Nojoto: Largest Storytelling Platform
    PopularLatestVideo

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಬಾ #ಸಾರಥಿ

read more

ಬಾ ಬಾ ಸಾರಥಿಯೇ
ಭಾವ ಭಾಗೀರಥಿಯೇ
ನನ್ನನ್ನು ಮುನ್ನಡೆಸು
ಅನ್ಯರಿಂದ ವಿಂಗಡಿಸು

ನಾ ಏರಬೇಕು ಆ ಎತ್ತರಕೆ
ಗುರಿಯ ತೋರಲು ಬಾ ಹತ್ತಿರಕೆ
ಸರಿದಾರಿಯನು ತೋರಿಸು
ಕೀರ್ತಿ ಮುಕುಟಕೆನ್ನ ಏರಿಸು

ನನ್ನ ಅಹಮಿಗೆ ಅಂಕುಶ ಹಾಕು
ನನ್ನ ದಾಹಕೆ ಸಂಜೀವಿನಿ ಸಾಕು
ನೀ ತಾ ನನ್ನ ಮುಂದೆ ಸವಾಲ
ಸಾಧಿಸಿಯೇ ತೀರುವೆ ದಣಿಯೊಲ್ಲ

ಬಿಸಿಲಿಗೆ ನಾ ಬತ್ತುವುದಿಲ್ಲ
ಸಿಹಿಗೆ ಮಾತ್ರವೇ ಮುತ್ತುವುದಿಲ್ಲ
ಕಹಿಯನ್ನು ಕುಡಿವೆ ಶಿವನಾಗಿ
ಬರದಲ್ಲು ದುಡಿವೆ ಕೃಷಿಕನಾಗಿ

ನನ್ನೊಳಗೆ ಚಿಮ್ಮಲಿ ಭಾವದೊರತೆ
ನಾನೇರುವೆಡೆ ಬಾರದಿರಲಿ ಕೊರತೆ
ತೊರೆಯಲ್ಲ ನನ್ನ ದೂಷಿಸಿದ ಕಾರಣಕೆ
ಮರೆಯಲ್ಲ ನನ್ನ ಬೆಳೆಸಿದ ಆ ಋಣಕೆ

ಎಲ್ಲರೊಳಗೊಂದಾಗಿ ನಾನು
ಭಿನ್ನವಾಗಿ ಬೆಳೆಯಬೇಕು
ತೃಣವಾದವನು ಅಣು ಅಣುವಾಗಿ
ಬೆಳೆದೆನೆಂಬ ಖ್ಯಾತಿ ನನ್ನದಾಗಬೇಕು.

ಅಮುಭಾವಜೀವಿ  #ಬಾ #ಸಾರಥಿ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile