Nojoto: Largest Storytelling Platform

Best malenadu Shayari, Status, Quotes, Stories

Find the Best malenadu Shayari, Status, Quotes from top creators only on Nojoto App. Also find trending photos & videos about arkesta ke mal hai, male matlab kya hota hai, me tiene mal letra, me tiene mal, nahailu kawna sabun se mal,

  • 3 Followers
  • 6 Stories

ashwini

Dr Anapu

ಮಲೆನಾಡು ಶಿರಸಿಯ ಬಗ್ಗೆ #sirsidiaries #malenadu #kannadaquotes #kavanagalu #lovequotes #inspirationalquotes

read more
ನಮ್ಮ ಶಿರಸಿ

ಬನ್ನಿರೋ ನೋಡಬನ್ನಿರಿ ಶಿರಸಿಯ
ಮಲೆನಾಡ ಹೆಬ್ಬಾಗಿಲ ತೋರಣ
ಪಡೆಯಿರೋ ತಾಯಿ ಮಾರಿಕಾಂಬೆಯ ದರುಶನ (ಪ)

ಮುಗಿಲ ಚುಂಬಿಸೋ ಕಾನನ
ಜುಳು ಜಲಧಾರೆಯ ಸಿಂಚನ
ಪಾವನವಾಯಿತು ಜೀವನ
ಶಿರಸಿಯೇ ನನ್ನ ಬೃಂದಾವನ(೧)

ಕಲೆಗಳ ತವರು ಸಂಸ್ಕೃತಿ ಸೆರಗು
ಹೃದಯವಂತರ ನೆಲೆವೀಡು
ಸಹಸ್ರ ಲಿಂಗನ ನೆಲೆ ನೋಡು
ಯಾಣದ ಚಾರಣ ನೀ ಮಾಡು(೨)

ಯಕ್ಷಗಾನ ಭರತನಾಟ್ಯ ಸಂಗೀತದ ಈ ನಾಡು
ಕವಿ ದಿ. ಶ್ರೀ ರಮೇಶ ಹೆಗಡೆಯ ಪುಣ್ಯದ ನಾಡು
ಬನವಾಸಿ ಮಧುಕೇಶ್ವರನ ಕದಂಬ ನಾಡು
ಇದು ನಮ್ಮ ಹೆಮ್ಮೆಯ ಶಿರಸಿ ನೋಡು (೩)

ಸೋಂದಾ ಮಠದ ಸಿರಿ ನೋಡು
ಎಲ್ಲರನ್ನೂ ಪ್ರೀತಿಸುವ ಪುಣ್ಯ ನಾಡು
ಜಲಪಾತಗಳ ಸ್ವರ್ಗ ಕಾಣು
ಇದು ನಮ್ಮ ಉತ್ತರ ಕನ್ನಡ ನೋಡು (೪)

ತಾಯಿ ಮಾರಿಕಾಂಬೆಯ ತಿಲಕದಂತೆ ಹೊಳೆವ
ನಮ್ಮ  ಈ ಶಿರಸಿ ಕಾಣು.
ಕೈ ಮುಗಿದು ನೀ ಪಾದಾರ್ಪಣೆ ಮಾಡು

 ಮಲೆನಾಡು ಶಿರಸಿಯ ಬಗ್ಗೆ
#sirsidiaries #malenadu #kannadaquotes #kavanagalu #lovequotes #inspirationalquotes

Dr Anapu

ಮಲೆನಾಡು #inspirationalquotes #lovequotes #NatureLove #rain #malenadu #frindship #YourQuoteAndMine Collaborating with Aravinda Np Sonu Collaborating with Ramesh Hadapad

read more
ಹೊಳೆ ಹಳ್ಳ ಝರಿಯ ನೋಡು
ಬಾನಾಡಿಗಳ ಕೂಗು ಕೇಳು
ಭೂ ಲೋಕ ಸ್ವರ್ಗ ಇದುವೇ ನೋಡು
ಮುಂದಿನ ಪೀಳಿಗೆಗೆ ಕಾಪಾಡಿಕೊಂಡು ಹೋಗು ಮಲೆನಾಡು #inspirationalquotes #lovequotes #naturelove #rain #malenadu #frindship  #YourQuoteAndMine
Collaborating with Aravinda Np Sonu
Collaborating with Ramesh Hadapad

Dr Anapu

ಮುಗಿಲುಗಪ್ಪು ಮುಸುಕು ಹೊದ್ದು 
ಮಿಣುಕು ಹುಳಗಳ ಮಿನುಗು ನೋಡು 
ಜೀರುಂಡೆಗಳ ಗುನುಗು ಕೇಳು 
ಇದು ಮಲೆನಾಡ ಕಡು ರಾತ್ರಿ ನೋಡು 

ಅನಪು ಮಲೆನಾಡು #inspirationalquotes #lovequotes #naturelove #rain #malenadu #frindship

ರಮೇಶ್ ಹಡಪದ

ಮಲೆನಾಡು #inspirationalquotes #lovequotes #NatureLove #rain #malenadu #frindship #YourQuoteAndMine Collaborating with Aravinda Np Sonu Collaborating with Ramesh Hadapad Collaborating with Aravinda Np Sonu

read more
ಬಾಗಿ ತೂಗುವ ಭತ್ತದ ಗದ್ದೆಗಳು
ಯಾಲಕ್ಕಿ ಬಾಳೆಯ ತೋಟಗಳು
ಬಾಯಿಗೆ ಚಪ್ಪರಿಸಲು ಸಿಗುವ ಹಲಸಿ ಹಣ್ಣುಗಳು
ಇವೆಲ್ಲ ಮಲೆನಾಡಿನ ಹೆಗ್ಗುರುತುಗಳು ಮಲೆನಾಡು #inspirationalquotes #lovequotes #naturelove #rain #malenadu #frindship  #YourQuoteAndMine
Collaborating with Aravinda Np Sonu
Collaborating with Ramesh Hadapad
Collaborating with Aravinda Np Sonu

ರಮೇಶ್ ಹಡಪದ

ಮಲೆನಾಡು #inspirationalquotes #lovequotes #NatureLove #rain #malenadu #frindship #YourQuoteAndMine Collaborating with Aravinda Np Sonu

read more
ಮುಗಿಲು ಮುತ್ತಿಕ್ಕುವ ಕಾಡುಗಳು
ಇಳಿಯನ್ನ ಮುತ್ತಿಕ್ಕುವ ಮೋಡಗಳು
ಭುವಿ ಮೇಲಿನ ಸ್ವರ್ಗಕ್ಕೆ ದಾರಿ ಕಲ್ಪಿಸುವ ತಿರುವುಗಳು
ಕಾಲಿಗಂಟಿ ರಕ್ತಹೀರುವ ಜಿಗಣಿಗಳು
ಅರಿವಿಗೆ ತರುತ್ತವೆ ಇವೆಲ್ಲ 
ಮಲೆನಾಡಿನ  ಲಕ್ಷಣಗಳು ಮಲೆನಾಡು #inspirationalquotes #lovequotes #naturelove #rain #malenadu #frindship  #YourQuoteAndMine
Collaborating with Aravinda Np Sonu


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile