿ ಜೋರಾಗಿ ಮಳೆ ಸುರಿಯಬಹುದೆಂಬ ಸೂಚನೆಯನ್ನು ನೀಡಿದಾಗ, ಸರಸರನೆ ಮನೆಗೆ ಹೊರಟ ಆರಭಿ,ಆಫೀಸಿನಿಂದ ಹೊರಗೆ ಬಂದು ತನ್ನ ಆಕ್ಟವ(activa)ಗಾಡಿಯತ್ತ ದೌಡಾಯಿಸಿದಳು. 'ಸಧ್ಯ,ಮಳೆ ಪ್ರಾರಂಭವಾಗುವ ಮೊದಲು ಮನೆ ಸೇರಿಬಿಡಬೇಕೆಂದು 'ಯೋಚಿಸುತ್ತಾ, ಗಾಡಿ ಸ್ಟಾರ್ಟ್ ಮಾಡಿ, ಆಕ್ಸಿಲರೇಟರ್ ಹೆಚ್ಚಿಸಿದಳು.ಒಂದೆರಡು ಕಿ.ಮೀ. ಸಾಗಿದೆ ನಂತರ ಟಪಟಪನೆ ಶುರುವಾದ ಮಳೆ ಜೋರಾದಾಗ, ವಿಧಿಯಿಲ್ಲದೆ ಒಂದು ಕಡೆ ನಿಂತಳು. ಮಳೆ ನಿಲ್ಲುವುದನ್ನೇ ಕಾಯುತ್ತಿದ್ದ ಅವಳಿಗೆ ನಿರಾಸೆ ಯಾಯಿತು.ಸುಮಾರು ಅರ್ಧ ಗಂಟೆ ಕಳೆದರೂ ,ಮಳೆ ಕಡಿಮೆ ಯಾಗುವ ಸೂಚನೆ ಕಾಣಲಿಲ್ಲ.ಜೊತೆಗೆ ಸುತ್ತಲೂ ಕತ್ತಲೆ ಆವರಿಸತೊಡಗಿತು.ಶ್ರಾವಣದ ಸಂಜೆಯ ಮಳೆ, ಜೋರಾಗುತ್ತದೆಯೇ ವಿನಾ ಕಡಿಮೆ ಯಾಗುವ ಸಂಭವ ಕಡಿಮೆ ಎಂದುಕೊಂಡ ಆರಭಿ,ಮಳೆ ಸ್ವಲ್ಪ ಕಡಿಮೆ ಯಾದಾಗ,ಜರ್ಕಿನ್ ಧರಿಸಿ ಗಾಡಿ ಸ್ಟಾರ್ಟ್ ಮಾಡಿದಳು.ಸುಮಾರು ಎಂಟು ಕಿ.ಮೀ.ದೂರವಿರುವ ಅವಳ ಮನೆ ಸೇರಲು ಕನಿಷ್ಠ ಅರ್ಧ ಗಂಟೆ ಯಾದರೂ ಬೇಕಾಗಿತ್ತು.ಹೀಗಾಗಿ ಮಳೆಯಲ್ಲೇ ಹೊರಟಳು. ನಿಧಾನವಾಗಿ ಗಾಡಿ ಓಡಿಸಿಕೊಂಡು, ಅಂತೂ ಇಂತೂ ಮನೆ ಸೇರುವ ವೇಳೆಗೆ ಅವಳಿಗೆ ಸಾಕಾಗಿ ಹೋಗಿತ್ತು.ಗಾಡಿ ನಿಲ್ಲಿಸಿ,ಮನೆಯ ಕೀ ತೆಗೆದು ,ಒಳಗೆ ಸೇರಿದಾಗ 'ಅಬ್ಬಾ,ಸುರಕ್ಷಿತ ವಾಗಿ ಮನೆ ಸೇರಿದನಲ್ಲ', ಎಂದು ಕೊಂಡು ನಿಟ್ಟುಸಿರು ಬಿಟ್ಟಳು.ಸುತ್ತಲೂ ಕತ್ತಲು ಇದ್ದುದರಿಂದ ಸ್ವಿಚ್ ಅದುಮಿದಳು.ಲೈಟ್ ಹತ್ತದಿದ್ದುದರಿಂದ, ಅವಳಿಗೆ ಕರೆಂಟ್ ಇಲ್ಲದಿರುವುದು ತಿಳಿಯಿತು.ಯು.ಪಿ.ಎಸ್.ಕಡೆ ಗಮನ ಹರಿದು, ಅದರ ಸ್ವಿಚ್ ಆನ್ ಮಾಡಲು ಅತ್ತ ಕಡೆ ನಡೆದಾಗ, ಯುಪಿ.ಎಸ್.ರಿಪೇರಿಗೆ ಹೋಗಿರುವುದು ನೆನಪಿಗೆ ಬಂತು.ಮನೆಯ ಹೊರಗಡೆ ಗುಡುಗು ಸಿಡಿಲು ಮಿಂಚು ಗಳಿಂದ ಕೂಡಿದ ಕುಂಭದ್ರೋಣ ಮಳೆ ,ಒಳಗಡೆ ಕರೆಂಟ್ ಇಲ್ಲದೆ ಕಗ್ಗತ್ತಲು.ಕಡೆಗೆ ಅವಳು ಕತ್ತಲಲ್ಲೇ ತಡಕಾಡಿ ಟಾರ್ಚಗಾಗಿ ಹುಡುಕಾಟ ನಡೆಸಿ, ಟಾರ್ಚ್ ತಂದು ಆನ್ ಮಾಡಿದಾಗ, ಅದೂ ಕೂಡ ಹತ್ತಲಿಲ್ಲ.ಬಹುಶಹ ಟಾರ್ಚ್ ನ ಶೆಲ್ ಗಳು ವೀಕ್ ಆಗಿರಬಹುದು.ಇತ್ತೀಚೆಗೆ ಯು.ಪಿ.ಎಸ್ ಮನೆಗೆ ಬಂದ ಮೇಲೆ ಟಾರ್ಚ್ ಅಥವಾ, ಮೋಂಬತ್ತಿ ಯ ಕಡೆ ಗಮನ ಕೊಟ್ಟಿರಲಿಲ್ಲ.ಹೀಗಾಗಿ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಕೊಂಡ ಆರಭಿ,ಮೊಬೈಲ್ ಬೆಳಕಿನ ಸಹಾಯದಿಂದ ಅಡುಗೆ ಮನೆಗೆ ಹೋಗಿ ಮೋಂಬತ್ತಿ ಗಾಗಿ ಹುಡುಕಾಡಿದಾಗ, ಕಡೆಗೂ ಒಂದು ಸಣ್ಣ ಮೋಂಬತ್ತಿ ಸಿಕ್ಕಿದಾಗ, ಅವಳಿಗೆ ನೀರಲ್ಲಿ ಮುಳುಗುತ್ತಿರುವವನಿಗೆ ಆಸರೆಯಾಗಿ ಹುಲ್ಲುಕಡ್ಡಿಸಿಕ್ಕಿದಂತಾಯಿತು.ಮೋಂಬತ್ತಿ ಹಚ್ಚಿ ಅಲ್ಲಿಯೇ ಇದ್ದ ಟೀಪಾಯಿ ಮೇಲೆ ಅದನ್ನು ನಿಲ್ಲಿಸಿ ,ಒದ್ದೆ ಬಟ್ಟೆ ಗಳನ್ನು ಬದಲಾಯಿಸಿ ಕೊಂಡು, ಒಂದು ಕಪ್ ಕಾಫಿ ಬೆರೆಸಿಕೊಂಡು ಉಸ್ಸಪ್ಪಾ ಎನ್ನುತ್ತಾ ಸೋಫಾದಲ್ಲಿ ಕುಳಿತಳು. ಇದ್ದಕ್ಕಿದ್ದಂತೆ ಅವಳ ಗಮನ ಮನೆಯ ಬಾಗಿಲ ಕಡೆ ಹರಿದು, ಅನುಮಾನವಾಗಿ, ಕತ್ತಲಲ್ಲೇ ಹೆದರುತ್ತಾ ಬಾಗಿಲ ಹತ್ತಿರ ಹೋಗಿ, ಅದು ಲಾಕ್ ಆಗಿರುವುದನ್ನು ದೃಢ ಪಡಿಸಿಕೊಂಡು ಕುಳಿತಳು.ಮೋಂಬತ್ತಿ ಹಾಗೂ ಮೊಬೈಲ್ ನ ಬೆಳಕಿನ ಸಹಾಯದಿಂದ ಕಾಫಿ ಕುಡಿಯುತ್ತಿದ್ದಾಗ , ಅವಳಿಗೆ ಇಂದು ತನ್ನ ಗಂಡ ಅರುಣ್ ಕೆಲಸದ ಮೇಲೆ ಹೈದರಾಬಾದ್ ಗೆ ಹೋಗಿರುವುದು ನೆನಪಾಯಿತು."