ನೀನಿರದ ಗಳಿಗೆಯಲಿ ಹೊತ್ತಿಗೂ ಗರ ಬಡಿದಿದೆ ಅದು ಸುಮ್ಮನೆ ಸಾಗದೆ ನೆನಪುಗಳ ಮರುಕಳಿಸುತಿದೆ ಮನದ ತುಂಬ ಮೌನದ ಆಕ್ರಂದನ... ನಿನ್ನ ನೋಟ ಒಡನಾಟ ಅವಳ ಮಾತಿನ ಮುತ್ತಿನೂಟ ಸಿಗದೆ ಕೊರೆಯುವ ಚಳಿ ಚಳಿಯಲೂ ಕಾನನದ ಕಾಳ್ಗಿಚ್ಚಿಗೆ ಸಿಕ್ಕ ಹಕ್ಕಿಯಂತೆ ಹೃದಯ ಬೆಂದು ಹೋಗಿದೆ ಅವಳದೆ ನೆನಪಿನಲಿ.... ಕಮರಿವೆ ಮನದ ಮಾಳಿಗೆಯಲಿ ಮಾರಲಾಗದ ಕನಸುಗಳು ಬಿಕರಿಯಾಗದೆ ಉಳಿದ ಸರಂಜಾಮುಗಳಂತೆ... ಹರಡಿಹೋಗಿವೆ ಅಲ್ಲಲ್ಲಿ ತನ್ನದು ಯಾವುದೆಂದು ಗುರುತಿಸಲಾಗದಂತೆ... ಹೊರಗೆ ಸುರಿಯುವ ಮಳೆಯ ಮನಮೋಹಕ ನರ್ತನ ಒಳಗೆ ಸುಡುವ ತೀರದ ಮನದ ಮುಂದಣ ಕೋರಿಕೆಗಳ ದಹನ ಕಾಯಿಸಿ ಸತಾಯಿಸುತಿಹನು ಕಡು ಪಾಪಿ ಕಾಲ ಸಮಯಸಾಧಕ... #ಕನ್ನಡಕವಿತೆ #ಕನ್ನಡ #ಕನ್ನಡ_ಬರಹಗಳು #yqmandya #yqkannadalove #yqkannadapoems #yqjogi_kannada #yqjogilove