ಬೇಗ ಸೆರೆಯಾಗೋ, ಭಾರತದ ಚೆಂದುಳ್ಳ ಚೆಲುವ ಚೆಲುವೆಯರಿಗೆ ನಿನ್ನ ಹಾಲಿನಂತ ಬೆಳದಿಂಗಳಿಲ್ಲದೆ ನಿನ್ನ ನೆನಪಲಿ ನೋಯುತಿದ್ದಾರೆ ದಯವಿಟ್ಟು ನಿನ್ನ ಮೊಗದ ವೈಭವ ರೂಪವ ನೋಡುವ ಸೌಭಾಗ್ಯ ತೋರಿಸೆಯಾ... ಜಗತ್ತಿನ ಯಾವುದೇ ಪ್ರೀತಿ ಪ್ರೇಮದಲೂ ನಿನ್ನ ಹೆಸರಿರುವಂತೆ ಮಾಡಿದ ಭಾರತೀಯರ ಮೇಲೆ ಈ ನಿನ್ನ ಹುಸಿ ಕೋಪವೇಕೆ ? ಪ್ರೀತಿಯಲಿ ನಿನಗೆ ಮನಸುಕೊಡೋ ಆ ಪ್ರೇಮಿಗಳ ಕೂಗಾದರೂ ನಿನಗೆ ಕೇಳದೆ ? ದಿನದ ಸಂಪೂರ್ಣ ಸಮಯ ನಿನಗಾಗಿ ಮೀಸಲಿಟ್ಟ ವಿಜ್ಞಾನಿಗಳ ಮನವಾದರೂ ನೀನು ಅರಿಯಾದಾದೆಯ? ಬೇಡುವೆ ಮತ್ತೊಮ್ಮೆ ನೀ ತೋರೋ ನಿನ್ನ ಮೊಗವ ಮೊಗದೊಮ್ಮೆ.. ನೀ ದರುಶನ ನೀಡುವ ದಿನವ ತಿಳಿಸು ಇಡೀ ಭಾರತೀಯರು ನಿನಗೆ ಆರತಿ ಎತ್ತಿ ಪೂಜಿಸುವರೋ.. Still awake? Write to the moon. #dearmoon #latenightquotes #YourQuoteAndMine #yqdvkrddots Collaborating with YourQuote Baba