ಅಯ್ಯೋ, ಇಂದು ಅರುಣ್ ಬೇರೆ ಊರಲ್ಲಿಲ್ಲ,ಮಳೆಯ ಅಬ್ಬರ ಬೇರೆ, ಒಂದು ವೇಳೆ ಕರೆಂಟ್ ಬರದಿದ್ದರೆ?,"ಅರುಣ್ ಇರದ ಈ ರಾತ್ರಿ ಯನ್ನು ಕಲ್ಪಿಸಿಕೊಂಡು ಸಣ್ಣ ಗೆ ನಡುಗತೊಡಗಿದಳು.ಅವಳನ್ನು ಮೆಲ್ಲ ಮೆಲ್ಲನೆ ಭಯ ಆವರಿಸತೊಡಗಿತು. ಹಾಗೇ ಕಣ್ಮುಚ್ಚಿ ಕುಳಿತಾಗ, ಅವಳಿಗೆ ಅರುಣ್ ನ ನೆನಪಾಯಿತು.ಅವನೊಂದಿಗಾದರೂ ಮಾತನಾಡುತ್ತಾ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನ್ನುತ್ತಾ, ಮೊಬೈಲ್ ಕೈಗೆತ್ತಿಕೊಂಡಾಗ,ಅದರ ಚಾರ್ಜ್ ಕಡಿಮೆಯಾಗಿದ್ದರಿಂದ ಆಫ್ ಆಗಿ ಹೋಯ್ತು. ಸಿಟ್ಟಿನಿಂದ ಅದನ್ನು ದೂರ ತಳ್ಳಿದಳು.ಕ್ಯಾಂಡಲ್ ಮೆಲ್ಲ ಮೆಲ್ಲನೆ ಕರೆಗುತ್ತಿತ್ತು.ಇನ್ನೂ ಕರೆಂಟ್ ಬಂದಿಲ್ಲ,ಮಳೆ ಸುರಿಯುತ್ತಲೇ ಇರುವುದನ್ನು ಇತ್ತು.ಒಂದು ವೇಳೆ ಕರೆಂಟ್ ಬರುವುದು ಇನ್ನೂ ತಡವಾದರೆ ಮುಂದೇನು? ಅವಳಿಗೆ ಯೋಚನೆ ಯಾಯಿತು.ಸೀದಾ ದೇವರ ಕೋಣೆಗೆ ಹೋಗಿ ಎರಡು ಕಂಬಗಳಿಗೆ ಭರ್ತಿ ಎಣ್ಣೆ ತುಂಬಿಸಿ, ದೇವರ ದೀಪಗಳನ್ನು ಬೆಳಗಿಸಿ , ದೇವರಲ್ಲಿ "ಬೇಗ ಕರೆಂಟ್ಬರಲಪ್ಪ"ಎಂದುಮೊರೆಯಿಟ್ಟಳು.ಇಷ್ಟೆಲ್ಲಾ ಫಜೀತಿ ಗಳಲ್ಲಿ ಆರಭಿಗೆ ಹೊಟ್ಟೆ ಯ ಕಡೆ ಗಮನ ಹೋಗಿರಲಿಲ್ಲ.ಆದರೆ ಈಗ ಅವಳ ಹೊಟ್ಟೆ ಚುರುಗುಟ್ಟತೊಡಗಿದಾಗ,ಅಡುಗೆ ಮನೆಗೆ ಹೋಗಿಬಿಸ್ಕತ್ ಬ್ರೆಡ್ ಗಳನ್ನು ತಿಂದು, ನೀರು ಕುಡಿದುತನ್ನ ರೂಂ ಗೆ ಹೋಗಿ, ಮುಸುಕು ಬೀರಿ ಮಲಗಿದಳು. ಅವಳ ಮನಸ್ಸು ದೇಹಗಳು ಅರುಣ್ ನನ್ನು ಬಯಸಿತ್ತು.ಮದುವೆಯಾಗಿ ಇನ್ನೂ ಆರು ತಿಂಗಳು ಕಳೆದಿದ್ದು,ಇದೇ ಮೊದಲ ಬಾರಿಗೆ ಅರುಣ್ ಕೆಲಸದ ಮೇಲೆ ಹೈದರಾಬಾದ್ ಗೆ ಹೋಗಿ ದ್ದ.ಸಹಜವಾಗಿ ಆರಭಿಗೆ ಗಂಡನ ನೆನಪಾಗಿ ,ಅವನ ನೆನಪುಗಳಲ್ಲಿ ಮುಳುಗಿ, ಕನಸಿನ ಲೋಕಕ್ಕೆ ಜಾರಿದಳು. ಒಂದರ್ಧ ಗಂಟೆ ಕಳೆದಿರಬೇಕು,ನಿದ್ರೆಗೆ ಜಾರುತ್ತಿದ್ದ ಆರಭಿಗೆ ಬಾಗಿಲು "ಧಬ ಧಬ "ಬಡಿಯುವ ಶಬ್ದ ಕೇಳಿಸಿ, ಕನಸಿನ ಲೋಕದಿಂದ ವಾಸ್ತವ ಕ್ಕೆ ಬಂದು ಕಣ್ಣು ಬಿಟ್ಟಳು.ಇದು ಕನಸೋ ನನಸೋ ಎಂಬ ಅನುಮಾನದಲ್ಲಿ ಮೈಯ್ಯೆಲ್ಲಾ ಕಿವಿಯಾಗಿಸಿಕೊಂಡು ಸುತ್ತಲೂ ಕಣ್ಣಾಡಿಸಿದಳು.ಕ್ಯಾಂಡಲ್ ದೀಪ ಆಫ್ ಆಗಿತ್ತು.ದೇವರ ಮನೆಯ ದೀಪ ಬೆಳಗುತ್ತಿತ್ತು ಹಾಳಾದ್ದು ಕರೆಂಟ್ಇನ್ನೂಬಂದಿರಲಿಲ್ಲ. ಕೆ.ಇ.ಬಿ.ಯವರಿಗೆ ಶಾಪ ಹಾಕಿ ದಳು.ಸ್ವಲ್ಪ ಸಮಯದ ನಂತರ ಮತ್ತೆ ಬಾಗಿಲು ಬಡಿಯುವ ಶಬ್ದ ಕೇಳಿದಾಗ, ಹೆದರಿಕೆಯಿಂದ ನಡುಗತೊಡಗಿದಳು. ಯಾರೆಂದು ಕೇಳಲು ಬಾಯಿ ಬರುತ್ತಿಲ್ಲ,ನೋಡಲು ಧೈರ್ಯ ವಾಗುತ್ತಿಲ್ಲ.ಏನುಮಾಡಬೇಕೆಂದು ತಿಳಿಯದೆಮತ್ತೆ ಹೊದ್ದಿಗೆ ಹೊದ್ದು ಮುಸುಕು ಬೀರಿ ಮಲಗಿದಳು. ಆದರೆ,ಬಾಗಿಲು ಬಡಿಯುವ ಶಬ್ದ ಕೇಳುತ್ತಲೇ ಇತ್ತು.ಎದ್ದು ಹೋಗಿ ನೋಡಲು ಭಯ, ಹಾಗೆ ಮಲಗೋಣವೆಂದರೆ ನಿದ್ರೆ ಬರುತ್ತಿಲ್ಲ.ಸ್ವಲ್ಪ ಹೊತ್ತು ಬಾಗಿಲು ಬಡಿಯುವ ಶಬ್ದ ನಿಂತಾಗ, ಅವಳಿಗೆ ಸಮಾಧಾನ ವಾಯಿತು.ಆದರೆ ಮಳೆಯ ಶಬ್ದ ನಿರಂತರವಾಗಿ ತ್ತು.ಇನ್ನೂ ಕರೆಂಟ್ ಬಂದಿಲ್ಲ.ಅವಳಿಗೆ ಚಿಂತೆ ಕಾಡಿತು.ಮತ್ತೆ ಬಾಗಿಲು ಬಡಿಯುವ ಶಬ್ದ ಕೇಳಿದಾಗ, ಕಿಟಕಿಯಲ್ಲಿ ಇಣುಕಿ ನೋಡಿದಳು.ಅವಳಿಗೆ ಯಾರೂ ಕಾಣಲಿಲ್ಲ.ದೇವರ ಕೋಣೆಗೆ ಹೋಗಿ ಮತ್ತಷ್ಟು ಎಣ್ಣೆ ತುಂಬಿಸಿ ದೀಪ ಆರದಂತೆ ಮಾಡಿದಳು.ತುಂಬಾ ಹೆದರಿ ಕೆಯಾಗಿ ಮುಸುಕೆಳೆದುಗಟ್ಟಿಯಾಗಿ ಕಣ್ಣು ಮುಚ್ಚಿ ಮಲಗಿದಳು.ಯಾರಾದರೂ ಇರಲಿ ಈ ಅವೇಳೆಯಲ್ಲಿ , ಕರೆಂಟ್ ಇಲ್ಲದೆ ಒಬ್ಬಳೇ ಇರುವಾಗ ಬಾಗಿಲು ತೆರೆಯುವುದು ಸರಿಯಿಲ್ಲ ವೆಂದು ಅವಳು ಗಟ್ಟಿಯಾಗಿ ನಿರ್ಧಾರ ಮಾಡಿ,ನಿದ್ರೆಗೆ ಜಾರಿದಳು. ಹೊರಗಿನಿಂದ ಬಾಗಿಲು ಬಡಿದು ಬಡಿದು ಸಾಕಾಗಿ ಹೋಗಿದೆ ಅರುಣ್ ಹುಯ್ಯುವ ಮಳೆಯಲ್ಲೇ ಮನೆಯ ಮುಂದೆ ಯೇ ಬಾಗಿಲಿಗೆ ಒರಗಿ ನಿದ್ದೆ ಹೋದ. ಅಂತೂ ಇಂತೂ ರಾತ್ರಿ ಕಳೆದು ಬೆಳಗಾಯಿತು. ನಿದ್ರೆ ಯಿಂದ ಎಚ್ಚರ ಗೊಂಡಾಗ,ಮಳೆನಿಂತಿರುವುದನ್ನು ಕಂಡು ಆರಭಿ ಸಮಾಧಾನದ ನಿಟ್ಟುಸಿರು ಬಿಟ್ಟು, ಹಾಸಿಗೆಯಿಂದ ಎದ್ದಳು.ರಂಗೋಲಿ ಹಾಕುವುದಕ್ಕೆ ಮನೆಯ ಮುಂಬಾಗಿಲನ್ನು ತೆಗೆದಾಗ,.ಹೊಸಿಲ ಬಳಿ ಕಾಲು ಚಾಚಿ ಮಲಗಿರುವ ಅರುಣ್ ನ ಕಂಡುಆಶ್ಚರ್ಯ ವಾಯಿತು.ಅಂದರೆ ರಾತ್ರಿ ಬಾಗಿಲು ಬಡಿದಿದ್ದು ಅರುಣ್ ಎಂದು ಗೊತ್ತಾದಾಗ, ಅವಳಿಗೆ ಪಶ್ಚಾತ್ತಾಪ ವಾಯಿತು.ಅವನನ್ನು ಮುಟ್ಟಿ ಎಬ್ಬಿಸಿ ಸಂಜೆ ಯಿಂದ ತಾನು ಮಳೆಯಿಂದ ತಾನು ತಲ್ಲಣಗೊಂಡಿದ್ದನ್ನು ಗಂಡನಿಗೆ ವಿವರಿಸಿ,"ಸಾರಿ" ಎಂದು ಕೇಳಿದರೆ,."ಹವಾಮಾನ ವೈಪರೀತ್ಯ ದಿಂದ ತನ್ನ ಫ್ಲೈಟ್ ಕ್ಯಾನ್ಸಲ್ ಆಗಿ,ಮಳೆಯ ಕಾರಣದಿಂದ ಮನೆಗೆ ಬರುವುದು ತಡವಾಯಿತು,ನೀನು ರಾತ್ರಿ ತೆಗೆದು ಕೊಂಡ ನಿರ್ಧಾರ ಸರಿಯಾಗಿಯೇ ಇದೆ "ಎಂದು ಹೇಳುತ್ತಾ ಹೆಂಡತಿ ಯನ್ನು ಸಮಾಧಾನ ಪಡಿಸುತ್ತಾ ಅರುಣ್ ಒಳಗೆ ಬಂದ. ಶ್ರಾವಣ ಸಂಜೆಯ ಕುಂಭದ್ರೋಣ ಮಳೆಯ ಈ ಅನುಭವ ಅವರಿಬ್ಬರ ಜೀವನದ ಮರೆಯಲಾಗದ ನೆನಪುಗಳಾದವು. ©Yakshitha love story horror story
love story horror story
read more