Nojoto: Largest Storytelling Platform

Best dpcherie Shayari, Status, Quotes, Stories

Find the Best dpcherie Shayari, Status, Quotes from top creators only on Nojoto App. Also find trending photos & videos about love poems for her from the heart, long i love you quotes for her, love quotes in hindi for her, love quotes that will make her cry, love lines for her in hindi,

  • 2 Followers
  • 391 Stories

Rinku__singer09

🥺🥺🥺🥺🥺🥺🥺💔💔💔💔💔... . . . #dpcherie #oggyolly #Videos

read more

d.p cherie

ಆಕೆಯ ನಗು... #dpcherie #yqjogi_kannada

read more
ಆಕೆಯ ಸಿಡಿಮಿಡಿಯುವ ಮುಖದ ಹಿಂದೆ,
ಒಂದು ಮುದ್ದಾದ ನಗುವಿದೆ...
ಆ ಮುದ್ದು ನಗೆಯ ಕಾಣುವವರು, ಅತಿವಿರಳ!!! ಆಕೆಯ ನಗು...
#dpcherie #yqjogi_kannada

d.p cherie

ಹೆಣ್ಣು-ಭಾವನಾಹಕ್ಕಿ... #dpcherie #ಹೆಣ್ಣು #ಹೆಣ್ಣುಜಗದಕಣ್ಣು #ನನ್ನ_ಬರಹ #yqjogi_kannada #ಕನ್ನಡಬರಹ #ಕನ್ನಡ_ಬರಹಗಳು

read more
ಹೆಣ್ಣಲ್ಲಿನ ಭಾವನಾಹಕ್ಕಿ ಗರಿಗೆದರಿದರೆ!
ಆಗಸದೆತ್ತರ ಹಾರಬಲ್ಲದು...
ತನ್ನದೇ ಸುಂದರ ಗೂಡು ಕಟ್ಟಿಕೊಳ್ಳಬಹುದು!
ಅಥವಾ,,
ಮಿಕ್ಕೆಲ್ಲ ಹಕ್ಕಿಗಳನ್ನು ಬದಿಗಿರಿಸಿ,
ಒಬ್ಬಂಟಿಯಾನ ನಡೆಸಬಲ್ಲದು!!!

ಹೆಣ್ಣು-ಭಾವನೆಗಳನ್ನು ಬಂಧಿಸಿ ನಸುನಗಬಲ್ಲಳು...!
ಅವುಗಳನ್ನು ಹೊರಚೆಲ್ಲಿ, ನಿರಾಯಾಸವಾಗಿ ಜೀವಿಸಲೂ ಬಲ್ಲಳು... ಹೆಣ್ಣು-ಭಾವನಾಹಕ್ಕಿ...
#dpcherie #ಹೆಣ್ಣು #ಹೆಣ್ಣುಜಗದಕಣ್ಣು #ನನ್ನ_ಬರಹ #yqjogi_kannada #ಕನ್ನಡಬರಹ #ಕನ್ನಡ_ಬರಹಗಳು

d.p cherie

ನೋವಿನ ಕುಲುಮೆಯ ಶಿಕ್ಷೆ ನೀಡದಿರು ಒಲವೆ... #dpcherie #ಪ್ರೀತಿ #ಒಲವು #yqkannada

read more
ಸಾಗರದಷ್ಟು ಪ್ರೀತಿಯನ್ನು,
ನನ್ನೆದೆಯ ಚಿಪ್ಪಿನೊಳಗೆ ಬಂಧಿಸಿ,
ಬೆಲೆಗೆ ನಿಲುಕದ ಮುತ್ತಾಗಿಸಿ ಅರ್ಪಿಸುವೆ...
ಸ್ವೀಕರಿಸುವೆಯ ಒಲವೆ?!

ನೀ ಸ್ವೀಕರಿಸಿದರೆ ಪ್ರೀತಿಯ ಚಿಲುಮೆ...
ನಿರಾಕರಣೆ ಹೊತ್ತಿಸುವುದು ನನ್ನಲ್ಲಿ,
ಎಂದೂ ಮಾಯದ ನೋವಿನ ಕುಲುಮೆ... ನೋವಿನ ಕುಲುಮೆಯ ಶಿಕ್ಷೆ ನೀಡದಿರು ಒಲವೆ...
#dpcherie #ಪ್ರೀತಿ #ಒಲವು #yqkannada

d.p cherie

ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಕನ್ನಡಿಗರೇ💐 #ಕನ್ನಡತಿ #ಕನ್ನಡ #ಕನ್ನಡರಾಜ್ಯೋತ್ಸವ #dpcherie #yqjogi_kannada

read more
ಕನ್ನಡ ಎಂದೊಡೆ ಮೈನವೀರೇಳುವುದು...
ಅದಾವುದೋ ದೇಶದಲ್ಲಿ, ಕನ್ನಡ ಎಂಬ ಶಬ್ಧ ಕೇಳಿದೊಡೆ
ಕಿವಿ ನಿಮಿರುವುದು...
ನಮ್ಮ ಕನ್ನಡ ನಮ್ಮ ಹೆಮ್ಮೆ ಎಂದು ನುಡಿಯಲು,
ಮನ ಹಾತೊರೆವುದು...
ಪರಪಂಚದ ಮೂಲೆ ಮೂಲೆಗಳಲ್ಲಿ ಪಸರಿಸಿರುವ
ಕನ್ನಡಾಂಬೆಯ ಕೂಸುಗಳಿಗೆ,
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು💐

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ🙏🏼 ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಕನ್ನಡಿಗರೇ💐
#ಕನ್ನಡತಿ #ಕನ್ನಡ #ಕನ್ನಡರಾಜ್ಯೋತ್ಸವ #dpcherie #yqjogi_kannada

d.p cherie

ಹೆಣ್ಣು... ಛಲದ ರೂವಾರಿ! #dpcherie #ಹೆಣ್ಣು #yqjogi_kannada

read more
ಓ ಹೆಣ್ಣೆ,,,
ಮಂಕಾಗಿ ಮೂಲೆಗುಂಪಾಗಿರುವೆ ಏಕೆ!!
ನೀ ಮನಸು ಮಾಡಿದರೆ,
ತಲುಪಲೂ ಬಲ್ಲೆ ಚಂದ್ರಲೋಕಕ್ಕೆ!!

ಗೋಡೆಗಳ ನಡುವಣ ಲೆಕ್ಕಾಚಾರವ ತೊರೆದು,
ಸಮಾಜದ ಅವಹೇಳನಗಳ ಕಿತ್ತೊಗೆದು,,
ಅವರಿವರ ಗಾಳಿಮಾತುಗಳನ್ನು ಬದಿಗಿರಿಸಿ,,

ಝೆಂಕರಿಸುವ ದುಂಬಿಯಾಗು
ಗರಿಗೆದರುವ ನವಿಲಾಗು
ವರ್ಣಪೂರಿತ ಚಿಟ್ಟೆಯಾಗು
ಆಗಸ ಮುಟ್ಟುವ ಪಟವಾಗು
ನಿನಗಿಷ್ಟವಾದ ಪಥದೆಡೆಗೆ ಬೆಂಬಿಡದೆ ಸಾಗು!!

ನಿನಗಲ್ಲದ ಈ ಲೋಕ ಮತ್ತಾರಿಗೆ ಹೆಣ್ಣೆ!!
ಛಲದ ರಥವೇರಿ, ಗೆದ್ದು ತೋರು ಇಡೀ ಜಗವನ್ನೆ....

 ಹೆಣ್ಣು... ಛಲದ ರೂವಾರಿ!
#dpcherie #ಹೆಣ್ಣು #yqjogi_kannada

d.p cherie

ಪ್ರೇಮಿಯಾಗುವುದು, ಸುಲಭದ ಮಾತಲ್ಲ.... #dpcherie #ಪ್ರೇಮಿ #ನನ್ನ_ಬರಹ #ಕನ್ನಡತಿ #yqjogi_kannada

read more
ಆಲೋಚನೆ ಮತ್ತು ಅವಲೋಕನಕ್ಕು ಮೀರಿದ,
ಯಾಗದ ರೂವಾರಿಯೇ, ಪ್ರೇಮಿ.... ಪ್ರೇಮಿಯಾಗುವುದು, ಸುಲಭದ ಮಾತಲ್ಲ....
#dpcherie #ಪ್ರೇಮಿ #ನನ್ನ_ಬರಹ #ಕನ್ನಡತಿ #yqjogi_kannada

d.p cherie

ಪರಿಶುದ್ಧ ಪ್ರೀತಿ ಮತ್ತು ಪ್ರೇಮಿ.... ಅಲ್ಲಲ್ಲಿ ಇರಬಹುದು!! #dpcherie #lovelines #yqkannada #ಕನ್ನಡ #ಪ್ರೇಮಬರಹ #yqjogi_kannada

read more
ಪರಿಸ್ಥಿತಿಯ ಏರಿಳಿತದ ನಡುವೆಯೂ,,,
ಸ್ಥಿರವಾದ ಗೂಡು ಕಟ್ಟಿಕೊಳ್ಳುವುದೇ,
ನಿಜವಾದ ಪ್ರೀತಿ... ಪರಿಶುದ್ಧ ಪ್ರೀತಿ ಮತ್ತು ಪ್ರೇಮಿ.... ಅಲ್ಲಲ್ಲಿ ಇರಬಹುದು!!
#dpcherie #lovelines #yqkannada #ಕನ್ನಡ #ಪ್ರೇಮಬರಹ #yqjogi_kannada

d.p cherie

ನನ್ನ ಅಳಲು..! #dpcherie #yqjogi_kannada #yqkannada #ನಾನುನನ್ನಬರಹ

read more
ನನ್ನೊಳಗಿನ ಹೋರಾಟದ ಗುಟ್ಟು,,,
ನನಗೆ ಮಾತ್ರ ಗೊತ್ತು!!!

ನಾ ಅದನು ಜನರಿಗೆ ಹೇಳಿದರೂ,
ನನ್ನ ಮಾತಷ್ಟೇ ಆಲಿಸುವರೆ ಹೊರತು..
ಅಂತರಾಳದ ಅಳಲು ಕಾಣಲಾರರು!!!

ಅದಕೆ,
ಭಾವನೆಗಳನ್ನು ಬಿಚ್ಚಿಡುವುದನ್ನೇ ಮರೆತಿರುವೆ...
ಯಾರೇನೆ ಹೇಳಿದರು, ನನ್ನ ಉತ್ತರ ಬರಿ ನಗುವೆ»😁 ನನ್ನ ಅಳಲು..!
#dpcherie #yqjogi_kannada #yqkannada #ನಾನುನನ್ನಬರಹ

d.p cherie

ಏನಂತೀಯಾ!! ಚೆಲುವೆ... #dpcherie #yqjogi_kannada #yqkannada #ಚೆಲುವೆ #ಅವಳು

read more
ಆ ಬೆಡಗಿಯ ಕಂಗಳು,,
ಕೋಲ್ಮಿಂಚಿನ ಕಣಜವಿರಬೇಕು!
ಎಲ್ಲೇ ಹೋದರು, ಅವಳನ್ನೇ ತಲುಪುವೆ...
ಅವಳ ನಗು,,
ಚಂದ್ರನ ಬಂಧುವಿರಬೇಕು!!
ಕಂಡಾಗಲೆಲ್ಲ, ಮೂಕವಿಸ್ಮಿತನಾಗುವೆ...
ಆ ನಡೆ,,
ನೈದಿಲೆಯ ಶಾಲೆಯಲ್ಲಿ ಕಲಿತಿರಬೇಕು!!
ಕಂಡೊಡನೆ, ಅವಳನ್ನೇ ಹಿಂಬಾಲಿಸುವೆ...

ಅವಳಂತೂ,,
ದೇವಲೋಕದ ಕಿನ್ನರಿಯೇ ಇರಬೇಕು!!
ನನ್ನೊಡನೆ ಪಯಣಿಸಲು, ಪ್ರಾಣವನ್ನೇ ನೀಡುವೆ!!!

ಏನಂತೀಯಾ!? ಚೆಲುವೆ😉
 ಏನಂತೀಯಾ!!
ಚೆಲುವೆ...
#dpcherie #yqjogi_kannada #yqkannada #ಚೆಲುವೆ #ಅವಳು
loader
Home
Explore
Events
Notification
Profile