Nojoto: Largest Storytelling Platform

Best ಹಕ್ಕಿಯ Shayari, Status, Quotes, Stories

Find the Best ಹಕ್ಕಿಯ Shayari, Status, Quotes from top creators only on Nojoto App. Also find trending photos & videos about ಹಕ್ಕಿಯ ಹೆಸರು, ಹಕ್ಕಿಯ ಗೂಡು, ಹಕ್ಕಿಯ ಹೆಗಲೇರಿ ಬಂದವಗೆ, ಹಕ್ಕಿಯ, ಹಕ್ಕಿಯಂತೆ,

  • 1 Followers
  • 1 Stories
    PopularLatestVideo

Lakumikanda Mukunda

#ಹಕ್ಕಿಯ ಅಂತರಂಗ

read more
'ಹಕ್ಕಿಯ ಅಂತರಂಗ'

ಮೇಲೊಂದು ಹಕ್ಕಿ ಪುಕ್ಕ ಬಿಚ್ಚಿ
ತನ್ನದೆ ಹಾಡು ಹಾಡುತ್ತಿತ್ತು,ಹಾರಾಡುತ್ತಿತ್ತು.!
ಕೆಳಗದರ ಬಿಂಬ ಓಡುತ್ತಿತ್ತು
ನಂಬಿಕೆಯೊಂದ ಹುಡುಕುತ್ತಿತ್ತು,ತಡಕಾಡುತ್ತಿತ್ತು.!

ರೆಕ್ಕೆಯ ಬಲವ ನಂಬಿಕೊಂಡು
ಅಪಾರ ಆಕಾಶದಿ ಸಾಗುತಿತ್ತು,ಹೋಗುತಿತ್ತು.!
ಎದೆಗೂಡಲಿ ಮೊಟ್ಟೆ ಮೂಡಲು
ಚೆಂದ ಗೂಡೊಂದ ಕಟ್ಟುತಿತ್ತು,ಕುಣಿಯುತಿತ್ತು.!

ನೀಲಿ ಗಗನ ಕಪ್ಪಾದ ಮೋಡ
ಮಳೆ ಬರುವ ವ್ಯಾಳೆ ಕಾದಂಗಿತ್ತು,ಹಾಡುತಿತ್ತು.!
ಹಸಿರ ಉಸಿರು ಧರೆಯೊಡಲು ಬಿರಿದು
ಕಸವರ ಕಾವ್ಯವ ಬರೆದಂಗಿತ್ತು ಎದೆ ಬಿರಿದಂಗಿತ್ತು!

ಹಕ್ಕಿಯ ಹಾಡಿಗೆ,ಚಿಕ್ಕಿ ಮೂಡಿಬಂದು
ಚಕ್ಕಂತ ನಕ್ಕು ಮಿನುಗಿ ಮುತ್ತೊಂದ ಇಟ್ಟಂತಿತ್ತು!
ನಾಳೆಯ ನೇಸರನ ಹಾದಿಯ ಕಾಯ್ದು
ಬೆಚ್ಚಗೆ ಗೂಡಲಿ ಲಾಲಿಯ ಹಾಡಿ ತಾ ಮಲಗಿತ್ತು.!

🖋-ಲಕುಮಿಕಂದ ಮುಕುಂದ
ಸಾ-ಮುದೇನೂರ. #ಹಕ್ಕಿಯ ಅಂತರಂಗ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile